Rashmika mandanna photo :  ಪ್ರಸ್ತುತ ಇಂಡಸ್ಟ್ರಿಯಲ್ಲಿರುವ ಸ್ಟಾರ್ ಹೀರೋಯಿನ್‌ಗಳ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಮೊದಲ ಸ್ಥಾನದಲ್ಲಿದೆ. ಒಂದರ ಹಿಂದೊಂದರಂತೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುತ್ತಾ ರಶ್ಮಿಕಾ ತಮ್ಮ ಕೆರಿಯರ್‌ನಲ್ಲಿ ಒಂದು ರೇಂಜ್ ಗಿಟ್ಟಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಸಧ್ಯ ನಟಿಗೆ ಸಂಬಂಧಿಸಿದ ಹಾಟ್‌ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ಇಲ್ಲಿ ಬಹು ಮುಖ್ಯ ವಿಚಾರ ಅಂದ್ರೆ ಈ ಫೋಟೊ ತೆಗೆಯುತ್ತಿರುವುದು ಅವಳಿಗೆ ಗೊತ್ತಿರಲಿಲ್ಲ ಎಂದು ಹೇಳಲಾಗಿದೆ. ರಶ್ಮಿಕಾ ತಂಡದ ಸದಸ್ಯರು ಅವರಿಗೆ ತಿಳಿಯದಂತೆ ಫೋಟೋ ತೆಗೆದಿದ್ದಾರಂತೆ. ಆ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಸುಂದರವಾದ ಕಪ್ಪು ಡ್ರೆಸ್ ಧರಿಸಿ, ನೆಲದ ಮೇಲೆ ಕುಳಿತು ಕಿಟಕಿಯಿಂದ ಹೊರಗೆ ನೋಡುತ್ತಿರುವ ರಶ್ಮಿಕಾ ಈ ಫೋಟೋದಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. 


ಪ್ರಿಯಾಂಕಾ ನಟನೆಯ 'ಕ್ಯಾಪ್ಚರ್' ಚಿತ್ರದ ಟೈಟಲ್ ಪೋಸ್ಟರ್ ವಿಭಿನ್ನವಾಗಿ ಲಾಂಚ್


"ಈ ಫೋಟೋ ಸುಮಾರು ಒಂದು ವರ್ಷದ ಹಿಂದಿನದು. ಈ ಫೋಟೋವನ್ನು ತೆಗೆಯುವಾಗ ರಶ್ಮಿಕಾಗೆ ಅದರ ಅರಿವು ಇರಲಿಲ್ಲ. ಆದರೆ ಈಗ ನಾವು ಈ ಫೋಟೋವನ್ನು ನಿಮಗಾಗಿ ಹಂಚಿಕೊಳ್ಳುತ್ತಿದ್ದೇವೆ" ಎಂದು ರಶ್ಮಿಕಾ ತಂಡದ ಸದಸ್ಯರು ಅಧಿಕೃತವಾಗಿ ಈ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಸಧ್ಯ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. 


ಸಿನಿಮಾ ವಿಚಾರವಾಗಿ ಹೇಳುವುದಾದರೆ ರಶ್ಮಿಕಾ ಪ್ಯಾನ್-ಇಂಡಿಯನ್ ಚಿತ್ರಗಳ ಸರಣಿಯಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅಲ್ಲು ಅರ್ಜುನ್ ಅವರ ಪುಷ್ಪ 2 ರ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲು ಸಿದ್ಧವಾಗುತ್ತಿದೆ. ಅಷ್ಟೇ ಅಲ್ಲದೆ, ನಟ ರಣಬೀರ್ ಕಪೂರ್ ನಟನೆಯ ಸಂದೀಪ್ ವಂಗಾ ನಿರ್ದೇಶನದ "ಅನಿಮಲ್" ಚಿತ್ರದಲ್ಲಿಯೂ ಸಹ ಕಾಣಿಸಿಕೊಳ್ಳಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.