ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಪ್ರಕರಣದಿಂದ ಪ್ರಾರಂಭವಾದ ಡ್ರಗ್ಸ್ ಪ್ರಕರಣದ ತನಿಖೆಯ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ . ಸದ್ಯ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಾಟ್ಸಾಪ್ ಚಾಟ್ ದೀಪಿಕಾ ಪಡುಕೋಣೆ (Deepika Padukone) ಅವರ ತೊಂದರೆಗಳನ್ನು ಹೆಚ್ಚಿಸಿದೆ. ನಟಿ ರಾಕುಲ್ ಪ್ರೀತ್ ಸಿಂಗ್ ಅವರನ್ನು ಹೊರತುಪಡಿಸಿ ಧರ್ಮ ಪ್ರೊಡಕ್ಷನ್ಸ್‌ನ ಕಾರ್ಯನಿರ್ವಾಹಕ ನಿರ್ಮಾಪಕ ಕ್ಷಿತಿಜ್ ಪ್ರಸಾದ್ ಮತ್ತು ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ವಿಚಾರಣೆ ನಡೆಸುತ್ತಿದೆ.
ಇದನ್ನು ಓದಿ- Drugs Case:Deepika Padukone ಗೋಸ್ಕರ NCB ಅಧಿಕಾರಿಗಳಿಗೆ ಪತಿ ರಣವೀರ್ ಸಿಂಗ್ ಮನವಿ
ಕಳೆದ ಸುಮಾರು 6 ಗಂಟೆಗಳಿಂದ ಕರಿಷ್ಮಾ ಅವರನ್ನು ಪ್ರಶ್ನಿಸಲಾಗುತ್ತಿದೆ. ಈ ವೇಳೆ ವಾಟ್ಸಾಪ್ ಗ್ರೂಪ್ ವೊಂದರ ಬಗ್ಗೆ ಕರಿಷ್ಮಾ ಎನ್‌ಸಿಬಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಗುಂಪಿನಲ್ಲಿ ಕೇವಲ ಮೂರು ಜನರಿದ್ದರು, ಅವರ ಹೆಸರುಗಳು ಜಯ, ಕರಿಷ್ಮಾ ಮತ್ತು ದೀಪಿಕಾ. ಗುಂಪಿನ ನಿರ್ವಾಹಕರು ದೀಪಿಕಾ ಆಗಿದ್ದರು ಮತ್ತು ಗ್ರೂಪ್ ನಲ್ಲಿ ಹೆಚ್ಚಾಗಿ ಡ್ರಗ್ಸ್ ಬಗ್ಗೆ ಚರ್ಚಿಸಲಾಗುತ್ತಿತ್ತು. 2017 ರಲ್ಲಿ ನಡೆಸಲಾಗಿದ್ದ ವೈರಲ್ ಚಾಟ್ ನಡೆಸಿರುವ ಬಗ್ಗೆ ಕರಿಷ್ಮಾ ಎನ್‌ಸಿಬಿಯ ಮುಂದೆತಪ್ಪೊಪ್ಪಿಕೊಂಡಿದ್ದಾರೆ. ಇದರಲ್ಲಿ ಗ್ರೂಪ್ ಅಡ್ಮಿನ್ ಆಗಿದ್ದ ದೀಪಿಕಾ ಹ್ಯಾಶ್ ಕೋರಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ- Full Video: Karan Johar Drug Party ಮೇಲೆ NCB ಕಣ್ಣು... ದಿಗ್ಗಜ ಬಾಲಿವುಡ್ ನಟ-ನಟಿಯರು ಇದರಲ್ಲಿ ಶಾಮೀಲು
ಡ್ರಗ್ಸ್ ಪ್ರಕರಣದಲ್ಲಿ ಇಂದು ಎನ್‌ಸಿಬಿ ರಕುಲ್ ಪ್ರೀತ್ ಸಿಂಗ್ ಅವರನ್ನು ಕೂಡ ಪ್ರಶ್ನಿಸುತ್ತಿದೆ. ಮೂಲಗಳ ಪ್ರಕಾರ, ರಕುಲ್ ಪ್ರೀತ್ ಅವರು 2018 ರಲ್ಲಿ ರಿಯಾ ಅವರೊಂದಿಗೆ ಡ್ರಗ್ ಚಾಟ್ ಮಾಡಿರುವುದಾಗಿ ಎನ್‌ಸಿಬಿಗೆ ತಿಳಿಸಿದ್ದಾರೆ. ರಿಯಾ ತನ್ನ ಸಾಮಾನುಗಳನ್ನು (ಡ್ರಗ್ಸ್ ... ವೀಡ್) ಚಾಟ್‌ನಲ್ಲಿ ಪಡೆಯುತ್ತಿದ್ದಾಳೆ ಎಂದು ರಕುಲ್ ಪ್ರೀತ್ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ರಿಯಾ ಅವರ ಸಾಮಗ್ರಿ (ಡ್ರಗ್ಸ್) ನನ್ನ ಮನೆಯಲ್ಲಿತ್ತು ಎಂದು ಹೇಳಿದ್ದಾರೆ.
ಇದನ್ನು ಓದಿ- ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ ಮ್ಯಾನೇಜರ್ ಬಳಿ NCB ಕೇಳಬಹುದಾದ 16 ಪ್ರಶ್ನೆಗಳಿವು
ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಹಾಗೂ ಶ್ರದ್ಧಾ ಕಪೂರ್ ಅವರ ವಿಚಾರಣೆ ಸಹನಿವಾರ ಅಂದರೆ ಸೆಪ್ಟೆಂಬರ್ 26 ರಂದು ನಡೆಯಲಿದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.