IPL 2022 : ಕ್ವಾಲಿಫೈಯರ್-2 ಮ್ಯಾಚ್ ಮುನ್ನ ಅಪಕಾರಿ ಹೇಳಿಕೆ ನೀಡಿದ RCB ಕ್ಯಾಪ್ಟನ್

ಈ ಪಂದ್ಯವನ್ನು ಆರ್‌ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಲಗ್ಗೆ ಇಟ್ಟಿತ್ತು. ಕ್ವಾಲಿಫೈಯರ್-2ರ ಪಂದ್ಯ ಇಂದು ನಡೆಯಲಿದೆ. ಇಲ್ಲಿ ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಡಿದ್ದು, ಕ್ವಾಲಿಫೈಯರ್ 2 ಪಂದ್ಯವು ಅಹಮದಾಬಾದ್‌ನಲ್ಲಿ ನಡೆಯುವುದರಿಂದ ಆಟಗಾರರು ವಿಮಾನದ ಮೂಲಕ ಪ್ರಯಾಣಿಸಿದ್ದಾರೆ.

Written by - Channabasava A Kashinakunti | Last Updated : May 27, 2022, 05:34 PM IST
  • ಆರ್‌ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಲಗ್ಗೆ ಇಟ್ಟಿತ್ತು
  • ಎಲಿಮಿನೇಟರ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಡಿದ್ದು
  • ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತರಬೇತಿ
IPL 2022 : ಕ್ವಾಲಿಫೈಯರ್-2 ಮ್ಯಾಚ್ ಮುನ್ನ ಅಪಕಾರಿ ಹೇಳಿಕೆ ನೀಡಿದ RCB ಕ್ಯಾಪ್ಟನ್ title=

RCB vs RR : ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದ ನಂತರ ನಮ್ಮ ತಂಡದ ಆಟಗಾರರು ನಿದ್ದೆ ಗೆಟ್ಟಿದ್ದರೆ ಎಂದು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. ಮಂಗಳವಾರ ಆರ್‌ಸಿಬಿ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಡುವಿನ ಈ ಪಂದ್ಯ ನಡೆಯಿತು, ಆದರೆ ಮಳೆಯಿಂದಾಗಿ ಪಂದ್ಯ ತಡವಾಗಿ ಮುಕ್ತಾಯವಾಯಿತು.

ಈ ಪಂದ್ಯವನ್ನು ಆರ್‌ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಲಗ್ಗೆ ಇಟ್ಟಿತ್ತು. ಕ್ವಾಲಿಫೈಯರ್-2ರ ಪಂದ್ಯ ಇಂದು ನಡೆಯಲಿದೆ. ಇಲ್ಲಿ ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಡಿದ್ದು, ಕ್ವಾಲಿಫೈಯರ್ 2 ಪಂದ್ಯವು ಅಹಮದಾಬಾದ್‌ನಲ್ಲಿ ನಡೆಯುವುದರಿಂದ ಆಟಗಾರರು ವಿಮಾನದ ಮೂಲಕ ಪ್ರಯಾಣಿಸಿದ್ದಾರೆ.

ಇದನ್ನೂ ಓದಿ : RR vs RCB, IPL 2022: ‘ರಾಯಲ್’ ಕದನದಲ್ಲಿ ಯಾರಿಗೆ ಫೈನಲ್ ಟಿಕೆಟ್..?

ಆರ್‌ಸಿಬಿಯ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ ಫಾಫ್ ಡು ಪ್ಲೆಸಿಸ್, ಎಲಿಮಿನೇಟರ್ ಪಂದ್ಯ ತಡವಾಗಿ ಮುಗಿದಿದೆ ಮತ್ತು ಇದರಿಂದಾಗಿ ಆಟಗಾರರು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಭಾವನಾತ್ಮಕವಾಗಿ ಒತ್ತಡವನ್ನುಂಟುಮಾಡುತ್ತದೆ ಎಂದು ಹೇಳಿದರು, ನಮ್ಮಲ್ಲಿ ಹೆಚ್ಚಿನವರು ಸಾಕಷ್ಟು ನಿದ್ರೆ ಮಾಡಲು ಸಾಧ್ಯವಾಗಿಲ್ಲ, ಏಕೆಂದರೆ ಆಟವು ತಡವಾಗಿದ್ದರಿಂದ ನಾವು ಸಾಕಷ್ಟು ತಡವಾಗಿ ಮರಳಬೇಕಾಯಿತು ಎಂದು ಹೇಳಿದರು.

ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತರಬೇತಿ!

ಐಪಿಎಲ್‌ನ 2020 ಮತ್ತು 2021 ರ ಸೀಸನ್‌ಗಳಲ್ಲಿ, ಎಲಿಮಿನೇಟರ್ ಪಂದ್ಯದಲ್ಲಿ ಸೋತ ನಂತರ ಆರ್‌ಸಿಬಿ ಪಂದ್ಯಾವಳಿಯಿಂದ ಹೊರಗುಳಿದಿತ್ತು. ತಂಡವು ಸತತ ಮೂರನೇ ಬಾರಿಗೆ ಪ್ಲೇ ಆಫ್ ತಲುಪಿದ್ದು, ಈ ಬಾರಿ ಚಾಂಪಿಯನ್ ಆಗಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಅವರು ಪಂದ್ಯದ ಬಗ್ಗೆ ಹೆಚ್ಚು ಯೋಚಿಸಬೇಡಿ ಎಂದು ಆಟಗಾರರಿಗೆ ಸಲಹೆ ನೀಡಿದ್ದಾರೆ.  ದೊಡ್ಡ ಪಂದ್ಯದ ಮೊದಲು ಆಟಗಾರರು ಶಾಂತವಾಗಿರಲು ಮತ್ತು ತಮ್ಮ ಸಹಜ ಆಟವನ್ನು ಆಡಬೇಕೆಂದು ಕ್ಯಾಪ್ಟನ್ ಸೂಚಿಸಿದ್ದಾರೆ.

ಇದನ್ನೂ ಓದಿ : RCB vs RR ಫೈನಲ್‌ ಮ್ಯಾಚ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ರವಿ ಶಾಸ್ತ್ರಿ

ಈ ಪಂದ್ಯಗಳ ಮೊದಲು ಆ ಭಾವನೆಗಳನ್ನು ಸ್ವಲ್ಪ ಕಡಿಮೆಗೊಳಿಸುವುದು ನನಗೆ ಮುಖ್ಯವಾಗಿದೆ. ಇದು ನಿಜವಾಗಿಯೂ ಕೂಲ್ ಡ್ರೆಸ್ಸಿಂಗ್ ರೂಮ್ ಆಗಿತ್ತು. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿ 2016 ರಿಂದ ಒಂದೇ ಒಂದು ಫೈನಲ್‌ ಮ್ಯಾಚ್ ಆಡಿಲ್ಲವಾದ್ದರಿಂದ ಫೈನಲ್‌ಗೆ ತಲುಪಲು ಸಾಧ್ಯವಾಗುವುದೇ ಎಂಬುದು ಕುತೂಹಲಕಾರಿಯಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News