Rani Mukerji life : ಆಗಾಗ ಸಿನಿರಂಗದ ನಟ ನಟಿಯರು ತಮ್ಮ ವಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿರುತ್ತಾರೆ. ತಾವು ಅನುಭವಿಸುತ್ತಿರುವ ಮತ್ತು ಅನುಭವಿಸಿದ ನೋವುಗಳನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿರುತ್ತಾರೆ.. ಇದೀಗ ಬಿಟೌನ್‌ ನಟಿ ತಮ್ಮ ಸಂಸಾರೀಕ ಜೀವನದ ಕುರಿತು ನೀಡಿರುವ ಹೇಳಿಕ ಅವರ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.
 
46ನೇ ವರ್ಷಕ್ಕೆ ಕಾಲಿಟ್ಟಿರುವ ಬಿಟೌನ್‌ ಹಿರಿಯ ನಟಿ ರಾಣಿ ಮುಖರ್ಜಿ ಗಲಟ್ಟಾ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ವಯಕ್ತಿಕ ಜೀವನದ ಕುರಿತು ಹೇಳಿಕೊಂಡಿದ್ದಾರೆ. ನಟಿ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಅನುಭವಿಸಿದ ನೋವುಗಳನ್ನು ತೆರೆದಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನವಿಲಿನಂತೆ ಸಾಂಪ್ರದಾಯಕ ಉಡುಗೆಯಲ್ಲಿ ಕಣ್ಮನ ಸಳೆದ ಕಾಂತಾರ ಸುಂದರಿ!!


ಮೊದಲ ಮಗುವಿನ ನಂತರ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ನಟಿಗೆ ಗರ್ಭಪಾತವಾಗಿತ್ತು. ಇದರಿಂದ ರಾಣಿ ತುಂಬಾ ನೋವನ್ನು ಅನುಭವಿಸಿದ್ದರು. ನಟಿ ತನ್ನ ಎಂಟು ವರ್ಷದ ಮಗಳು ಆದಿರಾಗೆ ತಂಗಿ ಅಥವಾ ತಮ್ಮನನ್ನು ನೀಡಲು ಸಾಧ್ಯವಿಲ್ಲ ಅಂತ ನೊಂದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 


ಏಳು ವರ್ಷಗಳ ಕಾಲ ಎರಡನೇ ಮಗುವಿಗೆ ಪ್ರಯತ್ನಿಸಿದೆ, ಪ್ರಯತ್ನಿಸುತ್ತಲೇ ಇದ್ದೆ. ಅಂತಿಮವಾಗಿ ನಾನು ಗರ್ಭಿಣಿಯಾದೆ ಆದರೆ ಗರ್ಭಪಾತವಾಗಿ, ಆ ಮಗುವನ್ನು ಕಳೆದುಕೊಂಡೆ. ಇದು ನನಗೆ ಸಹಿಸಲಾಗದ ನೋವಾಗಿತ್ತು. ಅಂತ ಕೊರೋನಾ ಸಮಯದಲ್ಲಿ ಸಂಭವಿಸಿದ ಗರ್ಭಪಾತದ ಬಗ್ಗೆ ನಟಿ ರಾಣಿ ಬಹಿರಂಗವಾಗಿ ಮಾತನಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.