Insect resembling Hitler face: ಹಿಟ್ಲರ್ ಮುಖ ಹೋಲುತ್ತಿದೆ ಈ ಅಪರೂಪದ ಕೀಟ: ನಿಜವೇ? ಎಂದು ಈಗಲೇ ಪರೀಕ್ಷಿಸಿ

Insect resembling Hitler face: ಈ ಕೀಟದ ಮೈ ಬಣ್ಣ ಹಳದಿಯಾಗಿದ್ದು, ಸುಂದರವಾಗಿದೆ. ಈ ಕೀಟವನ್ನು ವೈಜ್ಞಾನಿಕವಾಗಿ “ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್”ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಹಿಟ್ಲರ್ ಕೀಟ ಅಂತಾ ಕರೆಯುತ್ತಾರೆ. ಇಕ್ಸೋರಾ, ಗೋಡಂಬಿ ಗಿಡ, ಗುಲ್‌ಮೋಹರ್ ಮತ್ತು ಶಿವನಿ ಮರಗಳು ಈ ಕೀಟಗಳಿಗೆ ಆಥಿತೇಯ ಸಸ್ಯಗಳಾಗಿವೆ.

Written by - Zee Kannada News Desk | Last Updated : Nov 13, 2022, 10:32 AM IST
    • ಮನುಷ್ಯನ ಮುಖ ಹೋಲುವ ಹಿಟ್ಲರ್ ಕೀಟವೊಂದು ಪತ್ತೆಯಾಗಿದೆ
    • ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಮಾನವ ಮುಖ ಹೋಲುವ ಅಪರೂಪದ ಕೀಟ
    • ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಭೈರಾಪೂರ ಬೆಟ್ಟದಲ್ಲಿ ಪತ್ತೆ
Insect resembling Hitler face: ಹಿಟ್ಲರ್ ಮುಖ ಹೋಲುತ್ತಿದೆ ಈ ಅಪರೂಪದ ಕೀಟ: ನಿಜವೇ? ಎಂದು ಈಗಲೇ ಪರೀಕ್ಷಿಸಿ title=
Hitler face insect

Insect resembling Hitler face: ಗದಗ ಜಿಲ್ಲೆಯ ಭೈರಾಪುರ ಬೆಟ್ಟದಲ್ಲಿ ಮನುಷ್ಯನ ಮುಖ ಹೋಲುವ ಹಿಟ್ಲರ್ ಕೀಟವೊಂದು ಪತ್ತೆಯಾಗಿದೆ. ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಮಾನವ ಮುಖ ಹೋಲುವ ಅಪರೂಪದ ಕೀಟ ಇದಾಗಿದ್ದು ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಭೈರಾಪೂರ ಬೆಟ್ಟದಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ದೇವಾಲಯದ ಪೂಜೆ ಸಮಯಕ್ಕೆ ಬಂದು ಪ್ರಸಾದ ಸ್ವೀಕರಿಸೋ ಕೋತಿ!

ಈ ಕೀಟದ ಮೈ ಬಣ್ಣ ಹಳದಿಯಾಗಿದ್ದು, ಸುಂದರವಾಗಿದೆ. ಈ ಕೀಟವನ್ನು ವೈಜ್ಞಾನಿಕವಾಗಿ “ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್”ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಹಿಟ್ಲರ್ ಕೀಟ ಅಂತಾ ಕರೆಯುತ್ತಾರೆ. ಇಕ್ಸೋರಾ, ಗೋಡಂಬಿ ಗಿಡ, ಗುಲ್‌ಮೋಹರ್ ಮತ್ತು ಶಿವನಿ ಮರಗಳು ಈ ಕೀಟಗಳಿಗೆ ಆಥಿತೇಯ ಸಸ್ಯಗಳಾಗಿವೆ. ಆಥಿತೇಯ ಸಸ್ಯಗಳ ಎಲೆಗಳ ಅಡಿಯಲ್ಲಿ ಹೆಣ್ಣು ಕೀಟವು 150ರಿಂದ 200 ಮೊಟ್ಟೆಗಳನ್ನಿಡುತ್ತದೆ. ಹಿಟ್ಲರ್ ಕೀಟವು 7 ರಿಂದ 9 ತಿಂಗಳ ಜೀವಿತಾ ಅವಧಿ ಹೊಂದಿದ್ದು ಇವು ತಮ್ಮ ಜೀವನ ಚಕ್ರದಲ್ಲಿ ಎರಡು ಪೀಳಿಗೆಗಳನ್ನು ಉತ್ಪಾದಿಸುತ್ತವೆ.  

ಪೆಂಟ್ಯಾಟೊಮಿಡೆ ಕೀಟಗಳು ನಿಸರ್ಗದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಫೇರಮೊನ್ ಸ್ರವಿಸಿ ಗುಂಪುಗುಂಪಾಗಿ ( ಅಗ್ರಿಗೇಶನ್) ಆಥಿತೇಯ ಸಸ್ಯದ ಕಾಂಡದ ಮೇಲೆ ವಾಸಿಸುತ್ತವೆ. ಈ ರಕ್ಷಣಾ ತಂತ್ರವು ಸಂತಾನೋತ್ಪತ್ತಿಗೆ ಕೂಡಾ ಸಹಾಯವಾಗಿದೆ. ಇವು ಆಥಿತೇಯ ಸಸ್ಯದ ಎಲೆ ರಸ ಮತ್ತು ಹಣ್ಣುಗಳ ರಸವನ್ನು ಹೀರುತ್ತವೆ.

ಕ್ಯಾಟಕ್ಯಾಂಥಸ್ ಇನ್‌ಕಾರ್ನೇಟಸ್ ಭಾರತ, ಮಡಗಾಸ್ಕರ್, ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್, ಚೀನಾ, ಇಂಡೋನೇಷ್ಯಾ ಮಲೇಷ್ಯಾ, ಫಿಲಿಫೈನ್ಸ್, ಪಾಪುವಾ ನ್ಯೂ ಗಿನಿಯಾ , ಜಪಾನ್, ದಕ್ಷಿಣ ಕೊರಿಯಾ ಮತ್ತು ಪಾಕಿಸ್ತಾನ ದೇಶಗಳಲ್ಲಿ ಸಾಮಾನ್ಯವಾಗಿ ಹಂಚಿಕೆಯಾಗಿವೆ.

ಕೀಟಗಳು ಉನ್ನತ ಸ್ಥರದ ಜೀವಿಗಳಿಗೆ ಆಹಾರ ಒದಗಿಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೀಟಗಳು ನಿಸರ್ಗದಲ್ಲಿ ನೈಸರ್ಗಿಕವಾಗಿ ನಿಯಂತ್ರಿಸಲ್ಪಡುತ್ತವೆ.

ಇದನ್ನೂ ಓದಿ: I am a CEO : ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌

ಮಂಜುನಾಥ ಎಸ್. ನಾಯಕ, ಜೀವ ವೈವಿಧ್ಯ ಸಂಶೋಧಕರು, ಸಂಗಮೇಶ ಕಡಗದ, ಶರಣು ಗೌಡರ ಈ ಕೀಟವನ್ನು ಗುರುತಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News