ನವದೆಹಲಿ:ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರು 'ದೇ ದೆ ಪ್ಯಾರ್ ದೇ', 'ಐಯಾರಿ' ಮತ್ತು 'ಮಾರ್ಜಾವಾ' ಚಿತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಭಿನಯ ಮತ್ತು ಬೋಲ್ಡ್ ನೆಸ್ ಹೆಸರುವಾಸಿಯಾದ ಚಿತ್ರೋದ್ಯೋಮದ ನಟಿಯರಲ್ಲಿ ರಕುಲ್‌ಪ್ರೀತ್ ಕೂಡ ಒಬ್ಬರು. ಕಳೆದ ಕೆಲ ದಿನಗಳ ಹಿಂದೆ ರಕುಲ್ ಪ್ರೀತ್ ಸಿಂಗ್ ತಮ್ಮ ಬಿಕಿನಿ ಅವತಾರದಿಂದ ಅಭಿಮಾನಿಗಳ ಗಮನ ಸೆಳೆದಿದ್ದರು. ಈ ವೇಳೆ ಹಲವರು ರಕುಲ್ ನೀಡಿದ್ದ ಪೋಸ್ ಗೆ ಅವಳನ್ನು ಟ್ರೋಲ್ ಕೂಡ ಮಾಡಿದ್ದರು. ಆದರೆ ಈಗ ನಟಿ ಅಂತಹ ಜನರಿಗೆ ಸೂಕ್ತವಾದ ಉತ್ತರವನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕೊರೊನಾ ವೈರಸ್ ಹಿನ್ನೆಲೆ ಸಧ್ಯ ದೇಶಾದ್ಯಂತ ಲಾಕ್ ಡೌನ್ 3.0 ಮುಂದುವರೆದಿದೆ. ಇಂತಹುದರಲ್ಲಿ ಬಾಲಿವುಡ್ ಕಣ್ಮಣಿಗಳೂ ಕೂಡ ತಮ್ಮ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಈ ನಡುವೆ ರಕುಲ್ ಕೂಡ ತನ್ನ ಬೋಲ್ಡ್ ಚಿತ್ರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡು ಕಾಲಕಳೆಯುತ್ತಿದ್ದಾಳೆ. ಅವರು ಹಂಚಿಕೊಳ್ಳುವ ಭಾವಚಿತ್ರಗಳಿಗೆ ಹಲವು ಜನರು ಟ್ರೋಲ್ ಕೂಡ ಮಾಡುತ್ತಾರೆ. ಬಾಲಿವುಡ್ ಲೈಫ್ ಡಾಟ್ ಕಾಮ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ರಕುಲ್ ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಅಂತಹವರ ಬಾಯಿ ಮುಚ್ಚಿಸಿದ್ದರು ಎನ್ನಲಾಗಿದೆ. ಈ ಸಂದರ್ಶನದಲ್ಲಿ ಮಾತನಾಡಿದ್ದ ರಕುಲ್, ತನ್ನ ಪೋಷಕರಿಗೆ ಬಿಕಿನಿ ಅವತಾರದ ಕುರಿತು ಯಾವುದೇ ಆಕ್ಷೇಪ ಇಲ್ಲ, ಉಲ್ಟಾ ಅವರು ನನಗೆ ಸಪೋರ್ಟ್ ಮಾಡುತ್ತಾರೆ ಎಂದು ಹೇಳಿದ್ದಾಳೆ.



ಈ ಕುರಿತು ಮಾತನಾಡಿದ್ದ ರಕುಲ್ ಪ್ರೀತ್, "ಇಂದಿನ ಕಾಲದಲ್ಲಿ ಬಹುತೇಕ ಮಕ್ಕಳಿಗೆ ತಮ್ಮ ಕುಟುಂಬದ ಬೆಂಬಲ ಸಿಗುವುದಿಲ್ಲ. ಆದರೆ, ನನ್ನ ಪೋಷಕರು ತುಂಬಾ ಸಪೋರ್ಟಿವ ಆಗಿದ್ದಾರೆ. ನನ್ನ ಬಿಕಿನಿ ಅವತಾರದ ಕುರಿತು ನನಗಿಂತ ನನ್ನ ಪೋಷಕರೇ ತುಂಬಾ ಕಾನ್ಫಿಡೆಂಟ್ ಆಗಿದ್ದಾರೆ. ಅಷ್ಟೇ ಯಾಕೆ ನಾವು ಶಾಪಿಂಗ್ ಗೆ ಹೋದಾಗ ನನ್ನ ತಂದೆ ನೀನು ಸಾಮಾನ್ಯ ಬಿಕಿನಿ ತೆಗೆದುಕೊಳ್ಳುವ ಬದಲು ಬಣ್ಣದ ಬಿಕಿನಿ ತೆಗೆದುಕೊಂಡರೆ ಇನ್ನೂ ಚೆನ್ನಾಗಿ ಕಾಣಿಸುತ್ತದೆ ಎಂಬ ವಿಶ್ವಾಸ ನೀಡುತ್ತಾರೆ ಎಂದು ರಕುಲ್ ಹೇಳಿದ್ದಾರೆ.



ಇದೇವೇಳೆ ತನ್ನ ಕುಟುಂಬದ ಕುರಿತು ಮಾತನಾಡಿರುವ ರಕುಲ್, "ನನ್ನ ತಾಯಿ ನನಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ನಾನು ಮತ್ತು ಅಮನ್ ಓದುತ್ತಿದ್ದ ಕಾಲೇಜಿನಲ್ಲಿಯೇ ನನ್ನ ತಾಯಿ ಪಾಠ ಹೇಳುತ್ತಿದ್ದರು. ನನ್ನ ತಂದೆಯ ಕೆಲಸದ ಕಾರಣ ನಾವು ನಿರಂತರವಾಗಿ ಸ್ಥಳಗಳನ್ನು ಬದಲಾಯಿಸಬೇಕಾಯಿತು. ಆದರೆ, ನಾನು ನಟಿಯಾದ ಬಳಿಕ ನನ್ನ ತಮ್ಮ ತನ್ನ ಆಟಗಳತ್ತ ಗಮನ ಹರಿಸಬೇಕು ಎಂಬ ಉದ್ದೇಶದಿಂದ ನಮ್ಮ ತಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ರಕುಲ್ ತನ್ನ ಜೀವನವನ್ನು ತನ್ನದೇ ಆದ ಶೈಲಿಯಲ್ಲಿ ಬದಕುತ್ತಾಳೆ ಎಂಬುದು ಆವಳನ್ನು ಟ್ರೋಲ್ ಮಾಡುವ ಜನರಿಗೆ ಅರ್ಥವಾಗಿರಬಹುದು.


ರಕುಲ್ ಪ್ರೀತ್ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಶೀಘ್ರದಲ್ಲಿಯೇ ರಕುಲ್ ಜಾನ್ ಅಬ್ರಾಹಂ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಅಭಿನಯದ 'ಅಟ್ಯಾಕ್' ಹೆಸರಿನ ಆಕ್ಷನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಅಷ್ಟೇ ಅಲ್ಲ ಅರ್ಜುನ್ ಕಪೂರ್ ಅವರ ಶೀರ್ಷಿಕೆ ನಿಗದಿಯಾಗದ ಮತ್ತೊಂದು ಚಿತ್ರದಲ್ಲಿಯೂ ಕೂಡ ರಕುಲ್ ಕಾಣಿಸಿಕೊಳ್ಳಲಿದ್ದಾರೆ.