Deepika Padukone Ranveer Singh Daughter Dua Third Month Birthday: ಸಿನಿಮಾ ನಟ-ನಟಿಯರು, ಕ್ರಿಕೆಟ್ ಆಟಗಾರರು ಮತ್ತಿತರ ಸೆಲಬ್ರಿಟಿಗಳು ತಮ್ಮ ಮಕ್ಕಳು-ಮೊಮ್ಮಕ್ಕಳಿಗೆ ಹೈಎಂಡ್ ಕಾರು, ಬಂಗ್ಲೆ, ವಿಲ್ಲಾ ರೀತಿ ಕಾಸ್ಟ್ಲಿ ಗಿಫ್ಟ್ ಕೊಡೋದು ಸಾಮಾನ್ಯ. ಆದರೆ ಬಾಲಿವುಡ್ ನ ಬಲು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಅವರ ಮೂರೂ ತಿಂಗಳ ಮಗಳು ದುವಾಗೆ ಅವರಜ್ಜಿ ಅಂದರೆ ರಣವೀರ್ ಸಿಂಗ್ ತಾಯಿ  ಅಂಜು ಭವ್ನಾನಿ ಬೇರೆಯ ರೀತಿಯ ಗಿಫ್ಟ್ ಕೊಟ್ಟಿದ್ದಾರೆ. ಅದೇನು ಅಂದ್ರೆ ಅವರ ಕೂದಲು!


COMMERCIAL BREAK
SCROLL TO CONTINUE READING

ನಿನ್ನೆ ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಮೂರು ತಿಂಗಳು ಪೂರ್ಣಗೊಂಡಿದೆ. ಮಗುವಿನ ಮೂರು ತಿಂಗಳ ಹುಟ್ಟುಹಬ್ಬಕ್ಕಾಗಿ ಅಜ್ಜಿ ಅಂಜು ಭವ್ನಾನಿ ತಮ್ಮ ಕೂದಲನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ. ಜೊತೆಗೆ ಮುದ್ದಿನ ಮೊಮ್ಮಗಳ ಮೂರು ತಿಂಗಳ ಹುಟ್ಟುಹಬ್ಬಕ್ಕೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅಂಜು ಭವ್ನಾನಿ ಅವರ ಪೋಸ್ಟ್ ಕ್ಷಣಮಾತ್ರದಲ್ಲಿ ಭಾರೀ ವೈರಲ್ ಆಗಿದೆ. 


ಇಡೀ ಕುಟುಂಬದ ಬಗ್ಗೆ ಮಾತನಾಡಿ ಸೊಸೆ, ಮೊಮ್ಮಗಳ ಬಗ್ಗೆ ಒಂದಕ್ಷರ ಎತ್ತದ ಅಮಿತಾಬ್: ಹಾಗಿದ್ರೆ ಡಿವೋರ್ಸ್ ನಿಜವೇ..? 


‘ನನ್ನ ಪ್ರೀತಿಯ ದುವಾ, ಮೂರನೇ ತಿಂಗಳ ಜನ್ಮದಿನದ ಶುಭಾಶಯಗಳು. ಈ ವಿಶೇಷ ದಿನವನ್ನು ಪ್ರೀತಿ ಮತ್ತು ಭರವಸೆಯ ಸಂಕೇತ ಎಂದು ಭಾವಿಸಿಕೊಳ್ಳುತ್ತೇವೆ. ಬೆಳೆಯುತ್ತಿರುವ ದುವಾಳ ಸಂತೋಷ ಮತ್ತು ಸೌಂದರ್ಯವನ್ನು ನಾವು ಸಂಭ್ರಮಿಸುತ್ತಿದ್ದೇವೆ. ಒಳ್ಳೆಯತನ ಮತ್ತು ದೈವಶಕ್ತಿ ನಿನ್ನ ಜೊತೆಯಲ್ಲಿರಲೆಂದು ಪ್ರಾರ್ಥಿಸುತ್ತೇವೆ. ನಮ್ಮ ಈ ಸಣ್ಣ ಪ್ರಯತ್ನ ನಿನಗೆ ಕಷ್ಟದ ಸಮಯದಲ್ಲಿ ಸಾಂತ್ವನ ಮತ್ತು ಆತ್ಮವಿಶ್ವಾಸವನ್ನು ತರುತ್ತದೆ ಎಂದು ಆಶಿಸುತ್ತೇನೆ’ ಎಂದು ಅಂಜು ಭವ್ನಾನಿ ಅವರು ಪೋಸ್ಟ್ ಮಾಡಿದ್ದಾರೆ.


ಸಿನಿಮಾ ಇಂಡಸ್ಟ್ರಿಗೆ ಬಂದು 10 ವರ್ಷವಾದ್ರೂ ಒಂದೂ ಹಿಟ್ ಕೊಟ್ಟಿಲ್ಲ, ಆಸ್ತಿ ಮಾತ್ರ 53,800 ಕೋಟಿ..!


ಬೆಂಗಳೂರಿನ ತಾಯಿಯ ಮನೆಯಲ್ಲಿ ಮೂರು ತಿಂಗಳು ಬಾಣಂತನ ಮಾಡಿಕೊಂಡು ನಿನ್ನೆಯಷ್ಟೇ ದೀಪಿಕಾ ಪಡುಕೋಣೆ ಪುತ್ರಿ ದುವಾ ಜೊತೆ ಮುಂಬೈಗೆ ಮರಳಿದ್ದರು. ಇದಕ್ಕೂ ಮೊದಲು ದೀಪಿಕಾ ಮತ್ತು ರಣವೀರ್ ದೀಪಾವಳಿಯ ದಿನ ದುವಾಳ ಸಣ್ಣ ಪಾದಗಳನ್ನು ಸೆರೆಹಿಡಿದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಈಗ ದುವಾಳ ಸಣ್ಣ ಕೈ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ದುವಾಗೆ ದೃಷ್ಟಿಯಾಗಬಾರದೆಂದು ಆಜ್ಜಿ ಅಂಜು ಭವ್ನಾನಿ ತಮ್ಮ ಕೂದಲನ್ನು ಗಿಫ್ಟ್ ಮಾಡಿದ್ದಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.