ತಾಲಿಬಾನ್: ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ನೀತಿಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ತಾಲಿಬಾನ್ ಅನ್ನು ಪ್ರಶ್ನಿಸಿದೆ. ಆದರೆ ವಿಶ್ವಸಂಸ್ಥೆಯ ಪ್ರಶ್ನೆಯನ್ನು ತಾಲಿಬಾನ್ ಪಡೆಗಳು ತಿರಸ್ಕರಿಸಿದ್ದು, ಇದು "ಆಧಾರರಹಿತ" ಎಂದು ಹೇಳಿದೆ.
ಇದನ್ನು ಓದಿ: ಈ ಅಕ್ಷರದ ಹುಡುಗರು ಹುಡುಗಿಯರ ವಿಷಯದಲ್ಲಿ ತುಂಬಾ ಅದೃಷ್ಟವಂತರು!
ನೀವು ಮುಸ್ಲಿಮರಾಗಿದ್ದರೆ ಹಿಜಾಬ್ ಅಗತ್ಯ:
ಅಫ್ಘಾನ್ ಮಹಿಳೆಯರ ಹಕ್ಕುಗಳ ಸಂಬಂಧ ತಾಲಿಬಾನ್‌ನ ಬದ್ಧತೆಯನ್ನುಇಲ್ಲಿ ಹೇಳಲಾಗಿದೆ. ತಾಲಿಬಾನ್‌ನ ವಿದೇಶಾಂಗ ಸಚಿವಾಲಯವು, ಅಫ್ಘಾನ್ ಮಹಿಳೆಯರ ಮೇಲೆ ಹೇರಲಾದ ಮಾನವ ಮತ್ತು ಮೂಲಭೂತ ಹಕ್ಕುಗಳ ನಿರ್ಬಂಧಗಳ ಬಗ್ಗೆ ಯುಎನ್‌ಎಸ್‌ಸಿಯ ಕಳವಳಗಳನ್ನು ತಳ್ಳಿಹಾಕಿದೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. "ಅಫ್ಘಾನಿಸ್ತಾನದ ಜನರು ಪ್ರಧಾನವಾಗಿ ಮುಸ್ಲಿಮರಾಗಿರುವುದರಿಂದ, ಸಮಾಜದ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ಅನುಗುಣವಾಗಿ ಇಸ್ಲಾಮಿಕ್ ಹಿಜಾಬ್ ಅನ್ನು ಧರಿಸುವುದನ್ನು ಆಫ್ಘನ್ ಸರ್ಕಾರ ಪರಿಗಣಿಸುತ್ತದೆ" ಎಂದು ತಾಲಿಬಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು, ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಮಹಿಳೆಯರು-ಹುಡುಗಿಯರ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ನೀತಿಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಸೂಚಿಸಿತ್ತು. UNSC ಜಂಟಿ ಹೇಳಿಕೆಯಲ್ಲಿ, "ಶಿಕ್ಷಣ, ಉದ್ಯೋಗ, ಚಳುವಳಿಯ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಪೂರ್ಣ, ಸಮಾನ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಯ ಮೇಲೆ ತಾಲಿಬಾನ್ ನಿರ್ಬಂಧಗಳನ್ನು ವಿಧಿಸಿದೆ. ಇದರಿಂದ ಆಫ್ಘನ್ ಮಹಿಳೆಯರು ಮತ್ತು ಹುಡುಗಿಯರ ಸ್ಥಿತಿಯ ತೀವ್ರ ಶೋಚನೀಯವಾಗಿದೆ" ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ.
ಇದನ್ನು ಓದಿ: JSSC 2022: ಪಿಯುಸಿ ತೇರ್ಗಡೆ ಹೊಂದಿದ ಯುವಕರಿಗೆ ಉದ್ಯೋಗ ಪಡೆಯಲು ಇದೇ ಸುವರ್ಣಾವಕಾಶ!
ವಿದ್ಯಾರ್ಥಿನಿಯರಿಗೆ ಶಾಲೆ ತೆರೆಯಲು ಆಗ್ರಹ:
ವರದಿಯ ಪ್ರಕಾರ, ಯುಎನ್ ಸೆಕ್ಯುರಿಟಿ ಕೌನ್ಸಿಲ್ ತಾಲಿಬಾನ್‌ಗೆ ಎಲ್ಲಾ ವಿದ್ಯಾರ್ಥಿನಿಯರಿಗೆ ವಿಳಂಬವಿಲ್ಲದೆ ಶಾಲೆಗಳನ್ನು ಮತ್ತೆ ತೆರೆಯಲು ಕರೆ ನೀಡಿದೆ. ಮಕ್ಕಳ ಮಾಧ್ಯಮಿಕ ಶಿಕ್ಷಣವನ್ನು ನಿಷೇಧಿಸುವುದು, ಕಟ್ಟುನಿಟ್ಟಾದ ಹಿಜಾಬ್ ಹೇರುವುದು ಮತ್ತು ರಾಜಕೀಯದಲ್ಲಿ ಭಾಗವಹಿಸಲು ಅವಕಾಶ ನೀಡದಂತಹ ನಿಯಮಗಳು ಸಮಾಜದಲ್ಲಿ ಮಹಿಳೆಯರನ್ನು ಅದೃಶ್ಯವಾಗಿಸುವ ಗುರಿಯನ್ನು ಹೊಂದಿವೆ ಎಂದು ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ (ಯುಎನ್) ವಿಶೇಷ ರಾಯಭಾರಿ ರಿಚರ್ಡ್ ಬೆನೆಟ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.