ಕಮಲ್ ಹಾಸನ್ ಜೋಡಿಯಾಗಲಿರುವ ನಯನತಾರಾ..! ಕ್ರೇಜಿ ಕಾಂಬಿನೇಷನ್ ಸಿನಿಮಾ ಸೆಟ್ಟೆರೋದು ಯಾವಾಗ?

Nayanathara-Kamal Hasan: ಜವಾನ್‌ ಚಿತ್ರದ ಮೂಲಕ ಕ್ರೇಜ್‌ ಹೆಚ್ಚಿಸಿಕೊಂಡ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಸದ್ಯ ಖ್ಯಾತ ನಟ ಕಮಲ್‌ ಹಾಸನ್‌ಗೆ ಜೋಡಿಯಾಗಲಿದ್ದಾರಂತೆ. ಹಾಗಾದರೆ ಯಾವುದು ಆ ಸಿನಿಮಾ? ಯಾವಾಗ ಸೆಟ್ಟೆರುತ್ತೆ ಅಂತೀರಾ ಈ ಸ್ಟೋರಿ ಓದಿ..  

Written by - Savita M B | Last Updated : Oct 22, 2023, 11:14 AM IST
  • ಇಂಡಸ್ಟ್ರಿಯಲ್ಲಿ ಕೆಲವು ಹೀರೋಯಿನ್ ಗಳು ಕೆಲವು ಹೀರೋಗಳ ಜೊತೆ ಸಿನಿಮಾ ಮಾಡಿಲ್ಲ
  • ಆ ಕಾಂಬಿನೇಷನ್ ನಲ್ಲಿ ಸಿನಿಮಾಗಳು ಯಾಕೆ ಬರಲಿಲ್ಲ ಅಂತ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಂತೂ ಸುಳ್ಳಲ್ಲ
  • ನಯನತಾರಾ ಸಹ ಕಮಲ್ ಹಾಸನ್ ಜೊತೆ ನಟಿಸಿರಲಿಲ್ಲ.
ಕಮಲ್ ಹಾಸನ್ ಜೋಡಿಯಾಗಲಿರುವ ನಯನತಾರಾ..! ಕ್ರೇಜಿ ಕಾಂಬಿನೇಷನ್ ಸಿನಿಮಾ ಸೆಟ್ಟೆರೋದು ಯಾವಾಗ?  title=

Kollywood News: ಇಂಡಸ್ಟ್ರಿಯಲ್ಲಿ ಕೆಲವು ಹೀರೋಯಿನ್ ಗಳು ಕೆಲವು ಹೀರೋಗಳ ಜೊತೆ ಸಿನಿಮಾ ಮಾಡಿಲ್ಲ. ಆ ಕಾಂಬಿನೇಷನ್ ನಲ್ಲಿ ಸಿನಿಮಾಗಳು ಯಾಕೆ ಬರಲಿಲ್ಲ ಅಂತ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಂತೂ ಸುಳ್ಳಲ್ಲ. ಕಾಜಲ್ ತಮ್ಮ ಇಡೀ ವೃತ್ತಿ ಜೀವನದಲ್ಲಿ ಬಾಲಯ್ಯ ಜೊತೆ ಸಿನಿಮಾ ಮಾಡಿರಲಿಲ್ಲ. ನಯನತಾರಾ ಸಹ ಕಮಲ್ ಹಾಸನ್ ಜೊತೆ ನಟಿಸಿರಲಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಯೂ ಸಿನಿಮಾ ಮಾಡಿರುವ ನಯನ್ ಗೆ ಕಮಲ್ ಜೊತೆ ಒಂದಾಗುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ತೆರೆಗೆ ಬರಲಿದೆಯಂತೆ. 

ತಮ್ಮ ಸಿನಿಮಾ ಕೆರಿಯರ್ ಮುಗಿದೇ ಹೋಯಿತು ಎಂದುಕೊಂಡಿದ್ದಾಗಲೇ ಖ್ಯಾತ ನಟ ಕಮಲ್ ಹಾಸನ್ ವಿಕ್ರಮ್ ಸಿನಿಮಾದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಗಳಿಸಿದರು. ಕಮಲ್ ಒಂದರ ನಂತರ ಒಂದರಂತೆ ಚಿತ್ರಗಳನ್ನು ಯೋಜಿಸುತ್ತಿದ್ದಾರೆ ಮತ್ತು ಕಮಲ್ ಹಾಸನ್ ಪ್ರಸ್ತುತ ಪ್ರಭಾಸ್ ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್ ಕಲ್ಕಿ 2898 AD ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ-ಕಿಚ್ಚನಿಗೆ ಜೋಡಿಯಾದ ರಾಕಿಯ ರೀನಾ...ಸುದೀಪ್ 47ನೇ ಸಿನಿಮಾಗೆ ಶ್ರೀನಿಧಿ ಶೆಟ್ಟಿ ನಾಯಕಿ...!

ಕಲ್ಕಿ ವಿಷಯ ಬಿಟ್ಟು.. ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ಸಿನಿಮಾ ಮಾಡಲಿದ್ದಾರೆ. ಭಾರಿ ಬಜೆಟ್‌ನಲ್ಲಿ ಸಿನಿಮಾ ತೆರೆಕಾಣುತ್ತಿದೆ. ಈ ಹಿಂದೆ ಕಮಲ್-ಮಣಿರತ್ನಂ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಸಿನಿಮಾ ಎಷ್ಟು ಬ್ಲಾಕ್‌ಬಸ್ಟರ್ ಆಗಿತ್ತು ಎಂಬುದು ಗೊತ್ತೇ ಇದೆ. ಈ ಚಿತ್ರ ಇಬ್ಬರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲೂ ಆಯಿತು. ಬಹಳ ದಿನಗಳ ನಂತರ ಈ ಕಾಂಬಿನೇಷನ್ ನಲ್ಲಿ ಮತ್ತೆ ಸಿನಿಮಾ ಬರುತ್ತಿರುವುದು ಎಲ್ಲರ ಕುತೂಹಲ ಹೆಚ್ಚಿಸಿದೆ. 

ಮಣಿರತ್ನಂ ಅವರೊಂದಿಗಿನ ಈ ಚಿತ್ರ ಕಮಲ್ ಹಾಸನ್ ಅವರ ವೃತ್ತಿಜೀವನದ 234 ನೇ ಚಿತ್ರವಾಗಲಿದೆ. ಆದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ಯಾರು ನಟಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಮೊದಲು ಈ ಚಿತ್ರಕ್ಕೆ ತ್ರಿಷಾ ನಾಯಕಿ ಎಂದು ಭಾವಿಸಲಾಗಿತ್ತು. 

ಇದನ್ನೂ ಓದಿ-ಕೆಜಿಎಫ್​ ʼನಿಧಿʼಗೆ ಇಂದು ಹುಟ್ಟು ಹಬ್ಬದ ಸಂಭ್ರಮ..! ಸುಂದರಿಯ ಫೋಟೋಸ್‌ ಇಲ್ಲಿವೆ

ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದರು. ಆದರೆ ವಿಜಯ್ ಲಿಯೋ ಚಿತ್ರದ ಮೂಲಕ ಫಾರ್ಮ್ ಗೆ ಬಂದಿದ್ದರಿಂದ ಕಮಲ್ ಚಿತ್ರದಲ್ಲೂ ತ್ರಿಷಾಳನ್ನೇ ಹಾಕಲು ಬಯಸಿದ್ದರು. ಆದರೆ ಅದು ಬದಲಾಗಿ ಈಗ ಆ ಜಾಗಕ್ಕೆ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಬಂದಿದ್ದಾರೆ ಎನ್ನಲಾಗುತ್ತಿದೆ. 

ತಮಿಳಿನಲ್ಲಿ ನಯನ್‌ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದರು. ಆದರೆ ಆಕೆ ಅದನ್ನು ಕಮಲ್ ಹಾಸನ್ ಜೊತೆ ಮಾಡಲಿಲ್ಲ. ಶೀಘ್ರದಲ್ಲೇ ಈ ಅಪರೂಪದ ಕಾಂಬೊ ಕೂಡ ಸೆಟ್ಟೇರಲಿದೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಲಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News