ಕಿಚ್ಚನಿಗೆ ಜೋಡಿಯಾದ ರಾಕಿಯ ರೀನಾ...ಸುದೀಪ್ 47ನೇ ಸಿನಿಮಾಗೆ ಶ್ರೀನಿಧಿ ಶೆಟ್ಟಿ ನಾಯಕಿ...!

ತಮಿಳಿನ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಪಿಕ್ಚರ್ಸ್‌, ಕಿಚ್ಚ ಸುದೀಪ್‌ ಅವರ #K47 ಚಿತ್ರ ನಿರ್ಮಿಸುತ್ತಿರುವುದು ಗೊತ್ತೇ ಇದೆ. ಇದೀಗ  ನಾಯಕಿಯನ್ನು ಘೋಷಣೆ ಮಾಡುವ ಮೂಲಕ ಶ್ರೀನಿಧಿಯನ್ನು ತಂಡಕ್ಕೆ ಸ್ವಾಗತಿಸಿದೆ ನಿರ್ಮಾಣ ಸಂಸ್ಥೆ. ಇಂದು ಕೆಜಿಎಫ್ ರೀನಾ ಉರೂಫ್ ಶ್ರೀನಿಧಿ ಅವರ ಬರ್ತ್‌ಡೇ. ಆ ಪ್ರಯುಕ್ತ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದೆ ಸಿನಿಮಾ ಬಳಗ. 

Written by - YASHODHA POOJARI | Edited by - Manjunath N | Last Updated : Oct 22, 2023, 12:08 AM IST
  • ಕಿಚ್ಚನ 47ನೇ ಚಿತ್ರವನ್ನು ಚೇರನ್‌ ನಿರ್ದೇಶನ ಮಾಡಲಿದ್ದಾರೆ.
  • ಚೇರನ್‌ ತಮಿಳಿನಲ್ಲಿ ಆಟೋಗ್ರಾಫ್‌ ಚಿತ್ರ ನಿರ್ದೇಶಿಸಿದ್ದರು. ಅದೇ ಚಿತ್ರವನ್ನು ಸುದೀಪ್‌, ಕನ್ನಡಕ್ಕೆ ಮೈ ಆಟೋಗ್ರಾಫ್‌ ಹೆಸರಲ್ಲಿ ರಿಮೇಕ್‌ ಮಾಡಿದ್ದರು.
  • ಇದೀ ಕಿಚ್ಚ-ಚೇರನ್ ಹಾಗೂ ಸತ್ಯ ಜ್ಯೋತಿ ಪಿಕ್ಚರ್ಸ್ ಸಂಗಮದ ಈ ಚಿತ್ರದಲ್ಲಿ ಶ್ರೀನಿಧಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಕಿಚ್ಚನಿಗೆ ಜೋಡಿಯಾದ ರಾಕಿಯ ರೀನಾ...ಸುದೀಪ್ 47ನೇ ಸಿನಿಮಾಗೆ ಶ್ರೀನಿಧಿ ಶೆಟ್ಟಿ ನಾಯಕಿ...! title=

ಬೆಂಗಳೂರು: ತಮಿಳಿನ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಪಿಕ್ಚರ್ಸ್‌, ಕಿಚ್ಚ ಸುದೀಪ್‌ ಅವರ #K47 ಚಿತ್ರ ನಿರ್ಮಿಸುತ್ತಿರುವುದು ಗೊತ್ತೇ ಇದೆ. ಇದೀಗ  ನಾಯಕಿಯನ್ನು ಘೋಷಣೆ ಮಾಡುವ ಮೂಲಕ ಶ್ರೀನಿಧಿಯನ್ನು ತಂಡಕ್ಕೆ ಸ್ವಾಗತಿಸಿದೆ ನಿರ್ಮಾಣ ಸಂಸ್ಥೆ. ಇಂದು ಕೆಜಿಎಫ್ ರೀನಾ ಉರೂಫ್ ಶ್ರೀನಿಧಿ ಅವರ ಬರ್ತ್‌ಡೇ. ಆ ಪ್ರಯುಕ್ತ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದೆ ಸಿನಿಮಾ ಬಳಗ. 

ಇದನ್ನೂ ಓದಿ: ನೌಕರರ ಬೇಡಿಕೆ ಈಡೆರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ-ಸಚಿವ ಸಂತೋಷ ಲಾಡ

ಕಿಚ್ಚನ 47ನೇ ಚಿತ್ರವನ್ನು ಚೇರನ್‌ ನಿರ್ದೇಶನ ಮಾಡಲಿದ್ದಾರೆ. ಚೇರನ್‌ ತಮಿಳಿನಲ್ಲಿ ಆಟೋಗ್ರಾಫ್‌ ಚಿತ್ರ ನಿರ್ದೇಶಿಸಿದ್ದರು. ಅದೇ ಚಿತ್ರವನ್ನು ಸುದೀಪ್‌, ಕನ್ನಡಕ್ಕೆ ಮೈ ಆಟೋಗ್ರಾಫ್‌ ಹೆಸರಲ್ಲಿ ರಿಮೇಕ್‌ ಮಾಡಿದ್ದರು. ಇದೀ ಕಿಚ್ಚ-ಚೇರನ್ ಹಾಗೂ ಸತ್ಯ ಜ್ಯೋತಿ ಪಿಕ್ಚರ್ಸ್  ಸಂಗಮದ ಈ ಚಿತ್ರದಲ್ಲಿ ಶ್ರೀನಿಧಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಕಿಚ್ಚನಿಗೆ ಶ್ರೀನಿಧಿ ಜೋಡಿಯಾಗಿ ನಟಿಸಲಿದ್ದಾರೆ. ಸದ್ಯ ಸುದೀಪ್ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ #ಕಿಚ್ಚ 47 ಪ್ರಾಜೆಕ್ಟ್ ಟೇಕಾಫ್ ಆಗಲಿದೆ. 

ಕೆಜಿಎಫ್‌ ಸಿನಿಮಾ ಮೂಲಕ ಇಡೀ ಇಂಡಿಯನ್ ಸಿನಿ ಲೋಕಕ್ಕೆ ಶ್ರೀನಿಧಿ ಪರಿಚಿತರಾಗಿದ್ದಾರೆ. ಕೆಜಿಎಫ್‌; ಚಾಪ್ಟರ್‌ 2 ಬಳಿಕ ತಮಿಳಿನ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಮೇಲೆ ಬೇರಾವ ಸಿನಿಮಾ ಒಪ್ಪಿಕೊಳ್ಳದ  ಶ್ರೀನಿಧಿ, ಇತ್ತೀಚೆಗಷ್ಟೇ ತೆಲುಸು ಕದಾ ಹೆಸರಿನ ತೆಲುಗು ಚಿತ್ರಕ್ಕೂ ಆಯ್ಕೆ ಆಗಿದ್ದರು. ಇದೀಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಕಿಚ್ಚನ ಪಕ್ಕದಲ್ಲಿ ನಿಲ್ಲುವ ಬಂಪರ್ ಚಾನ್ಸ್ ತಮ್ಮದಾಗಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News