ಚೆನ್ನೈ (ತಮಿಳುನಾಡು) : ವಾಸ್ತವವಾಗಿ, ಉತ್ತರದ ಬಹುತೇಕ ರಾಜ್ಯಗಳನ್ನು ಗೆದ್ದಿರುವ ಭಾರತೀಯ ಜನತಾ ಪಕ್ಷವು ಯಾವಾಗಲೂ ದಕ್ಷಿಣದಲ್ಲಿ ತನ್ನ ಅಧಿಕಾರ ಪಡೆಯಲು ಹಲವು ತಂತ್ರಗಳನ್ನು ಹೆಣೆಯುತ್ತಿರುತ್ತದೆ. ಆದರೆ ಕರ್ನಾಟಕ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲೂ ಪಕ್ಷದ ಶಕ್ತಿ ಗಣನೀಯ ಪ್ರಮಾಣದಲ್ಲಿ ಕಾಣೆಯಾಗಿದೆ. ತೆಲಂಗಾಣದಲ್ಲಿ ಈಗಾಗಲೇ ಪೂರ್ಣ ಪ್ರಮಾಣದ ರಾಜಕೀಯ ಆರಂಭಿಸಿರುವ ಬಿಜೆಪಿ ಬೇರೆ ರಾಜ್ಯಗಳಲ್ಲೂ ಕಾಲಿಡಲು ಪ್ರಬಲ ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ. ಅದರ ಭಾಗವಾಗಿ ತಮಿಳುನಾಡಿನಲ್ಲೂ ಬಿಜೆಪಿಯನ್ನು ಒಂದು ರೇಂಜ್‌ನಲ್ಲಿ ಸಕ್ರೀಯಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡಲಾಗಿದೆ. ಇದೀಗ ಬಿಜೆಪಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇನೆಂದರೆ, ತಮಿಳಿನ ಖ್ಯಾತ ನಟ ಸೂಪರ್‌ ಸ್ಟಾರ್‌ ರಜನಿಕಾಂತ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಅವರ ಕ್ರೇಜ್ ಅನ್ನು ರಾಜಕೀಯವಾಗಿ ಬಳಸಿಕೊಳ್ಳಲು ಈಗಾಗಲೇ ಸಾಕಷ್ಟು ಪ್ರಯತ್ನ ನಡೆಸಿದೆ ಎನ್ನಲಾಗ್ತಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kiccha Sudeep : ಕಿಚ್ಚ ಸುದೀಪ್ ನ್ಯೂ ಲುಕ್‌! ಮುಂದಿನ ಸಿನಿಮಾಗೆ ನಡೀತಿದೆ ತಯಾರಿ..


ವಾಸ್ತವವಾಗಿ ರಜನಿಕಾಂತ್ ಅವರನ್ನು ರಾಜ್ಯಪಾಲರಾಘಿ ನೇಮಕ ಮಾಡುವ ಮೂಲಕ ಬಿಜೆಪಿ ತಮಿಳುನಾಡಿನ ಜನರ ಮನಗೆಲ್ಲುವ ಚಿಂತನೆಯಲ್ಲಿದೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರದ ಆಹ್ವಾನದ ಮೇರೆಗೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ಇದೇ ಈ ಎಲ್ಲ ಅನಿಮಾನಗಳಿಗೆ ಪ್ರಮುಖ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವೇಳೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಜೊತೆ ರಜನಿಕಾಂತ್‌ ಮಾತುಕತೆ ನಡೆಸಿದರು. ಬಳಿಕ ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳೇ ಇಂತಹದೊಂದು ಚರ್ಚೆಗೆ ಗ್ರಾಸವಾಯಿತು. ತಮಿಳುನಾಡು ರಾಜ್ಯಪಾಲರ ಜೊತೆ ರಾಜಕೀಯದ ಬಗ್ಗೆ ಮಾತನಾಡಿದ್ದೇನೆ ಆದರೆ ಏನು ಮಾತನಾಡಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ರಜನಿಕಾಂತ್ ಹೇಳಿಕೆ ನೀಡಿರುವುದು ಕೂಡ ಈ ಊಹಾಪೋಹಕ್ಕೆ ಪುಷ್ಠಿ ನೀಡುತ್ತಿದೆ.


ರಾಜಕೀಯ ಪಕ್ಷ ನಡೆಸಲಾರೆ ಎಂದು ಕೈಬಿಟ್ಟಿರುವ ರಜನಿಕಾಂತ್, ಈಗ ರಾಜಕೀಯದ ಬಗ್ಗೆ ಮಾತನಾಡುವುದು ಏನು? ಎಂಬ ಅನುಮಾನ ಎಲ್ಲರಲ್ಲೂ ಮೂಡಿತ್ತು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಉತ್ತಮ ಸ್ಥಾನಗಳನ್ನು ಗೆಲ್ಲುವ ಪ್ರಮುಖ ಉದ್ದೇಶ ಹೊಂದಿರುವ ಕಮಲ ಪಾಳಯ, ಇದೀಗ ರಜನಿಕಾಂತ್ ಅವರಿಗೆ ರಾಜ್ಯಪಾಲ ಹುದ್ದೆ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ. ವಾಸ್ತವವಾಗಿ, ಪ್ರಧಾನಿ ಮೋದಿ ಮತ್ತು ರಜನಿಕಾಂತ್ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಈ ಹಿಂದೆ ಮೋದಿ ಅವರು ಚೆನ್ನೈಗೆ ಬಂದಾಗಲೂ ರಜನಿಕಾಂತ್ ಮನೆಗೆ ತೆರಳಿ ಕುಟುಂಬದವರೆಲ್ಲರನ್ನೂ ಭೇಟಿಯಾಗಿ ಕೆಲಹೊತ್ತು ಕಾಲ ಕಳೆದಿದ್ದರು.


ಇದನ್ನೂ ಓದಿ: ಬಿಜೆಪಿ ಚುನಾವಣಾ ಪ್ಲಾನ್ ಶುರು : ಪಕ್ಷದಲ್ಲಿ ಹೆಚ್ಚಿದ ಈ 6 ನಾಯಕರ ವರ್ಚಸ್ಸು!


ಆ ಆಪ್ತತೆಯಿಂದಾಗಿಯೇ ಗವರ್ನರ್ ಗಿರಿಯನ್ನು ಸ್ವೀಕರಿಸಲು ಮೋದಿಯವರು ಕೇಳಿದಾಗ ರಜನಿಕಾಂತ್ ಅವರು ಪಾಸಿಟಿವ್‌ ಪ್ರತಿಕ್ರಿಯೆ ಕೊಟ್ಟಿರಬಹುದು ಎನ್ನಲಾಗ್ತಿದೆ. ರಜನಿಕಾಂತ್ ಅವರನ್ನು ಯಾವುದೇ ರಾಜ್ಯದ ರಾಜ್ಯಪಾಲರನ್ನಾಗಿ ಕಳುಹಿಸಿದರೆ ರಜನಿಕಾಂತ್ ಬಿಜೆಪಿಯವರೇ ಎಂದು ತಮಿಳುನಾಡಿನ ಜನರೆಲ್ಲ ಭಾವಿಸುವ ಸಾಧ್ಯತೆ ಇದೆ. ಹೀಗಾಗಿ ಅವರ ಅಭಿಮಾನಿಗಳ ಮತಗಳನ್ನು ದೊಡ್ಡ ಮಟ್ಟದಲ್ಲಿ ಸೆಳೆಯಲು ಬಿಜೆಪಿ ಈ ಪ್ಲಾನ್ ಮಾಡಿದೆ. ಇದರಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಮಾತ್ರ ಕಾದು ನೋಡಬೇಕು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.