ಕೆಜಿಎಫ್ ಸಿನಿಮಾ ರಾಕಿಂಗ್‌ ಸ್ಟಾರ್‌ ಯಶ್ ಅವರನ್ನು ದೇಶದ ಅತ್ಯಂತ ಯಶಸ್ವಿ ಸ್ಟಾರ್‌ನ್ನಾಗಿ ಮಾಡಿದೆ. ಯಶ್ ಸ್ಟಾರ್ ಪಟ್ಟ ಏರುವುದರೊಂದಿಗೆ ಎಲ್ಲರ ಮೆಚ್ಚಿನ ನಟ ಎಂದೆನಿಸಿಕೊಂಡಿದ್ದಾರೆ. ಯಶ್ 'ಕೆಜಿಎಫ್ ಚಾಪ್ಟರ್ 1' ರ ಬಳಿಕ 'ಆಂಗ್ರಿ ಯಂಗ್ ಮ್ಯಾನ್' ಎಂಬ ಬಿರುದನ್ನು ಪಡೆದರು. ಅದಾದ ಬಳಿಕ 'ಕೆಜಿಎಫ್ ಚಾಪ್ಟರ್ 2' ತೆರೆಗೆ ಅಪ್ಪಳಿಸಿತು. ಆ ಸಂದರ್ಭದಿಂದ ಇಲ್ಲಿವರೆಗೆ ಅವರನ್ನು ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಎಂದು ಕರೆಯಲಾಗುತ್ತಿದೆ. ಆದರೆ ಯಶ್‌ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿಕೆಯೊಂದನ್ನು ನೀಡಿದ್ದು, ಆ ತುಣುಕನ್ನು ಇಟ್ಟುಕೊಂಡು ಟ್ರೋಲ್‌ ಮಾಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

'ಕೆಜಿಎಫ್ 2' ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಬಿಡುಗಡೆಯಾಗಿ ಒಂದು ತಿಂಗಳ ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆಯನ್ನು ಮಾತ್ರ ಮುಂದುವರಿಸಿದೆ. ಕೆಜಿಎಫ್ ಸ್ಟಾರ್ ಯಶ್ 2007 ರಲ್ಲಿ ಕನ್ನಡ ಚಲನಚಿತ್ರ ʼಜಂಬದ ಹುಡುಗಿʼ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇನ್ನು ರಶ್ಮಿಕಾ ಮಂದಣ್ಣ 2016 ರಲ್ಲಿ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟರು. ಆದರೆ ಆ ಸಂದರ್ಭದಲ್ಲಿ ನಡೆಸಿದ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ, ಯಶ್‌ ಅವರನ್ನು ʼಶೋ ಆಫ್‌ ನಟʼ ಎಂದು ಹೇಳಿದ್ದರು. ಈ ಹೇಳಿಕೆ ನೀಡುತ್ತಿದ್ದಂತೆ ರೊಚ್ಚಿಗೆದ್ದ ಯಶ್‌ ಅಭಿಮಾನಿಗಳು ರಶ್ಮಿಕಾ ವಿರುದ್ಧ ಕಿಡಿಕಾರಿದ್ದರು. 


ಇದನ್ನು ಓದಿ: ಸರ್ಕಾರಿ ನೌಕರರಿಗೊಂದು ಮಹತ್ವದ ಅಪ್ಡೇಟ್, 18 ತಿಂಗಳ ಬಾಕಿ ಡಿಎ ಕುರಿತು ಸರ್ಕಾರ ನೀಡಿದ ಮಾಹಿತಿ ಇದು


ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣಗೆ, "ಕನ್ನಡ ಚಿತ್ರರಂಗದಲ್ಲಿ ಮಿಸ್ಟರ್ ಶೋಫ್ ಯಾರು?" ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಯಶ್ ಹೆಸರನ್ನು ತೆಗೆದುಕೊಂಡರು. ಅದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಅಷ್ಟೇ ಅಲ್ಲದೆ, ರಶ್ಮಿಕಾ ಮಂದಣ್ಣ ವಿರುದ್ಧ ಕಿಡಿಕಾರಿದ್ದರು. ನಟಿ ಯಶ್ ಅವರನ್ನು ಅವಮಾನಿಸಿದ್ದಾರೆ ಎಂದು ಅಭಿಮಾನಿಗಳು ಆರೋಪಿಸ ತೊಡಗಿದರು. ಅನೇಕ ಜನರು ಅವರನ್ನು ಅಹಂಕಾರಿ ಎಂದೂ ಈಗಲೂ ಕರೆಯುತ್ತಾರೆ.


ಸುದೀರ್ಘ ಪೋಸ್ಟ್ ಬರೆಯುವ ಮೂಲಕ ಕ್ಷಮೆಯಾಚನೆ: 
ವಿಷಯ ತಾರಕಕ್ಕೇರುತ್ತಿದ್ದಂತೆ ರಶ್ಮಿಕಾ ಮಂದಣ್ಣ ಫೇಸ್‌ಬುಕ್‌ನಲ್ಲಿ ಸುದೀರ್ಘ ಪೋಸ್ಟ್ ಬರೆದು ಕ್ಷಮೆಯಾಚಿಸಿದ್ದಾರೆ. "ನಾನು ಯಶ್ ಸರ್ ಅಥವಾ ಬೇರೆಯವರಿಗೆ ಅಗೌರವ ತೋರಿಲ್ಲ. ಯಶ್ ಸರ್  ಪ್ರತಿಭೆ ಮತ್ತು ಅವರ ನಡತೆಯನ್ನು ನಾನು ಗೌರವಿಸುತ್ತೇನೆ.  ನಾನು ಅತ್ಯಂತ ಖುಷಿಪಟ್ಟ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ಬಗ್ಗೆ ಅಂದು ಮಾತನಾಡಿದ್ದನ್ನು ಮಾಧ್ಯಮಗಳು ನಿರ್ಲಕ್ಷಿಸಿರುವುದು ಬೇಸರದ ಸಂಗತಿ. ಕಾರ್ಯಕ್ರಮದ ಅತ್ಯಂತ ಗಂಭೀರವಲ್ಲದ ಭಾಗದಿಂದ ಕೇವಲ ಎರಡು ಸಾಲುಗಳನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ನೀವು ಕಾರ್ಯಕ್ರಮದ ಸಾರವನ್ನು ಸಂಪೂರ್ಣವಾಗಿ ತಿರುಚಲಾಗಿದೆ. ಇದು ನಿಜಕ್ಕೂ ದುಃಖಕರವಾಗಿದೆ" ಎಂದು ಬರೆದುಕೊಂಡಿದ್ದಾರೆ. 


ಇದನ್ನು ಓದಿ: ಅಫ್ಘನ್‌ನಲ್ಲಿ ಮಹಿಳೆಯರ ಸ್ಥಿತಿ ಶೋಚನೀಯ: ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ


"ಇದು ನನ್ನ ಹೇಳಿಕೆಯಲ್ಲ. ಯಾರದ್ದಾದರೂ ಭಾವನೆಗಳಿಗೆ ಧಕ್ಕೆ ತಂದಿದ್ದರೆ ಕ್ಷಮಿಸಿ. ನನಗೆ ಅಂತಹ ಉದ್ದೇಶ ಇರಲಿಲ್ಲ. ನನ್ನ ಹೆಚ್ಚಿನ ಸಂದರ್ಶನಗಳು ಮತ್ತು ಫೇಸ್‌ಬುಕ್ ಲೈವ್ ಅನ್ನು ವೀಕ್ಷಿಸಲು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಅದರಲ್ಲಿ ನಾನು ಯಶ್ ಸರ್ ಅವರ ಕೆಲಸವನ್ನು ಶ್ಲಾಘಿಸಿದ್ದೇನೆ. ನಾನು ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ನಾನು ಅನೇಕ ಬಾರಿ ನನ್ನ ಆಸೆಯನ್ನು ವ್ಯಕ್ತಪಡಿಸಿದ್ದೇನೆ" ಎಂದಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ