67th National Film Awards ceremony : 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಸ್ವೀಕರಿಸಿದ ಸೂಪರ್ ಸ್ಟಾರ್ ರಜನಿಕಾಂತ್

ಭಾರತೀಯ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಗಾಗಿ ರಜನಿಕಾಂತ್ ಅವರಿಗೆ ಈ ಪ್ರಶಸ್ತಿಯನ್ನ ನೀಡಲಾಗಿದೆ.

Written by - Channabasava A Kashinakunti | Last Updated : Oct 25, 2021, 02:37 PM IST
  • ಇಂದು (ಅಕ್ಟೋಬರ್ 25) ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ
  • ಭಾರತದ ಅತ್ಯುನ್ನತ ಚಲನಚಿತ್ರ ಗೌರವ ಪ್ರಶಸ್ತಿಯಾದ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
  • 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಪ್ರದಾನ
67th National Film Awards ceremony : 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಸ್ವೀಕರಿಸಿದ ಸೂಪರ್ ಸ್ಟಾರ್ ರಜನಿಕಾಂತ್ title=

ನವದೆಹಲಿ : ಇಂದು (ಅಕ್ಟೋಬರ್ 25) ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಭಾರತದ ಅತ್ಯುನ್ನತ ಚಲನಚಿತ್ರ ಗೌರವ ಪ್ರಶಸ್ತಿಯಾದ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಪ್ರದಾನ ಮಾಡಿದರು. ಭಾರತೀಯ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಗಾಗಿ ರಜನಿಕಾಂತ್ ಅವರಿಗೆ ಈ ಪ್ರಶಸ್ತಿಯನ್ನ ನೀಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್, ಅಳಿಯಾ ಧನುಷ್, ಐಶ್ವರ್ಯ ಭಾಗವಹಿಸಿದ್ದರು.

ರಜನೀಕಾಂತ್ ಕನ್ನಡಿಗ(ಜನನ: ಡಿಸೆಂಬರ್ 12 , 1949) - ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರಲ್ಲೊಬ್ಬರು. ಕನ್ನಡ ಚಿತ್ರರಂಗವಲ್ಲದೆ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿಯನ್ನು ಪಡೆದಿದ್ದಾರೆ. 

ಇವರು ಬೆಂಗಳೂರು ಮಹಾನಗರ ಸಾರಿಗೆಯಲ್ಲಿ ನಿರ್ವಾಹಕರಾಗಿದ್ದುಕೊಂಡು ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. 1973ರಲ್ಲಿ ಇವರು ಅಭಿನಯದಲ್ಲಿ ಡಿಪ್ಲೊಮಾ ಪಡೆಯಲು ಮದ್ರಾಸ್ ಚಲನಚಿತ್ರ ಸಂಸ್ಥೆ ಸೇರಿಕೊಂಡರು. 

ಇವರ ಚೊಚ್ಚಲ ಚಿತ್ರ "ಅಪೂರ್ವ ರಾಗಂಗಳ್"ನ ನಂತರ ಕೆಲ ಸಮಯ ತಮಿಳು ಚಿತ್ರಗಳಲ್ಲಿ ಇವರ ವೃತ್ತಿ ವಿರೋಧಿ ಪಾತ್ರಗಳಿಂದ ಶುರುವಾಯಿತು. ಕೆಲ ಯಶಸ್ವಿ ವಾಣಿಜ್ಯ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಗುರುತಿಸಿಕೊಂಡ ನಂತರ, ಇವರಿಗೆ "ಸೂಪರ್ ಸ್ಟಾರ್" ಎಂದು ಕರೆಯಲಾಯಿತು, ಮತ್ತು ಅಂದಿನಿಂದ ಈ ಬಿರುದನ್ನು ಉಳಿಸಿಕೊಂಡಿದ್ದಾರೆ. ಇವರ ಲಕ್ಷಣತೆ ಮತ್ತು ವಿಭಿನ್ನ ಶೈಲಿಯ ನಟನೆ ಮತ್ತು ಸಂಭಾಶಣೆಗಳು ಇವರ ಅಪೂರ್ವ ಜನಪ್ರೀಯತೆಗೆ ಕಾರಣವಾಗಿದೆ. 

ಶಿವಾಜಿ ಚಿತ್ರದ ಪಾತ್ರಕ್ಕೆ 26 ಕೋಟಿ ರೂಪಾಯಿಗಳನ್ನು ಪಡೆದ ನಂತರ, ಇವರು ಏಷ್ಯಾದ 2ನೇ ಅತಿ ಹೆಚ್ಚು ಸಂಭಾವನೆ ಪಡೆದ ಹೆಗ್ಗಳಿಕಗೆ ಪಾತ್ರರಾದರು, ಮೊದಲ ಸ್ಥಾನದಲ್ಲಿ ಜಾಕೀ ಚಾನ್ ಇದ್ದರು. ಭಾರತದ ಇತರೆ ಪ್ರಾದೇಶಿಕ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತ, ಇವರು ಕೆಲ ಅಮೇರಿಕಾದ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2014ರ ವರೆಗೆ, ಇವರು ತಮಿಳುನಾಡಿನ 6 ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ-  4 ಉತ್ತಮ ನಟ ಪ್ರಶಸ್ತಿಗಳು ಮತ್ತು 2 ವಿಶೇಷ ಪ್ರಶಸ್ತಿಗಳು ಉತ್ತಮ ನಟನೆಗೆ, ಮತ್ತು ಒಂದು ಉತ್ತಮ ನಟ ಪಾತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ. ನಟನೆಯ ಜೊತೆಗೆ, ಇವರು ನಿರ್ಮಾಪಕರಾಗಿಯೂ ಚಿತ್ರಕಥೆಗಾರರಾಗಿಯು ಕಾಣಿಸಿಕೊಂಡಿದ್ದಾರೆ. ವೃತ್ತಿಯನ್ನು ಹೊರತುಪಡಿಸಿ, ಇವರು ಲೋಕೋಪಕಾರಿಯಾಗಿ, ಅಧ್ಯಾತ್ಮಕರಾಗಿ, ಮತ್ತು ತಮಿಳು ರಾಜಕೀಯದಲ್ಲಿ ಪ್ರಭಾವ ಬೀರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News