ಪ್ರಿಯಾಂಕಾ ನಟನೆಯ 'ಕ್ಯಾಪ್ಚರ್' ಚಿತ್ರದ ಟೈಟಲ್ ಪೋಸ್ಟರ್ ವಿಭಿನ್ನವಾಗಿ ಲಾಂಚ್

Capture Film Poster: ಕ್ಯಾಪ್ಚರ್ ಸಿನಿಮಾದ ಬಗ್ಗೆ ಹೇಳುವುದಾದರೆ ಹಾರರ್ ಅಂದ ಮೇಲೆ ಭಯ, ಕುತೂಹಲ, ಟ್ವಿಸ್ಟ್‌ಗಳು ಇದ್ದೇ ಇರುತ್ತೆ. ಇದೆಲ್ಲದರ ಜೊತೆಗೆ ಈ ಸಿನಿಮಾ ಒಂದು ವಿಭಿನ್ನ ಅನುಭವ ನೀಡಲಿದೆ. ವಿಶೇಷವೆಂದರೆ ಈ ಸಂಪೂರ್ಣ ಸಿನಿಮಾವನ್ನು ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಈ ರೀತಿಯ ವಿಭಿನ್ನ ಪ್ರಯತ್ನ ಮಾಡಿರುವುದು ವಿಶ್ವದಲ್ಲಿಯೇ ಇದೇ ಮೊದಲು. 

Written by - Yashaswini V | Last Updated : Oct 18, 2023, 11:12 AM IST
  • ಟೈಟಲ್ ರಿಲೀಸ್ ನಲ್ಲೇ ದಾಖಲೆ ಬರೆದ ನಿರ್ದೇಶಕ ಲೋಹಿತ್
  • ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ 60 ಅಡಿ ಎತ್ತರದ ಫಸ್ಟ್ ಲುಕ್ ಟೈಟಲ್ ಪೋಸ್ಟರ್ ರಿಲೀಸ್
  • ಪ್ರಿಯಾಂಕಾ ನಟನೆಯ 'ಕ್ಯಾಪ್ಚರ್' ಚಿತ್ರದ 60 ಅಡಿ ಎತ್ತರದ ಟೈಟಲ್ ಪೋಸ್ಟರ್ ರಿಲೀಸ್
ಪ್ರಿಯಾಂಕಾ ನಟನೆಯ 'ಕ್ಯಾಪ್ಚರ್' ಚಿತ್ರದ ಟೈಟಲ್ ಪೋಸ್ಟರ್  ವಿಭಿನ್ನವಾಗಿ ಲಾಂಚ್ title=
Capture Film Poster

Capture Film Poster: ಇತ್ತೀಚೆಗೆ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಮತ್ತೊಂದು ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರ ಹೊಸ ಸಿನಿಮಾದ ಹೆಸರು ''ಕ್ಯಾಪ್ಚರ್'. ಸದ್ಯ ಕ್ಯಾಪ್ಚರ್ ತಂಡ ವಿಭಿನ್ನವಾಗಿ ಟೈಟಲ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಅಭಿಮಾನಿಗಳ ಮಧ್ಯೆಯೇ ಕ್ಯಾಪ್ಚರ್ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷವಾಗಿತ್ತು. 

ಸ್ಯಾಂಡಲ್‌ವುಡ್‌ನಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರ ಪೋಸ್ಟರ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ 60 ಅಡಿಯ ಕಟೌಟ್ ನಿಲ್ಲಿಸುವ ಮೂಲಕ ಬಿಡುಗಡೆ ಮಾಡಿರುವುದು ಖುಷಿಯ ವಿಚಾರ. ಮತ್ತೊಂದೆಡೆ ಕನ್ನಡ ಸಿನಿಮಾರಂಗದಲ್ಲಿಯೇ ಇದೊಂದು ವಿನೂತನವಾದ ಪ್ರಯತ್ನ ಎಂದರೂ ತಪ್ಪಾಗಲಾರದು. 

ಇದನ್ನೂ ಓದಿ- ದುಬಾರಿ ಲಿಯೋ ಟಿಕೆಟ್:‌ ಐಮ್ಯಾಕ್‌ ಥಿಯೇಟರ್‌ನಲ್ಲೂ 75%ಟಿಕೆಟ್ ದರ ಹೆಚ್ಚಳ

ಪ್ರಿಯಾಂಕಾ ಉಪೇಂದ್ರ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾಗೆ ಮಮ್ಮಿ, ದೇವಕಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿದ್ದಾರೆ. ಕ್ಯಾಪ್ಟರ್ ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ 3ನೇ ಸಿನಿಮಾ ಇದಾಗಿದೆ.  ಕ್ಯಾಪ್ಟರ್ ಸಿನಿಮಾವನ್ನು ರವಿರಾಜ್ ಅವರು ತಮ್ಮ ಶ್ರಿ ದುರ್ಗಪರಮೇಶ್ವರಿ  ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಮೊದಲ  ಸಿನಿಮಾ ಇದಾಗಿದೆ. ಅಂದಹಾಗೆ ರವಿರಾಜ್ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ. 

ವೀರೇಶ್ ಚಿತ್ರಮಂದಿರದ ಮುಂಭಾಗದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ 60 ಅಡಿ ಕೌಟೌಟ್ ಪೋಸ್ಟರ್ ನಿಲ್ಲಿಸುವ ಮೂಲಕ ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಮಾಡಲಾಯಿತು. ನಟಿ ಪ್ರಿಯಾಂಕಾ ಅವರ ಪತಿ  ಹಾಗೂ ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕ್ಯಾಪ್ಚರ್ ಚಿತ್ರದ  ಪೋಸ್ಟರ್ ಲಾಂಚ್ ಮಾಡಿದರು. 

ಕ್ಯಾಪ್ಚರ್ ಸಿನಿಮಾದ ಬಗ್ಗೆ ಹೇಳುವುದಾದರೆ ಹಾರರ್ ಅಂದ ಮೇಲೆ ಭಯ, ಕುತೂಹಲ, ಟ್ವಿಸ್ಟ್‌ಗಳು ಇದ್ದೇ ಇರುತ್ತೆ. ಇದೆಲ್ಲದರ ಜೊತೆಗೆ ಈ ಸಿನಿಮಾ ಒಂದು ವಿಭಿನ್ನ ಅನುಭವ ನೀಡಲಿದೆ. ವಿಶೇಷವೆಂದರೆ ಈ ಸಂಪೂರ್ಣ ಸಿನಿಮಾವನ್ನು ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಈ ರೀತಿಯ ವಿಭಿನ್ನ ಪ್ರಯತ್ನ ಮಾಡಿರುವುದು ವಿಶ್ವದಲ್ಲಿಯೇ ಇದೇ ಮೊದಲು. 

ಇದನ್ನೂ ಓದಿ- ಶಾಖಾಹಾರಿ’ ಫಸ್ಟ್ ಲುಕ್ ಬಿಡುಗಡೆ..ಹೇಗಿದೆ ರಂಗಾಯಣ ರಘು ಲುಕ್..?

ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಟೈಟಲ್ ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಕ್ಯಾಪ್ಚರ್ ಚಿತ್ರಮಂದಿರದ ಅಂಗಳಕ್ಕೆ ಬರಲು ಎದುರು ನೋಡುತ್ತಿದೆ. ಚಿತ್ರಕ್ಕೆ ಎಸ್. ಪಾಂಡಿಕುಮಾರ್ ಕ್ಯಾಮೆರಾ ವರ್ಕ್ ಮಾಡಿದ್ದು ರವಿಚಂದ್ರನ್ ಅವರ ಸಂಕಲನವಿದೆ. ಪ್ರಿಯಾಂಕ ಉಪೇಂದ್ರ ಅವರೊಂದಿಗೆ ಇನ್ನು ಸಾಕಷ್ಟು ಸ್ಟಾರ್ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ ಮುಂದಿನ ತಿಂಗಳು ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ಪ್ರಿಯಾಂಕಾ ಉಪೇಂದ್ರ ಮತ್ತು ಲೋಹಿತ್ ಕಾಂಬಿನೇಷನ್‌ನ ಹ್ಯಾಟ್ರಿಕ್ ಸಿನಿಮಾ ಇದಾಗಿದ್ದು ಚಿತ್ರದ ಮೇಲೆ ಸಿನಿ ಪ್ರಿಯರಿಗೂ ಕೂಡ ಹೆಚ್ಚಿನ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News