ಬೆಂಗಳೂರು: ಪ್ರತಿನಿನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿರುವ  ನಟಿ ರಶ್ಮಿಕಾ ಮಂದಣ್ಣ ಇದೀಗ ಜಪಾನೀಗೂ ಇವರ ನಂಟು ತಟ್ಟಿದ್ದೆ. ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್‍ನಲ್ಲಿ ಬಹು ಬೇಡಿಕೆ ಇರುವ ನಟಿಯಾಗಿದ್ದಾರೆ. ಇದೀಗ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ವೊಂದಕ್ಕೆ ರಾಯಬಾರಿಯಾಗಿ ನೇಮಕವಾಗಿರುವುದು ಗೊತ್ತೆ ಇದೆ. 


COMMERCIAL BREAK
SCROLL TO CONTINUE READING

ಕಿರಿಕ್‌ ಬೆಡಗಿ ಇದೀಗ ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್ ಎಂಬಗೆ ವಿದೇಶಿ ಬ್ರ್ಯಾಂಡ್‍ಗೆ ರಾಯಭಾರಿಯಾಗಿದ್ದಾರೆ. ವಿದೇಶಿ ಬ್ರ್ಯಾಂಡ್‍ಗೆ ರಾಯಭಾರಿಯಾಗಿರುವ ಹಿನ್ನಲೆ ಒನಿಟ್ಸುಕಾ ಟೈಗರ್ಸ್ ಸ್ಪ್ರಿಂಗ್-ಸಮ್ಮರ್ ನು ಪರಿಚಯಿಸಲು ನನಗೆ ಹೆಮ್ಮೆ ಇದೆ. ಫ್ಯಾಶನ್ ಗಾಗಿ ತೊಟ್ಟ ಉಡುಗೆಯು ಖುಷಿ ಕೊಟ್ಟಿದ್ದೆ ಎಂದಿದ್ದಾರೆ. 


ಇದನ್ನೂ ಓದಿ: Shivanna's Daughter New Film: ಚಿತ್ರ ನಿರ್ಮಾಣದಲ್ಲಿ ಶಿವಣ್ಣನ ಪುತ್ರಿ: ನಿವೇದಿತಾಳ ಹೊಸ ಸಿನಿಮಾ ಯಾವುದು ಗೊತ್ತಾ..?


ಜಪಾನೀಸ್ ಮಿನಿಮಲಿಸಂ ಹಾಗೂ  ಕ್ರೀಡೆಯೊಂದಿಗೆ ಫ್ಯಾಷನ್ ಅನ್ನು ಪ್ರೇರಿತವಾಗಿದೆ ಎಂಬುದನ್ನು ನಾನು ಇಷ್ಟಪಡುತ್ತೇನೆ ಎಂದು ಪೋಸ್ಟ್ ಜಪಾನೀಸ್ ಫ್ಯಾಶನ್ ಡ್ರಸ್‌ನಲ್ಲಿ ಸಖತ್‌ ನ ಪೋಟೋವನ್ನು ಹಂಚಿಕೊಂಡು ಜಪಾನೀಸ್ ಫ್ಯಾಶನ್ ಬ್ರ್ಯಾಂಡ್​​ ಬಗ್ಗೆ ಉಲ್ಲೇಖಿಸಿದ್ದಾರೆ. ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣಗೆ ಆಫರ್ ಗಳ ಸುರಿಮಳೆ ಹರಿಯುತ್ತಿದೆ. ಇದರ ನಡುವೆ ಬಾಲಿವುಡ್‌ ,ಟಾಲಿವುಡ್‌ ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.  ಅಷ್ಟೇ ಅಲ್ಲದೇ ಸಾಕಷ್ಟು ಬಾರಿ ಕಿರಿಕ್‌ ಬೆಡಗಿ ಆಗಾಗ ಟ್ರೋಲ್ ಕಣ್ಣಿಗೂ ಗುರಿಯಾಗುತ್ತಾರೆ.  


ಸ್ಯಾಂಡಲ್‍ವುಡ್, ಬಾಲಿವುಡ್,  ನಟಿ ರಶ್ಮಿಕಾ ಮಂದಣ್ಣ ಅತಿ ಕಡಿಮೆ ಸಮಯದಲ್ಲೇ ದೊಡ್ಡ ಸಕ್ಸಸ್‌ ಪಡೆದ ನಟಿ ಎಂದರೆ ತಪ್ಪಾಗಲಾರದು. ನ್ಯಾಷನಲ್‌ ಕ್ರಶ್‌ ಪಟ್ಟದ ಬೆನ್ನಲೇ ಇದೀಗ ವಿದೇಶಿ ಬ್ರ್ಯಾಂಡ್‌ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಕ್ಯೂಟಿ ಬೆಡಗಿ ಸಿನಿಮಾ ಮಾತ್ರವಲ್ಲದೇ ಜಾಹಿರಾತುಗಳಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದಾರೆ. 


ಇದನ್ನೂ ಓದಿ: Bhairati Rangal : ಕಬ್ಜ ಯಶಸ್ಸಿನ ಬೆನ್ನಲ್ಲೇ ಭೈರತಿ ರಣಗಲ್ ಗೆ ಸಜ್ಜಾದ ಶಿವಣ್ಣ: ಮುಂದಿನ ಚಿತ್ರದ ಸುಳಿವು ನೀಡಿದ ಮುತ್ತಣ್ಣ!


ಕಿರಿಕ್‌  ಪಾರ್ಟಿ ಸಿನಿಮಾದಲ್ಲಿ ಸಾನ್ವಿಯಾಗಿ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಮೂಲಕ ಸಿನಿ ಜಗತ್ತಿಗೆ ಪಾದರ್ಪಾಣೆ ಮಾಡಿದ ನಟಿ. ಇದೀಗ ಕನ್ನಡ ಬಿಟ್ಟು ಬೇರೆ ಎಲ್ಲಾ ಭಾಷೆ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಪೊಗರು ಸಿನಿಮಾ ಬಳಿಕ ಸ್ಯಾಂಡಲ್‍ವುಡ್  ಕಡೆ ಮುಖ ಮಾಡಲಿಲ್ಲ. ರಶ್ಮಿಕಾ ಮಂದಣ್ಣ ಅವರು ಇಲ್ಲಿಯವರೆಗೂ ಕನ್ನಡ ಸೇರಿದಂತೆ 18 ಸಿನಿಮಾಗಳನ್ನು ಮಾಡಿದ್ದಾರೆ.


ಎಲ್ಲಾ ಸಿನಿಮಾಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಸದ್ಯ ಇದೀಗ ಅವರು ವಿದೇಶಿ ಬ್ರಾಂಡ್‌ ಒಂದರ ಅಂಬಾಸಿಡರ್‌  ಆಗಿರುವ ರಶ್ಮಿಕಾ ಸೋಷಿಯಲ್‌ ಮೀಡಿಯಾದಲ್ಲಿ ಖುಷಿ  ಹಂಚಿಕೊಂಡಿದ್ದಾರೆ. ಸದ್ಯ  ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಇದೀಗ ಬಾಲಿವುಡ್​ನಲ್ಲಿ ಸ್ಟಾರ್ ನಟ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಹೆಸರಿನ ಸಿನಿಮಾ, ಜೊತೆಗೆ ಟೈಗರ್ ಶ್ರಾಫ್ ನಟನೆಯ ಸಿನಿಮಾದಲ್ಲಿಯೂ ಪಾತ್ರ ನಿರ್ವಹಿಸಲಿದ್ದಾರೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.