ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಬಸ್ ಡ್ರೈವರ್ ಸ್ನೇಹಿತನಿಗೆ ಅರ್ಪಿಸಿದ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು.
ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು.
ಚಿತ್ರರಂಗಕ್ಕೆ ಬರುವ ಮುನ್ನ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜಿನಿಕಾಂತ್ (Rajinikanth), ತಾವು ಚಲನಚಿತ್ರಕ್ಕೆ ಸೇರಲು ಸೂಚಿಸಿದ ತಮ್ಮ ಹಳೆಯ ಬಸ್ ಚಾಲಕ ಸ್ನೇಹಿತರಿಗೆ ಈ ಪ್ರಶಸ್ತಿಯನ್ನು ಅರ್ಪಿಸಿದರು.ಅವರು ತಮ್ಮ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಜನಿಕಾಂತ್ ಅವರ ಮೊದಲ ಚಿತ್ರ ಅಪೂರ್ವ ರಾಗಂಗಲ್ ನಿರ್ದೇಶಿಸಿದ ದಿವಂಗತ ಚಲನಚಿತ್ರ ನಿರ್ಮಾಪಕ ಕೆ ಬಾಲಚಂದರ್, ಅವರ ಸಹೋದರ ಸತ್ಯನಾರಾಯಣ ರಾವ್ ಮತ್ತು ಅವರ ನಿರ್ದೇಶಕರು, ನಿರ್ಮಾಪಕರು, ಥಿಯೇಟರ್ ಮಾಲೀಕರು, ತಂತ್ರಜ್ಞರು ಮತ್ತು ಅಭಿಮಾನಿಗಳಿಗೆ ಸಮರ್ಪಿಸಿದರು.
ICC T20 World Cup 2021: ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಪ್ರಕಟಗೊಂಡಿದೆ ಈ ಭವಿಷ್ಯವಾಣಿ, ಈ ತಂಡದ ಗೆಲುವು ನಿಶ್ಚಿತ!
ಅಸುರನ್ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದ ಅಳಿಯ ಧನುಶ್,ರಜನಿಕಾಂತ್ ಅವರ ಪತ್ನಿ ಲತಾ ಮತ್ತು ಧನುಷ್ ಅವರನ್ನು ಮದುವೆಯಾಗಿರುವ ಅವರ ಪುತ್ರಿ ಐಶ್ವರ್ಯ ಕೂಡ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: 67th National Film Awards ceremony : 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಸ್ವೀಕರಿಸಿದ ಸೂಪರ್ ಸ್ಟಾರ್ ರಜನಿಕಾಂತ್
ಹಿನ್ನಲೆ ಗಾಯಕಿ ಆಶಾ ಭೋಂಸ್ಲೆ ಮತ್ತು ಶಂಕರ್ ಮಹಾದೇವನ್, ನಟರಾದ ಮೋಹನ್ ಲಾಲ್ ಮತ್ತು ಬಿಸ್ವಜೀತ್ ಚಟರ್ಜಿ ಮತ್ತು ಚಲನಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಅವರನ್ನೊಳಗೊಂಡ ತೀರ್ಪು ಈ ವರ್ಷದ ಆರಂಭದಲ್ಲಿ ರಜನಿಕಾಂತ್ ಅವರನ್ನು ಗೌರವಕ್ಕೆ ಆಯ್ಕೆ ಮಾಡಿತ್ತು.ಇಂದು ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಬಿಸ್ವಜಿತ್ ಚಟರ್ಜಿ ಅವರು ರಜನಿಕಾಂತ್ ಅವರು ಪ್ರತಿಭಾವಂತ ವ್ಯಕ್ತಿ ಮತ್ತು ಡೌನ್ ಟು ಅರ್ಥ್ ಎಂಬ ಕಾರಣಕ್ಕಾಗಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ರಜನಿಕಾಂತ್ ಅವರು ಶಿವಾಜಿ, ಎಂಥಿರನ್, ನಲ್ಲವನಕು ನಲ್ಲವನ್, ತಲಪತಿ, ಅಣ್ಣಾಮಲೈ, ಶ್ರೀ ರಾಘವೇಂದ್ರ, ಪೆದ್ದರಾಯುಡು, ಚಂದ್ರಮುಖಿ,ನಟ್ಟುಕ್ಕು ಒಂದು ನಲ್ಲವನ್, ದರ್ಬಾರ್ ಮತ್ತು ಬಾಷಾ ಚಿತ್ರಗಳಲ್ಲಿನ ಅಭಿಯನಯಕ್ಕೆ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ-Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.