Rakul Preet Singh : ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ತಮ್ಮ ಫಿಟ್ನೆಸ್‌ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಅದಕ್ಕಾಗಿ ಅವರು ದಿನದ ಹೆಚ್ಚಿನ ಸಮಯವನ್ನು ಜಿಮ್‌ನಲ್ಲಿ ಕಳೆಯುತ್ತಾರೆ. ಬಳ್ಳಿಯಂತಹ ಮೈಕಟ್ಟು ಪಡೆಯಲು ಎಂತಹ ಅಸಮಾನ್ಯ ವ್ಯಾಯಾಮವನ್ನಾದ್ರೂ ಈ ಸುಂದರಿ ಮಾಡ್ತಾರೆ ಎನ್ನುವುದಕ್ಕೆ ಇದೀಗ ಅವರು ಹಂಚಿಕೊಂಡಿರುವ ವಿಡಿಯೋ ಸಾಕ್ಷಿಯಾಗುತ್ತದೆ.


COMMERCIAL BREAK
SCROLL TO CONTINUE READING

ಹೌದು.. ನೀಲಿ ಮತ್ತು ಬಿಳಿ ಈಜುಡುಗೆ ತೊಟ್ಟು ರಾಕುಲ್ -15 ಡಿಗ್ರಿ ಸೆಲ್ಸಿಯಸ್‌ನಲ್ಲಿ ಐಸ್ ಸ್ನಾನ ಮಾಡುತ್ತಿರುವ ವಿಡಿಯೋ ಒಂದು ಸೊಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಮಂಜುಗಡ್ಡೆಯ ರಾಶಿಯ ನಡುವೆ ಮಿಂದೆದ್ದ ಬಾಲೆ ತಮ್ಮ ಇನ್‌ಸ್ಟಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡು "ಕ್ರಿಯೋ ಇನ್ -15 ಯಾರಾದರೂ..?" ಅಂತ ಪ್ಯಾನ್ಸ್‌ಗೆ ಸವಾಲ್‌ ಹಾಕಿದ್ದಾರೆ.


 

 

 

 



 

 

 

 

 

 

 

 

 

 

 

A post shared by Rakul Singh (@rakulpreet)


ಇದನ್ನೂ ಓದಿ: Shivarajkumar : ನಾನು ಹಣ ತೆಗೆದುಕೊಂಡು ಪ್ರಚಾರಕ್ಕೆ ಬಂದಿಲ್ಲ, ಮನುಷ್ಯನಿಗಾಗಿ ಬಂದಿದ್ದೇನೆ..!


ಯಸ್‌... ತಮ್ಮ ಸೌಂದರ್ಯ ಮತ್ತು ನಟನೆಯಿಂದ ಹೆಸರುವಾಸಿಯಾಗಿರುವ ರಾಕುಲ್ ಪ್ರೀತ್ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಈ ವರ್ಷದ ವಿಶ್ವ ಆರೋಗ್ಯ ದಿನದಂದು, ಅವರು ಐಸ್‌ ಗಡ್ಡೆಗಳಿಂದ ತುಂಬಿರುವ ಬಾತ್‌ನಲ್ಲಿ ಮಿಂದೆದ್ದಾರೆ. ಇದು ಒಂದು ರೀತಿ ವ್ಯಾಯಾಮ ಅನ್ನೋದು ಹೆಚ್ಚಿನ ಜನಕ್ಕೆ ತಿಳಿದಿಲ್ಲ ಬಿಡಿ. ಸದ್ಯ ಈ ಕಷ್ಟಕರವಾದ ಬಾತ್‌ ಮಾಡುವ ಮೂಲಕ ರಾಕುಲ್‌ ನೆಟ್ಟಿಗರು ಬಾಯ್ಮೇಲೆ ಬೆರಳು ಇಟ್ಟುಕೊಂಡು ನೋಡುವಂತೆ ಮಾಡಿದ್ದಾರೆ.


ಇನ್ನು ರಾಕುಲ್ ಪ್ರೀತ್ ಸಿಂಗ್ ಕೊನೆಯದಾಗಿ ಛತ್ರಿವಾಲಿಯಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಮೂಲಕ ಯುವ ಜನತೆಗೆ ಲೈಂಗಿಕ ಶಿಕ್ಷಣದ ಕುರಿತು ಅರಿವನ್ನು ಮೂಡಿಸಲು ಪ್ಲಾನ್‌ ಮಾಡಿದ್ದರು. ಈ ಸಿನಿಮಾ ಜೀ5ನಲ್ಲಿ ಬಿಡುಗಡೆಯಾಗಿತ್ತು. ಅಲ್ಲದೆ, ಕಮಲ್ ಹಾಸನ್ ಅವರ ಇಂಡಿಯನ್ 2 ಮತ್ತು ಅರ್ಜುನ್ ಕಪೂರ್ ಜೊತೆಗೆ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.