ಆಂಧ್ರಪ್ರದೇಶ : ಜನಸೇನಾ ನಾಯಕ ಪವನ್ ಕಲ್ಯಾಣ್ ವಿರುದ್ಧ ಪ್ರಕರಣ ದಾಖಲಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಪವನ್ ಕಲ್ಯಾಣ್ ಮತ್ತು ಅವರ ಹಿಂಬಾಲಿಕರ ಕಾರಿನ ಮೇಲೆ ರ್‍ಯಾಶ್ ಡ್ರೈವಿಂಗ್ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರ ಮಂಗಳಗಿರಿ ಕ್ಷೇತ್ರದ ವ್ಯಾಪ್ತಿಯ ಇಪ್ಪತಂ ಎಂಬ ಗ್ರಾಮದಲ್ಲಿ ಕೆಲ ಮನೆಗಳನ್ನು ಧ್ವಂಸಗೊಳಿಸಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಬೇಕು ಎಂದು ಪ್ರಚಾರ ಮಾಡುತ್ತಿದೆ. ಪವನ್ ಕಲ್ಯಾಣ್ ಜನಸೇನಾ ಹುಟ್ಟು ಹಬ್ಬವನ್ನು ಆಚರಿಸಲು ಗ್ರಾಮಸ್ಥರು ತಮ್ಮ ಹೊಲವನ್ನು ಪವನ್ ಕಲ್ಯಾಣ್ ಅವರಿಗೆ ಹಸ್ತಾಂತರಿಸಿದ್ದಾರೆ.


COMMERCIAL BREAK
SCROLL TO CONTINUE READING

ಅದಾದ ನಂತರ ಸರ್ಕಾರ ಎಲ್ಲೂ ಇಲ್ಲದಂತೆ 120 ಅಡಿ ರಸ್ತೆ ನಿರ್ಮಿಸಿ ಅವರ ಮನೆಗಳನ್ನು ಹಾಳು ಮಾಡುತ್ತೇವೆ ಎಂದು ದೊಡ್ಡ ಮಟ್ಟದ ಆಂದೋಲನ ಆರಂಭಿಸಿದ್ದು, ಹೈಕೋರ್ಟ್ ತಡೆ ನೀಡಿತ್ತು. ಆದರೆ ಪವನ್ ಕಲ್ಯಾಣ್ ಇಪ್ಪತಂ ಗ್ರಾಮಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಮಂಗಳಗಿರಿಯಿಂದ ಬೃಹತ್ ಕಾರ್ ರ‍್ಯಾಲಿಯಲ್ಲಿ ಇಪ್ಪತಂಗೆ ತೆರಳಿದರು. ಆದರೆ ಆ ವೇಳೆ ಪವನ್ ಕಾರಿನ ಟಾಪ್ ಮೇಲೆ ಕುಳಿತು ಪ್ರಯಾಣಿಸಿದ್ದು ಹಾಟ್ ಟಾಪಿಕ್ ಆಯಿತು. ರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ಕುರಿತು ಲೇಖನಗಳು ಬಂದಿವೆ.


ಇದನ್ನು ಓದಿ: ಹಿಟ್ಲರ್ ಮುಖ ಹೋಲುತ್ತಿದೆ ಈ ಅಪರೂಪದ ಕೀಟ: ನಿಜವೇ? ಎಂದು ಈಗಲೇ ಪರೀಕ್ಷಿಸಿ


ಆದರೆ ಈಗ ಈ ವಿಚಾರವಾಗಿ ಅವರ ವಿರುದ್ಧ ಇಪ್ಪತಂ ಗ್ರಾಮದ ಶೇಷಗಿರಿರಾವ್ ಪಂಟಗಾಣಿ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಶೇಷಗಿರಿರಾವ್ ನೀಡಿರುವ ದೂರಿನನ್ವಯ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಬೆಳಗ್ಗೆ 9:30ರ ಸುಮಾರಿಗೆ ರೈಲ್ವೆ ಸೇತುವೆ ದಾಟುವಾಗ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಿಂದ ಹಲವು ಕಾರು, ಬೈಕ್ ಗಳಲ್ಲಿ ಜನಸೇನಾ ಪಕ್ಷದ ಕಾರ್ಯಕರ್ತರು, ರ‍್ಯಾಲಿಯಲ್ಲಿ ಅಜಾಗರೂಕತೆಯಿಂದ ರಸ್ತೆಯತ್ತ ಸಾಗಿದ ಹಿನ್ನೆಲೆ ತಾವು ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.