ನವದೆಹಲಿ : ರಣಬೀರ್ ಕಪೂರ್  (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅಭಿನಯದ 'ಬ್ರಹ್ಮಾಸ್ತ್ರ' (Brahmastra)  ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ, ಆಲಿಯಾ ಮತ್ತು ರಣಬೀರ್ ಕಾಣಿಸಿಕೊಂಡಿದ್ದಾರೆ. ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿವೆ.


COMMERCIAL BREAK
SCROLL TO CONTINUE READING

ಜೊತೆಯಾಗಿ ಕಾಣಿಸಿಕೊಂಡ ರಣಬೀರ್ ಆಲಿಯಾ : 
ಅಭಿಮಾನಿಗಳಿಗೆ ಕೊನೆಗೂ ರಣಬೀರ್ ಕಪೂರ್ (Ranbir Kapoor) ಅಭಿನಯದ ಬಹು ನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ'ದ ಒಂದು ಝಲಕ್ ಸಿಕ್ಕಿದೆ.  ಅಯನ್ ಮುಖರ್ಜಿ (Ayan Mukerji) ನಿರ್ದೇಶನದ ಈ ಚಿತ್ರದ ಪ್ರಮೋಷನ್ ಪೋಸ್ಟರ್ ಲಾಂಚ್ ಆಗಿದೆ. ಈ ಸಂದರ್ಭದಲ್ಲಿ, ಲವ್ ಬರ್ಡ್ಸ್ ಗಳಾದ ಆಲಿಯಾ ಭಟ್ (Alia Bhatt)  ಮತ್ತು ರಣಬೀರ್ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವೇದಿಕೆಯಲ್ಲಿ  ರಣಬೀರ್ (Ranbir Kapoor) ಮತ್ತು ಆಲಿಯಾ  ಮೋಹಕತೆ ಮತ್ತು ಕೆಮಿಸ್ಟ್ರಿ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ವಿಶೇಷ ಸಂದರ್ಭದಲ್ಲಿ, ರಣಬೀರ್ ತನ್ನ ದಿವಂಗತ ತಂದೆ ರಿಷಿ ಕಪೂರ್ ಅವರನ್ನು ನೆನಪಿಸಿಕೊಂಡಿದ್ದಾರೆ.  


ಇದನ್ನೂ ಓದಿ : ಮುಂಬೈ ಡ್ರಗ್ಸ್ ಪ್ರಕರಣ : ಆರ್ಯನ್ ಖಾನ್ ಗೆ ಬಿಗ್ ರಿಲೀಫ್, ಕೋರ್ಟ್ ನೀಡಿದೆ ಆದೇಶ


ಆಲಿಯಾ ಕಾಲೆಳೆದ ರಣಬೀರ್ : 
ಕೆಂಪು ಬಣ್ಣದ  ಡ್ರೆಸ್ ನಲ್ಲಿ ಆಲಿಯಾ ತುಂಬಾ ಮೋಹಕವಾಗಿ ಕಾಣುತ್ತಿದ್ದರು. ಅದೇ ಸಮಯದಲ್ಲಿ, ರಣಬೀರ್ ನೀಲಿ ಶರ್ಟ್ ಮತ್ತು ಆಲಿವ್ ಗ್ರೀನ್ ಬಣ್ಣದ ಜಾಕೆಟ್ ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಇಲ್ಲಿ ಮಾತಿನಲ್ಲೇ ಆಲಿಯಾ ಕಾಲೆಳೆದ ರಣಬೀರ್ ಕಪೂರ್, ಆಲಿಯಾಳ ಜೀವನದಲ್ಲಿ R ಎಂದರೆ ಏನು ಎಂದು ತಮಾಷೆಯಾಗಿ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಲಾಗದೆ ಆಲಿಯಾ  ನಾಚಿದ್ದಾರೆ. ನಂತರ ಈ ಪ್ರಶ್ನೆಗೆ ಉತ್ತರಿಸಿದ ಆಲಿಯಾ ರಣಬೀರ್ ಜೀವನದಲ್ಲಿ A ಎಂದರೆ ಏನು ಎಂಬ ಮರು ಪ್ರಶ್ನೆ ಹಾಕಿದ್ದಾರೆ. 




  
ರಿಶಿ ಕಪೂರ್ ಕಾಪಿ ಮಾಡಿದ ರಣಬೀರ್ : 
 ಈ ವಿಡಿಯೋದಲ್ಲಿ ಇಬ್ಬರ ನಡುವಿನ ಬಾಂಡಿಂಗ್ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇನ್ನು ತಮ್ಮ ತಂದೆ ರಿಷಿ ಕಪೂರ್ (Rishi Kapoor) ಅವರ ಪ್ರಸಿದ್ಧ ಸಂಭಾಷಣೆಯನ್ನು ರಣಬೀರ್ ಮಿಮಿಕ್ ಮಾಡಿದ್ದಾರೆ.



 


ಇದನ್ನೂ ಓದಿ : Miss Universe 2021: ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ತೊಟ್ಟ ಗೌನ್ ವಿನ್ಯಾಸಗೊಳಿಸಿದ್ದು ಒಬ್ಬ ತೃತೀಯ ಲಿಂಗಿ!


ಕರಣ್ ಜೋಹರ್ (Karan Johar) ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಅಯನ್ ಮುಖರ್ಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಮುಂದಿನ ವರ್ಷ ಸೆಪ್ಟೆಂಬರ್ 9 ರಂದು ತೆರೆ ಕಾಣಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.