Randeep hooda marriage : ಬಾಲಿವುಡ್‌ ನಟ ರಣದೀಪ್ ಹೂಡಾ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ನವೆಂಬರ್‌ 29 ರಂದು ತಮ್ಮ ಗೆಳತಿ ಲಿನ್ ಲೈಶ್ರಾಮ್ ಅವರ ಜೊತೆ ಮದುವೆಯಾಗುವುದಾಗಿ ದಿನಾಂಕ ಘೋಷಣೆ ಮಾಡಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದು, ಫ್ಯಾನ್ಸ್‌ಗೆ ಖುಷಿ ತಂದಿದೆ.


COMMERCIAL BREAK
SCROLL TO CONTINUE READING

ಹೌದು.. ರಣದೀಪ್‌ ಹೂಡಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ನಮ್ಮ ಕುಟುಂಬ ಮತ್ತು ಸ್ನೇಹಿತರ ಆಶೀರ್ವಾದದೊಂದಿಗೆ ನಾವು ಮದುವೆಯಾಗುತ್ತಿದ್ದೇವೆ. ನಮ್ಮ ವಿವಾಹವು ನವೆಂಬರ್ 29, 2023 ರಂದು ಇಂಫಾಲ್, ಮಣಿಪುರ, ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ರಾಜ್ ಕಪ್ ಸೀಸನ್-6 ಜರ್ಸಿ ಬಿಡುಗಡೆ..ಕಾರ್ಯಕ್ರಮಕ್ಕೆ ಸಾಥ್ ಕೊಟ್ಟ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್


ರಣದೀಪ್ ಮತ್ತು ಲಿನ್ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಕೂಲ್‌ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಈ ವರ್ಷದ ದೀಪಾವಳಿಯಂದು, ಕೆಲವೊಂದಿಷ್ಟು ಪೋಸ್ಟ್‌ಗಳನ್ನು ಹಂಚಿಕೊಂಡು, "ನಮ್ಮಿಂದ ನಿಮ್ಮವರಿಗೆ ದೀಪಾವಳಿಯ ಶುಭಾಶಯಗಳು" ಎಂದು ಬರೆದು ಹಬ್ಬದ ಶುಭ ಕೋರಿದ್ದರು.


ರಣದೀಪ್ ಹೂಡಾ ಜನ್ನತ್ 2, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್, ಸರ್ಬ್ಜಿತ್, ಸುಲ್ತಾನ್ ಮತ್ತು ಕಿಕ್ ಸೇರಿದಂತೆ ಅನೇಕ ಹಿಟ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಅಲ್ಲದೆ, ಮಾರ್ವೆಲ್ ಸ್ಟಾರ್ ಕ್ರಿಸ್ ಹೆಮ್ಸ್‌ವರ್ತ್ ಸಹ-ನಟಿಸಿದ ಎಕ್ಸ್‌ಟ್ರಾಕ್ಷನ್‌ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ರಣದೀಪ್‌ ಹೂಡಾ ಮದುವೆಯಾಗಲಿರುವ ಲಿನ್ ಮಣಿಪುರದ ರೂಪದರ್ಶಿ, ನಟಿ ಮತ್ತು ಉದ್ಯಮಿ. ಅವರು ಓಂ ಶಾಂತಿ ಓಂ, ಮೇರಿ ಕೋಮ್, ರಂಗೂನ್, ಜಾನೆ ಜಾನ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.