Ranbir Kapoor Alia Bhatt Baby : ಬಾಲಿವುಡ್ ನಟಿ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಇಂದು ಬೆಳಗ್ಗೆ ಹೆರಿಗೆ ಬೇನೆ ಕಾಣಿಸಿಕೊಂಡ ಕಾರಣ ಪತಿ ರಣಬೀರ್ ಕಪೂರ್ ಆಸ್ಪತ್ರೆಗೆ ದಾಖಲಿಸಿದ್ದರು. ಆಲಿಯಾ ಭಟ್ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.


COMMERCIAL BREAK
SCROLL TO CONTINUE READING

ಆಲಿಯಾ ಭಟ್ ಅವರನ್ನು ಹೆರಿಗೆಗೆ ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆಯಿಂದ ಆಲಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗಿನಿಂದ ಕುಟುಂಬ ಮತ್ತು ಅಭಿಮಾನಿಗಳು ರಣಬೀರ್ ಆಲಿಯಾ ಅವರ ಮೊದಲ ಮಗುವಿಗಾಗಿ ಕಾತರದಿಂದ ಕಾಯುತ್ತಿದ್ದರು. 


ಇದನ್ನೂ ಓದಿ : 'ಕಾಂತಾರ' ಸಿನಿಮಾ ನನ್ನದೇ : ರಿಷಬ್‌ ಶೆಟ್ಟಿ ಚಿತ್ರದ ಕುರಿತು ಯಶ್‌ ಶಾಕಿಂಗ್‌ ಹೇಳಿಕೆ..!


ಬೇಬಿ ಶವರ್ ಫೋಟೋಗಳು ವೈರಲ್


ರಣಬೀರ್ ಆಲಿಯಾ ಅವರ ಹೆಣ್ಣು ಮಗುವಿನ ಮೊದಲ ಫೋಟೋ ಮತ್ತು ಹೆಸರಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ, ಆಲಿಯಾ ಬೇಬಿ ಶವರ್ ಸೆಲೆಬ್ರೇಷನ್ ಮಾಡಿಕೊಂಡಿದ್ದರು. ಬೇಬಿ ಶವರ್ ನ ಸುಂದರವಾದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗಿವೆ.


ಡೆಲಿವರಿ ಡೇಟ್ ಬಗ್ಗೆ ಸುದ್ದಿ ಹರಿದಾಡುತ್ತಿದ್ದವು


ಈ ಹಿಂದೆ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಅಲಿಯಾ ತಾಯಿಯಾಗಬಹುದು ಎಂಬ ಸುದ್ದಿ ಇತ್ತು. ಆದಾಗ್ಯೂ, ಆಲಿಯಾ ಭಟ್ ತನ್ನ ಹೆರಿಗೆಗಾಗಿ ಬೆಳಿಗ್ಗೆ 7:30 ಕ್ಕೆ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿದ್ದರು.


ಮದುವೆಯಾದ 7 ತಿಂಗಳ ನಂತರ ಹೆಣ್ಣು ಮಗುವಿಗೆ ಜನ್ಮ


ಮದುವೆಯಾದ ಎರಡು ತಿಂಗಳ ನಂತರವೇ ಆಲಿಯಾ ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ನೀಡಿದ್ದರು. ಈ ಸಂತಸದ ಸುದ್ದಿಯನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಸೋನೋಗ್ರಫಿ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಹಾಗೆ, ಏಪ್ರಿಲ್ 14 ಕ್ಕೆ ಮದುವೆಯಾಗಿ ಏಳು ತಿಂಗಳುಗಳು ಪೂರ್ಣಗೊಳ್ಳುವ ಮೊದಲೇ ಆಲಿಯಾ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.


ಇದನ್ನೂ ಓದಿ : ಈಗಿನ ಸಿನಿಮಾಗಳಲ್ಲಿ ನಮ್ಮ ನೆಲದ ಕಥೆ ಇರಲ್ಲ, ಹಾಲಿವುಡ್‌ ಸಂಪ್ರದಾಯವೇ ಹೆಚ್ಚು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.