Serial Actress: ನಟನೆ ಮಾತ್ರವಲ್ಲ ಎಲ್ಲರಿಗೂ ಮಾದರಿ ಪಾರು ಧಾರವಾಹಿ ನಟಿ!

Actress Mokshitha: ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ನಟರು ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ನಟಿ ಮೋಕ್ಷಿತ ಕೂಡ ಒಬ್ಬರು ಇವರ ಕಣ್ಣೀರಿನ ಕಥೆ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ.

Written by - Zee Kannada News Desk | Last Updated : May 6, 2023, 06:27 PM IST
  • ನಟನೆ ಮಾತ್ರವಲ್ಲದೇ ಎಲ್ಲರಿಗೂ ಮಾದರಿಯಾಗಿರುವ ಪಾರು ಧಾರವಾಹಿ ನಟಿ
  • ಚಿಕ್ಕ ವಯಸ್ಸಿನಲ್ಲೇ ಜವಾಬ್ದಾರಿ ಹೊತ್ತ ನಟಿ
  • ಸಂದರ್ಶನವೊಂದರಲ್ಲಿ ತನ್ನ ನೋವಿನ ಕಥೆ ಹಂಚಿಕೊಂಡಿದ್ದಾರೆ
Serial Actress: ನಟನೆ ಮಾತ್ರವಲ್ಲ ಎಲ್ಲರಿಗೂ ಮಾದರಿ ಪಾರು ಧಾರವಾಹಿ ನಟಿ! title=

ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ನಟರು ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ನಟಿ ಮೋಕ್ಷಿತ ಕೂಡ ಒಬ್ಬರು ಇವರ ಕಣ್ಣೀರಿನ ಕಥೆ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ನಾಯಕಿ ನಟಿ. ಪಾರು ಪಾತ್ರಧಾರಿ ಮೋಕ್ಷಿತ ಅವರ ಬಾಲ್ಯ ನಾವು ಅಂದುಕೊಂಡಿದ್ದಷ್ಟು ಸುಲಭ ಇರಲಿಲ್ಲ. ಮಕ್ಕಳು ಕಿಟಲೆ ಮಾಡೋದು, ತಲೆಹರಟೆ ಮಾಡೋದು ಸಹಜ ಆದ್ರೆ ಮನೆಯಲ್ಲೇ ಹಿರಿ ಮಗಳಾಗಿದ್ದ ಕಾರಣ ನಟಿ ಮೋಕ್ಷಿತಗೆ ಸಣ್ಣ ವಯಸ್ಸಿನಲ್ಲೇ ಜವಾಬ್ದಾರಿಯನ್ನ ಹೊರಿಸಿದ್ರು.

ಇದನ್ನೂ ಓದಿ: Ramya's Pet Dog Is Missing: ರಮ್ಯಾ ಮುದ್ದು ನಾಯಿ ಮಿಸಿಂಗ್‌ : ಹುಡ್ಕಿ ಕೊಡಿ ಎಂದ ಮೋಹಕ ತಾರೆ

ಹಾಗಾಗಿ ವಿಶೇಷ ಚೇತನರಾಗಿದ್ದ ತನ್ನ ತಮ್ಮನ ಜವಾಬ್ದಾರಿ ತೆಗೆದುಕೊಂಡು ಅಮ್ಮನ ರೀತಿಯಲ್ಲೇ ಪಾಲನೆ ಪೋಷಣೆ ಮಾಡಿದ್ರು. ನಂತರ ತಾಯಿ ಶಿಕ್ಷಣ ಪಡೆಯಲು ಶುರುಮಾಡಿದ್ದಾಗ BCOM ಓದುತ್ತಿದ್ದ ಮೋಕ್ಷಿತ ತಮ್ಮನಿಗೆ ಟೇಕ್‌ ಕೇರ್‌ ಮಾಡಬೇಕು ಅಂತಾ ವಿದ್ಯಾಭ್ಯಾಸವನ್ನ ಸ್ಟಾಪ್‌ ಮಾಡಿದ ಬಳಿಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರು. 

ಸಂದರ್ಶನವೊಂದರಲ್ಲಿ ಮಾತನಾಡಿದ ಮೋಕ್ಷಿತ ಪಾರು ಹಾಗೂ  ನನ್ನ ಪಾತ್ರಕ್ಕೆ ಹೆಚ್ಚು ವ್ಯತ್ಯಾಸವಿಲ್ಲ. ರಿಯಲ್‌ ಲೈಫಿನಲ್ಲು ನಾನು ತುಂಬಾ ಸೈಲೆಂಟ್‌. ಆಡಿಷನ್‌ಗೆ ಬಂದಾಗ ನೀವು ಹೇಗಿದ್ದೀರೋ ಅದೇ ಪಾರು ಪಾತ್ರ ಅಂತ ಡೈರೆಕ್ಟರ್‌ ಹೇಳಿದರು.

ಇದನ್ನೂ ಓದಿ: Sanya Iyer Hot LooK: ತುಂಡು ಉಡುಗೆಯಲ್ಲಿ ಪೋಸ್‌ ​ಕೊಟ್ಟ ಸಾನ್ಯಾ ಐಯ್ಯರ್: ಬಾಲಿವುಡ್‌ ಅಲ್ಲ.. ಸ್ಯಾಂಡಲ್ವುಡ್‌ ಎಂದ ಫ್ಯಾನ್ಸ್!

ಸೀರಿಯಲ್‌ನಲ್ಲಿ ತಮ್ಮನ ಪಾತ್ರದ ಜೊತೆ ಕೆಲಸ ಮಾಡೋದು ತುಂಬಾ ಸಂತೋಷ ಕೊಡುತ್ತೆ.    ಪಾರು ಸೀರಿಯಲ್‌ ಟೀಮ್‌ ಬಗ್ಗೆ ಮಾತಾನಾಡಿರುವ ನಟಿ ಮೋಕ್ಷಿತ,   ಹೇಳೋದಕ್ಕೆ ಯಾವುದೇ ಪದಗಳು ಇಲ್ಲ, ನಾನು ಯಾವುದೇ ತಪ್ಪು ಮಾಡಿದ್ದಾಗ ಡೈರೆಕ್ಟರ್‌ ಕರೆಕ್ಷನ್‌ ಮಾಡ್ತಾರೆ, ಈ ಧಾರಾವಾಹಿಯಿಂದ ನಟನೆ ಕಲಿತಿದ್ದೇನೆ ಎಂದು ಹೇಳಿದರು. 

ನನಗೆ ಸಮಯ ಸಿಕ್ಕಿದಾಗೆಲ್ಲ ಪಾರು ಧಾರಾವಾಹಿ ನೋಡ್ತೀನಿ ಯಾವುದಾದ್ರು ತಪ್ಪುಗಳಿದ್ರೆ ಕರೆಕ್ಷನ್‌ ಮಾಡಿಕೊಡ್ತೀನಿ. ಮೋಕ್ಷಿತಗು ಹೆಚ್ಚಾಗಿ ನನಗೆ ಪಾರುನೆ ಅಚ್ಚುಮೆಚ್ಚು ಪಾರು ಪಾತ್ರದಿಂದಲೇ ಅಭಿಮಾನಿಗಳಿಂದ ಇಷ್ಟೊಂದು ಪ್ರೀತಿ ಸಿಕ್ಕಿದೆ. ಸುಮಾರು 250 ಹುಡುಗಿಯರಿಗೆ ಆಡಿಷನ್‌ ಮಾಡಿದ ನಂತರ ನಾನು ಪಾರು ಪಾತ್ರಕ್ಕೆ ಆಯ್ಕೆಯಾದೆ. ಒಬ್ಬ ಕಲಾವಿದೆಯಾಗಿ ನನ್ನ ಕೆಲಸಕ್ಕೆ ತುಂಬಾ ಗೌರವ ಕೊಡ್ತೀನಿ. ಕಾಲೇಜ್‌ ಟೈಮಿನಲ್ಲಿ ಧಾರಾವಾಹಿಗಳಿಗೆ ಸಾಕಷ್ಟು ಆಫರ್ಸ್‌ಗಳು ಬಂದವು ಆದ್ರೆ ಹೆಚ್ಚಾಗಿ ಗಮನ ಕೊಟ್ಟಿರಲಿಲ್ಲ. ನನ್ನ ಡ್ರೀಮ್‌ ರೋಲ್‌ ನಟಿ ಮಾಲಾಶ್ರೀ ಮೇಡಂ ರೀತಿಯಲ್ಲೆ ನಟನೆ ಮಾಡಬೇಕು ಅಂತಾ ತುಂಬಾ ಆಸಕ್ತಿ ಇದೆ ಎಂದು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News