ಅನುಷ್ಕಾ ಶರ್ಮಾನ ಮದುವೆ ಆಗ್ಬೇಕು ಅಂದುಕೊಂಡಿದ್ದೆ ಆದ್ರೆ, ಕೊಹ್ಲಿ..! ನಟ ರಣಬೀರ್ ಶಾಕಿಂಗ್ ಹೇಳಿಕೆ
Ranbir kapoor on Anushka sharma : ರಣಬೀರ್ ಕಪೂರ್ ಹಾಗು ನಟಿ ಆಲಿಯಾ ಭಟ್ ಇಬ್ಬರು ಕಳೆದ ವರ್ಷ ಎಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಹಲವು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದರು. ಇಷ್ಟು ದಿನಗಳು ಆದಮೇಲೆ ಆಲಿಯಾ ಮದುವೆಯಾಗಲು ಇಷ್ಟವಿರಲಿಲ್ಲ.
Ranbir kapoor : ಬಾಲಿವುಡ್ ನಟ ರಣಬೀರ್ ಕಪೂರ್ ಹಾಗು ಆಲಿಯಾ ಭಟ್ ಮದುವೆಯಾಗಿ ಒಂದು ವರ್ಷ ಕಳೆದಿದೆ. ಈ ಜೋಡಿ ಒಂದು ಮಗುವಿಗೂ ಸಹ ಜನ್ಮ ನೀಡಿದ್ದಾರೆ. ಆದರೂ ನಟ ರಣಬೀರ್ ಇಷ್ಟು ದಿನಗಳು ಆದಮೇಲೆ ಆಲಿಯಾ ಮದುವೆಯಾಗಲು ಇಷ್ಟವಿರಲಿಲ್ಲ. ಬೇರೊಬ್ಬಳನ್ನು ಮದುವೆಯಾಗಿಲು ಇಚ್ಛಿಸಿದ್ದೆ ಎಂಬ ಕಹಿ ಸತ್ಯ ಹೊರ ಹಾಕಿದ್ದಾರೆ. ಹಾಗಾದ್ರೆ ರಣಬೀರ್ ನಿಜವಾಗಿಲು ಇಷ್ಟ ಪಟ್ಟು ಮದುವೆಯಾಗಲು ಬಯಸಿದ್ದು ಯಾರನ್ನ? ಈ ಕುರಿತ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
ಹೌದು.. ನಟ ರಣಬೀರ್ ಕಪೂರ್ ಹಾಗು ನಟಿ ಆಲಿಯಾ ಭಟ್ ಇಬ್ಬರು ಕಳೆದ ವರ್ಷ ಎಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಹಲವು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದರು. ಈ ಜೋಡಿ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮದುವೆಯ ನಂತರ ಕೆಲವು ದಿನಗಳಲ್ಲಿ ಆಲಿಯಾ ಗರ್ಭಿಣಿಯಾದರು. ಆ ಸಮಯದಲ್ಲಿ ಆಲಿಯಾ ಮದುವೆ ಆಗಿ ಇಷ್ಟು ಬೇಗ ಗರ್ಭಿಯಾಗಲು ಸಾಧ್ಯನಾ ಎಂಬ ಮಾತು ಹರಿದಾಡುತಿತ್ತು.
ಇದನ್ನೂ ಓದಿ: ಕಮಲ್ ಹಾಸನ್ ಜೋಡಿಯಾಗಲಿರುವ ನಯನತಾರಾ..! ಕ್ರೇಜಿ ಕಾಂಬಿನೇಷನ್ ಸಿನಿಮಾ ಸೆಟ್ಟೆರೋದು ಯಾವಾಗ?
ಇಬ್ಬರಿಗೂ ಮದುವೆಯಾಗಿ ಒಂದು ವರ್ಷದ ಒಳಗೆ ಮಗುವಾಯಿತು. ಕಳೆದ ವರ್ಷ ನವೆಂಬರ್ 6ನೇ ತಾರೀಕಿನಂದು ಒಂದು ಹೆಣ್ಣು ಮಗುವಿಗೆ ಆಲಿಯಾ ಜನ್ಮ ನೀಡಿದರು. ಹಾಗೆ ಆ ಮುದ್ದಾದ ಹೆಣ್ಣು ಮಗುವಿಗೆ ರಾಹಾ ಎಂಬ ಹೆಸರನ್ನು ಇಟ್ಟಿದ್ದಾರೆ. ಆಲಿಯಾ ರಣಬೀರ್ ತಮ್ಮ ಮಗಳ ಜೊತೆಗಿನ ಫೋಟೋಗಳ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಈ ಕುಟುಂಬ ಚೆನ್ನಾಗಿ ಜೀವನ ಸಾಗಿಸುತ್ತಿರುವಾಗ ಒಂದು ಶಾಕಿಂಗ್ ವಿಚಾರ ಹೊರಬಂದಿದೆ. ನಟ ರಣಬೀರ್ ಆಲಿಯಾ ಅವರನ್ನು ಮದುವೆ ಆಗುವ ಮುಂಚೆ ಬೇರೆ ನಟಿಯೊಬ್ಬರನ್ನು ಮದುವೆಯಾಗಲು ಬಯಸಿದ್ದರಂತೆ. ಈ ಹಿಂದೆ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಜೊತೆ ಕೂಡ ರಣಬೀರ್ ಕಪೂರ್ ಹೆಸರು ಕೇಳಿ ಬಂದಿತ್ತು. ಅನೇಕ ಬಾರಿ ಲವ್ ಫೇಲ್ಯೂರ್ ಆದ ಬಳಿಕ ರಣಬೀರ್ ಕಪೂರ್ ಆಲಿಯಾಳನ್ನು ಮದುವೆಯಾದರು ಎನ್ನುವ ಸುದ್ದಿ ಕೂಡ ಹಬ್ಬಿತ್ತು.
ಇದನ್ನೂ ಓದಿ: ಕಿಚ್ಚನಿಗೆ ಜೋಡಿಯಾದ ರಾಕಿಯ ರೀನಾ...ಸುದೀಪ್ 47ನೇ ಸಿನಿಮಾಗೆ ಶ್ರೀನಿಧಿ ಶೆಟ್ಟಿ ನಾಯಕಿ...!
ಇವರಿಬ್ಬರು ತುಂಬಾ ಖುಷಿಯಾಗಿ ಬಾಳುತ್ತಿರುವಾಗ, ರಣಬೀರ್ ಒಂದು ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಸದ್ಯ ಈ ಜೋಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಣಬೀರ್ ಆಲಿಯಾ ಅವರನ್ನು ಮದುವೆಯಾಗಲು ನಿರಾಕರಿಸಿದ್ದರು ಎಂದು ವೈರಲ್ ವಿಡಿಯೋದ ಮೂಲಕ ತಿಳಿದುಬಂದಿದೆ.
ನಟ ರಣಬೀರ್ ಕರಣ್ ಜೋಹರ್ ಅವರ ರಿಯಾಲಿಟಿ ಶೋ ಕಾಫಿ ವಿತ್ ಕರಣ್‌ನ ರಾಪಿಡ್ ಫೈರ್ ರೌಂಡ್‌ನ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಕರಣ್ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಇದೇ ವೇಳೆ ಕರಣ್ ರಣಬೀರ್ ಕಪೂರ್‌ಗೆ ಒಂದು ಪ್ರಶ್ನೆಯನ್ನು ಕೇಳಿದ್ದರು, ನೀವು ಇವರಲ್ಲಿ ಯಾರನ್ನು ಮದುವೆಯಾಗುತ್ತೀರಿ? ಅಂತ ಅನುಷ್ಕಾ, ಆಲಿಯಾ ಮತ್ತು ಜಾಕ್ವೆಲಿನ್ ಹೆಸರನ್ನು ಹೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ರಣಬೀರ್, ತಾನು ಅನುಷ್ಕಾಳನ್ನು ಮದುವೆಯಾಗಲು ಬಯಸಿದ್ದಾಗಿ ಹೇಳಿದ್ದರು.
ಇದನ್ನೂ ಓದಿ: ಕಮಲ್ ಹಾಸನ್ ಜೋಡಿಯಾಗಲಿರುವ ನಯನತಾರಾ..! ಕ್ರೇಜಿ ಕಾಂಬಿನೇಷನ್ ಸಿನಿಮಾ ಸೆಟ್ಟೆರೋದು ಯಾವಾಗ?
ರಣಬೀರ್ ನಾನು ಅನುಷ್ಕಾಳನ್ನು ಮದುವೆಯಾಗುತ್ತೇನೆ ಆದರೆ ಅವಳು ಈಗಾಗಲೇ ಮದುವೆಯಾಗಿದ್ದಾರೆ. ಉಳಿದ ಇಬ್ಬರನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದರು. ಕಾಫಿ ವಿತ್ ಕರಣ್ ಶೋದಲ್ಲಿ ರಣಬೀರ್ ಕಪೂರ್ ನೀಡಿದ್ದ ಹೇಳಿಕೆಯ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ರಣಬೀರ್‌ನ್ನು ಸಿಕ್ಕಾ ಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.