ರಿಯಾ ಚಕ್ರವರ್ತಿ ಜೊತೆಗೆ ಡ್ರಗ್ಸ್ ಚಾಟ್ ಮಾಡಿರುವುದಾಗಿ ಒಪ್ಪಿಕೊಂಡ Rakul Preet ಸಿಂಗ್, ಆದರೆ..?
ಈ ಕುರಿತು ಹೇಳಿಕೆ ನೀಡಿರುವ Rakul Preet Singh, ರಿಯಾ ನನ್ನ ಮನೆಯ್ತಲ್ಲ್ಲಿ ಡ್ರಗ್ಸ್ ಬಿಟ್ಟು ಹೋಗಿದ್ದರು. ಈ ಕುರಿತು ನಾನು ರಿಯಾ ಜೊತೆಗೆ ಚಾಟ್ ನಡೆಸಿದ್ದೆ. ಆದರೆ, ನಾನು ನನ್ನ ಜೀವನದಲ್ಲಿ ಡ್ರಗ್ಸ್ ಸೇವನೆ ಮಾಡಿಲ್ಲ ಹಾಗೂ ತಾವು ಯಾವುದೇ ಡ್ರಗ್ಸ್ ಪೆಡ್ಲರ್ ಜೊತೆಗೆ ಸಂಪರ್ಕ ಹೊಂದಿಲ್ಲ ಎಂದು ಹೇಳಿದ್ದಾರೆ.
ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಿಂದ ಪ್ರಾರಂಭವಾದ ಡ್ರಗ್ಸ್ ಪ್ರಕರಣದ ತನಿಖೆಯ ವ್ಯಾಪ್ತಿ ಪ್ರತಿದಿನ ಹೆಚ್ಚಾಗುತ್ತಲೇ ಇದೆ. ಈ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಇಂದು ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh), ಧರ್ಮ ಪ್ರೊಡಕ್ಷನ್ಸ್ನ ಕಾರ್ಯನಿರ್ವಾಹಕ ನಿರ್ಮಾಪಕ ಕ್ಷಿತಿಜ್ ಪ್ರಸಾದ್ ಮತ್ತು ದೀಪಿಕಾ ಪಡುಕೋಣೆಯ ವ್ಯವಸ್ಥಾಪಕಿ ಕರಿಷ್ಮಾ ಅವರನ್ನು ಪ್ರಶ್ನಿಸಿದೆ.
ಇದನ್ನು ಓದಿ- Drugs Case:Deepika Padukone ಗೋಸ್ಕರ NCB ಅಧಿಕಾರಿಗಳಿಗೆ ಪತಿ ರಣವೀರ್ ಸಿಂಗ್ ಮನವಿ
ಎನ್ಸಿಬಿಗೆ ಸಂಬಂಧಿಸಿದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ರಕುಲ್ ಪ್ರೀತ್ ಸಿಂಗ್ ಅವರು 2018 ರಲ್ಲಿ ರಿಯಾ ಚಕ್ರವರ್ತಿ (Rhea Chakraborty) ಅವರೊಂದಿಗೆ ಡ್ರಗ್ಸ್ ಬಗ್ಗೆ ಚಾಟ್ ಮಾಡಿದ್ದರು ಎಂದು ಒಪ್ಪಿಕೊಂಡಿದ್ದಾರೆ. ನನ್ನ ಮನೆಯಲ್ಲಿ ರಿಯಾ ಡ್ರಗ್ಸ್ ಅನ್ನು ತಮ್ಮ ಮನೆಗೆ ಹೋಗಿದ್ದರು ಮತ್ತು ಈ ಕುರಿತು ಅವರ ನಡುವೆ ಮಾತುಕತೆ ನಡೆದಿತ್ತು ಎಂದು ರಕುಲ್ ಹೇಳಿದ್ದಾರೆ. ತಾನು ಎಂದಿಗೂ ಡ್ರಗ್ಸ್ ತೆಗೆದುಕೊಂಡಿಲ್ಲ ಅಥವಾ ಯಾವುದೇ ಡ್ರಗ್ ಪೆಡ್ಲರ್ಗಳನ್ನು ಸಂಪರ್ಕಿಸಿಲ್ಲ ಎಂದು ರಕುಲ್ ಹೇಳಿದ್ದಾರೆ.
ಇದನ್ನು ಓದಿ- Full Video: Karan Johar Drug Party ಮೇಲೆ NCB ಕಣ್ಣು... ದಿಗ್ಗಜ ಬಾಲಿವುಡ್ ನಟ-ನಟಿಯರು ಇದರಲ್ಲಿ ಶಾಮೀಲು
ಇನ್ನೊಂದೆಡೆ ಡ್ರಗ್ಸ್ ಕುರಿತು ಚಾಟ್ ನಡೆಸಿರುವ ವಿಚಾರ ಇದೀಗ ದೀಪಿಕಾ ಪಡುಕೋಣೆ (Deepika Padukone) ಅವರ ಸಂಕಷ್ಟದಲ್ಲಿ ಹೆಚ್ಚಳ ಮಾಡಿದೆ. ಈ ಚಾಟ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ದೀಪಿಕಾ ಅವಳ ಮ್ಯಾನೇಜರ್ ಕರೀಷ್ಮಾ ಅವರನ್ನು ಇಂದು NCB ಕಚೇರಿಗೆ ಕರೆಯಿಸಿಕೊಳ್ಳಲಾಗಿತ್ತು. ಈ ವೇಳೆ ದೀಪಿಕಾ ಜೊತೆಗೆ ತಾವು ಡ್ರಗ್ಸ್ ಗೆ ಸಂಬಂಧಿಸಿದಂತೆ ಮಾಡಿದ ಮಾತುಕತೆಗಳು ಸರಿಯಾಗಿವೆ ಎಂದು ಕರೀಷ್ಮಾ ಹೇಳಿದ್ದಾರೆ ಹಾಗೂ ಇದಕ್ಕಾಗಿ ಒಂದು ವಾಟ್ಸ್ ಆಪ್ ಗ್ರೂಪ್ ಕೂಡ ರಚಿಸಲಾಗಿದ್ದು, ಗ್ರೂಪ್ ಅಡ್ಮಿನ್ ದೀಪಿಕಾ ಆಗಿದ್ದರು ಎಂದು ಹೇಳಿದ್ದಾಳೆ. ಬಳಿಕ NCB ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಅಧಿಕಾರಿಗಳು ಇನ್ಮುಂದೆ ದೀಪಿಕಾ ಹಾಗೂ ಕರೀಷ್ಮಾ ಅವರನ್ನು ಪರಸ್ಪರರ ಸಮ್ಮುಖದಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ಓದಿ- NCB ವಿಚಾರಣೆ: ಚಾಟ್ ನಡೆಸುತ್ತಿದ್ದ ವೇಳೆ Deepika ಗ್ರೂಪ್ ಅಡ್ಮಿನ್ ಆಗಿದ್ದರು ಎಂದ ಕರೀಷ್ಮಾ
ಕರಿಷ್ಮಾ ಅವರನ್ನು ಎನ್ಸಿಬಿ ಅಧಿಕಾರಿಗಳು ಶುಕ್ರವಾರ 6 ಗಂಟೆಗಳಿಗಿಂತ ಹೆಚ್ಚು ಕಾಲ ಪ್ರಶ್ನಿಸಿದ್ದಾರೆ. ಮೂಲಗಳ ಪ್ರಕಾರ, ಕರಿಷ್ಮಾ ಎನ್ಸಿಬಿಗೆ ವಾಟ್ಸಾಪ್ ಗ್ರೂಪ್ ಬಗ್ಗೆ ತಿಳಿಸಿದ್ದಾರೆ. ಈ ಗುಂಪಿನಲ್ಲಿ ಕೇವಲ ಮೂರು ಜನರಿದ್ದರು, ಅವರ ಹೆಸರುಗಳು ಜಯ, ಕರಿಷ್ಮಾ ಮತ್ತು ದೀಪಿಕಾ. ಗುಂಪಿನ ನಿರ್ವಾಹಕರು ದೀಪಿಕಾ ಮತ್ತು ಹೆಚ್ಚಾಗಿ ಡ್ರಗ್ಸ್ ಬಗ್ಗೆ ಮಾತನಾಡುತ್ತಿದ್ದರು ಎಂದಿದ್ದಾರೆ. 2017 ರಲ್ಲಿ ನಡೆದ ವೈರಲ್ ಚಾಟ್ ನಿಜ ಎಂದು ಕರಿಷ್ಮಾ ಎನ್ಸಿಬಿಯ ಮುಂದೆ ತಪ್ಪೊಪ್ಪಿಕೊಂಡಿದ್ದು, ಇದರಲ್ಲಿ ಗುಂಪು ಆಡಳಿತಾಧಿಕಾರಿ ದೀಪಿಕಾ ಹ್ಯಾಶ್ ಕೋರಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ NCB ಅಧಿಕಾರಿಗಳು ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಹಾಗೋ ಶ್ರದ್ಧಾ ಕಪೂರ್ ಅವರನ್ನು ಶನಿವಾರ ವಿಚಾರಣೆಗೆ ಒಳಪಡಿಸಲಿದೆ ಎಂಬುದು ಇಲ್ಲಿ ಗಮನಾರ್ಹ.