ದುಬೈ: Ind Vs Pak - ಐಸಿಸಿ ಟಿ20 ವಿಶ್ವಕಪ್ 2021 ರ (ICC T20 World Cup 2021) ಸೂಪರ್ 12 ರಲ್ಲಿ ಇಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಶೀದ್ ಲತೀಫ್ (Rashid Latif) ಹೇಳಿದ್ದು, ಭಾರತೀಯ ಆಟಗಾರರು ತಪ್ಪು ಮಾಡದಿದ್ದರೆ, ಪಾಕಿಸ್ತಾನ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎಂದು ಹೇಳಿದ್ದಾರೆ.
'ವಿರಾಟ್ ತಪ್ಪು ನಿರ್ಧಾರಗಳಿಂದ ದೂರವಿರಬೇಕು'
ಆದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಕಳಪೆ ನಿರ್ಧಾರಗಳನ್ನು ತೆಗೆದುಕೊಂಡ ಸಂದರ್ಭದಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿರಬಹುದು ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಭಾನುವಾರ ಖಲೀಜ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 'ನನ್ನ ಅಭಿಪ್ರಾಯದಲ್ಲಿ, ಪಾಕಿಸ್ತಾನ (Team Pakistan) ಎಷ್ಟೇ ಚೆನ್ನಾಗಿ ಆಡಿದರೂ, ಭಾರತೀಯ ಆಟಗಾರರು ತಪ್ಪು ಮಾಡದಿದ್ದರೆ, ಪಾಕಿಸ್ತಾನ ತಂಡಕ್ಕೆ ಪಂದ್ಯ ಗೆಲ್ಲುವುದು ಕಷ್ಟ ಎಂದು ಅವರು ಹೇಳಿದ್ದಾರೆ.
ಪಾಕ್ ತಂಡದ ಆಯ್ಕೆಯನ್ನು ಪ್ರಶ್ನಿಸಿದ ಲತೀಫ್
ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಪ್ಪರು ಎಂದು ಲತೀಫ್ ಹೇಳಿದ್ದಾರೆ. ಆದರೆ, ಪಾಕ್ ವಿರುದ್ಧ ತಪ್ಪಾದ ತಂಡದ ಎಲೆಕ್ಷನ್ ಅವರ ತಲೆನೋವಾಗಿ ಕೂಡ ಪರಿಣಮಿಸಬಹುದು ಎಂದು ಲತೀಫ್ ಹೇಳಿದ್ದಾರೆ. 'ಟಾಸ್ ಗೆದ್ದ ಬಳಿಕ ವಿರಾಟ್ ನಿರ್ಧಾರ ಎನಿರಲಿದೆ ಮತ್ತು ಅವರು ಯಾವ ತಂಡದ ಮೂಲಕ ಮೈದಾನಕ್ಕೆ ಇಳಿಯಲಿದ್ದಾರೆ ಎಂಬುದು ಕಾದುನೋಡಬೇಕು' ಎಂದು ಲತೀಫ್ ಹೇಳಿದ್ದಾರೆ.
ಇದನ್ನೂ ಓದಿ-ಭಾರತ ಮತ್ತು ಪಾಕಿಸ್ತಾನ ಪಂದ್ಯದ ಹಿನ್ನೆಲೆ ಗ್ರಾಹಕರಿಗೆ ಭಾರಿ ಡಿಸ್ಕೌಂಟ್ ಘೋಷಿಸಿದ ಹೋಟೆಲ್ ಗಳು
ಹಲವು ವರ್ಷಗಳ ಬಳಿಕ ಇಂಡಿಯಾ-ಪಾಕಿಸ್ತಾನ್ ಮುಖಾಮುಖಿಯಾಗುತ್ತಿವೆ
ಟಿ20 ಫಾರ್ಮ್ಯಾಟ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೊನೆಯ ಬಾರಿಗೆ ಐಸಿಸಿ ಟಿ 20 ವರ್ಲ್ಡ್ ಕಪ್ 2016ರಲ್ಲಿ ನಡೆದಿತ್ತು. ಇದಾದ ಬಳಿಕ 2019ರಲ್ಲಿ ಉಭಯ ತಂಡಗಳು ವರ್ಲ್ಡ್ ಕಪ್ ನಲ್ಲಿ ಏಕದಿನ ಪಂದ್ಯವನ್ನಾಡಿದ್ದವು.
ಟೀಂ ಇಂಡಿಯಾವನ್ನು ಸೋಲಿಸುವಲ್ಲಿ ವಿಫಲವಾಗಿದೆ ಪಾಕ್
ಐಸಿಸಿ ಟಿ20 ವಿಶ್ವಕಪ್ನಲ್ಲಿ ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಟೀಂ ಇಂಡಿಯಾ (Team India) ಪಾಕಿಸ್ತಾನವನ್ನು ಸೋಲಿಸಿದೆ. ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದಲ್ಲಿ ಭಾರತ ಯಾವಾಗಲೂ ಪ್ರಾಬಲ್ಯ ಮೆರೆದಿದೆ. ಇನ್ನು ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ-Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.