ಹೈದರಾಬಾದ್ : ನಗರದ ಐಸಿಎಫ್‌ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ (ಐಎಫ್‌ಎಚ್‌ಇ)ನ ವಿದ್ಯಾರ್ಥಿಯೊಬ್ಬನಿಗೆ ಇನ್ಸ್ಟಿಟ್ಯೂಟ್‌ನ ಇತರ ವಿದ್ಯಾರ್ಥಿಗಳೇ ಥಳಿಸಿರುವ ಘಟನೆ ನಡೆದಿದೆ. 'ಅಲ್ಲಾಹು ಅಕ್ಬರ್', 'ಜೈ ಮಾತಾ ದಿ' ಎಂಬ ಘೋಷಣೆಗಳನ್ನು ಕೂಗುವಂತೆ ವಿದ್ಯಾರ್ಥಿಗೆ ಬಲವಂತಪಡಿಸಿರುವ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನವೆಂಬರ್ 1 ರಂದು, ICFAI ಬಿಸಿನೆಸ್ ಸ್ಕೂಲ್‌ನ ಕೆಲವು ವಿದ್ಯಾರ್ಥಿಗಳು ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳಿಗಾಗಿ ಕ್ಯಾಂಪಸ್ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ಯುವಕನಿಗೆ 'ಜೈ ಮಾತಾ ದಿ' ಮತ್ತು 'ಅಲ್ಲಾ ಹು ಅಕ್ಬರ್' ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದಾರೆ. ರ‍್ಯಾಗಿಂಗ್ ನಿಷೇಧ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಶಂಕರಪಲ್ಲಿ ಎಎನ್‌ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್ ಪಂದ್ಯಕ್ಕೆ ವರುಣನ ಭೀತಿ: ಮಳೆ ಬಂದರೆ ಪ್ರಶಸ್ತಿ ಗೆಲ್ಲೋರ್ಯಾರು ಗೊತ್ತಾ?
#HindusUnderAttack
Watch 1st few seconds.
Horrific video from #iBSHyderabad Campus, #Hyderabad,A #Hindu student,#Himankbansal, was physically assaulted and beaten brutally by *uslim students.He was also forced to chant the name of their.#JagoHindu🙏 #hindusunderattackinindia pic.twitter.com/PuIZcBAgnt— Kaustuva R Gupta (@KaustuvaRGupta) November 12, 2022
ಪೊಲೀಸರು, ಸಂತ್ರಸ್ತ ವಿದ್ಯಾರ್ಥಿ 15-20 ವ್ಯಕ್ತಿಗಳು ತಮ್ಮನ್ನು ದೈಹಿಕವಾಗಿ ಮತ್ತು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. 307, 323, 450, 342, 506 ಆರ್/ಡಬ್ಲ್ಯೂ 34 ಐಪಿಸಿ, ಸೆಕ್ಷನ್ 4 (i)(ii) ತೆಲಂಗಾಣ ರ್ಯಾಗಿಂಗ್ ನಿಷೇಧ ಕಾಯಿದೆ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೆಲವು ವಿದ್ಯಾರ್ಥಿಗಳು ಸಂತ್ರಸ್ತ ಯುವಕನ್ನು ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹುಡುಗರು ಅವನನ್ನು ‘ಅಲ್ಲಾ ಹು ಅಕ್ಬರ್’ ಎಂದು ಹೇಳಲು ಒತ್ತಾಯಿಸಿದರೆ, ಕೆಲವರು ‘ಅವನ ಸಿದ್ಧಾಂತವನ್ನು ಸರಿಪಡಿಸುತ್ತೇನೆ, ಅವನನ್ನು ಕೋಮಾಗೆ ಹೋಗುವಂತೆ ಹೊಡೆಯುತ್ತೇನೆ ಎಂದು ಹೇಳುವುದನ್ನು ಕೇಳಬಹುದು. ಹಲ್ಲೆಯ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರಿಗೂ ಬೆದರಿಕೆ ಹಾಕಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.