ನವದೆಹಲಿ: ರಿಯಾ ಚಕ್ರವರ್ತಿ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿರುವ ಮಾಧ್ಯಮ ವರದಿಗಳನ್ನು ತಡೆಯಲು ಯತ್ನಿಸಿರುವ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ (Delhi Highcourt) ಗುರುವಾರ ಕೇಂದ್ರದಿಂದ ಪ್ರತಿಕ್ರಿಯೆ ಕೋರಿದೆ. ಕೇಬಲ್ ಟಿವಿ ಕಾಯ್ದೆಯಡಿ ರಕುಲ್ ಪ್ರೀತ್ ಅವರಿಂದ ಯಾವುದೇ ದೂರು ಬಂದಿಲ್ಲ ಮತ್ತು ಸೆನ್ಸಾರ್ಶಿಪ್ ಆದೇಶವನ್ನು ರವಾನಿಸಬಾರದು ಎಂದು ಕೇಂದ್ರಕ್ಕೆ ನ್ಯಾಯಾಲಯ ತಿಳಿಸಿದೆ. 


COMMERCIAL BREAK
SCROLL TO CONTINUE READING

ಅದರ ನಂತರ ರಕುಲ್‌ಪ್ರೀತ್ ಅವರ ಅರ್ಜಿಯನ್ನು ಪರಿಗಣಿಸಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವಂತೆ  ನ್ಯಾಯಾಲಯವು ಕೇಂದ್ರ, ಪ್ರಸಾರ್ ಭಾರತಿ, ಎನ್‌ಬಿಎಗೆ ಸೂಚಿಸಿದೆ.


ನಟಿಯ ಅರ್ಜಿ ಕುರಿತು ನ್ಯಾಯಮೂರ್ತಿ ನವೀನ್ ಚಾವ್ಲಾ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಸಾರ್ ಭಾರತಿ ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೋರಿದ್ದಾರೆ. ನಟಿ ರಕುಲ್ ಅವರ ಮನವಿಯನ್ನು ಪ್ರಾತಿನಿಧ್ಯವಾಗಿ ಸ್ವೀಕರಿಸಿ ಮುಂದಿನ ವಿಚಾರಣೆಯ ದಿನಾಂಕವಾದ ಅಕ್ಟೋಬರ್ 15 ರ ಮೊದಲು ತೀರ್ಮಾನ ತೆಗೆದುಕೊಳ್ಳುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತು.


Sara Ali Khan ನಿಂದ ಹಲವು ಬಾರಿ ಡ್ರಗ್ಸ್ ಪಡೆದಿದ್ದಾಳಂತೆ ರಿಯಾ ಚಕ್ರವರ್ತಿ


ರಿಯಾ ಚಕ್ರವರ್ತಿ (Rhea Chakraborty)ಗೆ ಸಂಬಂಧಿಸಿದ ಪ್ರಕರಣದಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಅವರಿಗೆ ಸಂಬಂಧಿಸಿದ ಸುದ್ದಿಗಳಲ್ಲಿ ಮಾಧ್ಯಮಗಳು ಸಂಯಮ ಕಾಯ್ದುಕೊಳ್ಳಲಿವೆ ಎಂದು ಆಶಿಸುವುದಾಗಿ ಹೈಕೋರ್ಟ್ ಹೇಳಿದೆ. ಅರ್ಜಿದಾರರಿಗೆ ಸಂಬಂಧಿಸಿದ ಸುದ್ದಿಗಳನ್ನು ಮಾಡುವಾಗ ಮಾಧ್ಯಮ ಸಂಸ್ಥೆಗಳು ತಮ್ಮ ಸುದ್ದಿಗಳಲ್ಲಿ ಸಂಯಮವನ್ನು ನಿರ್ವಹಿಸುತ್ತವೆ, ಕೇಬಲ್ ಟಿವಿ ನಿಯಮಗಳು, ಕಾರ್ಯಕ್ರಮ ಸಂಕೇತಗಳು ಮತ್ತು ಇತರ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ ಎಂದು ಆಶಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.


ವಾಸ್ತವವಾಗಿ ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಹೆಸರಿನ ನಂತರ ಮಾಧ್ಯಮ ವಿಚಾರಣೆ ಪ್ರಾರಂಭವಾಗಿದೆ ಎಂದು ನಟಿ ರಕುಲ್ ಪ್ರೀತ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ತನ್ನ ವಿರುದ್ಧ ಯಾವುದೇ ಮಾಧ್ಯಮ ಪ್ರಸಾರ ಮಾಡಬಾರದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸುವಂತೆ  ರಕುಲ್‌ಪ್ರೀತ್‌ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. 


Exclusive: ರಿಯಾ ಡ್ರಗ್ಸ್ ಸ್ಟೋರಿಯಿಂದ 'ಸಾರಾ ಅಲಿ ಖಾನ್' ಸೇರಿದಂತೆ 5 ವ್ಯಸನಿಗಳ ಹೆಸರು ಬಹಿರಂಗ!


ರಿಯಾ ವಿಚಾರಣೆ ವೇಳೆ ರಕುಲ್ ಪ್ರೀತ್ ಮತ್ತು ಸಾರಾ ಅಲಿ ಖಾನ್ (Sara Ali Khan) ಅವರ ಹೆಸರನ್ನು ಡ್ರಗ್ಸ್ ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮಗಳು ಸುದ್ದಿಯನ್ನು ಚಲಾಯಿಸಲು ಪ್ರಾರಂಭಿಸಿವೆ ಎಂಬ ಮಾಹಿತಿ ಬಂದಿದೆ ಎಂದು ರಕುಲ್ ಪ್ರೀತ್ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಮಾಧ್ಯಮಗಳು ವರದಿಯನ್ನು ಬಿತ್ತರಿಸುವ ಮೂಲಕ ರಕುಲ್ ಪ್ರೀತ್ ಅವರಿಗೆ ಮಾನಸಿಕವಾಗಿ ಹಿಂಸಿಸುತ್ತಿವೆ ಎಂದು ಅವರ ಪರ ವಕೀಲರು ಹೈಕೋರ್ಟ್ ನಲ್ಲಿ ತಿಳಿಸಿದ್ದಾರೆ.