Renukaswamy Murder Case: ಚಿತ್ರುದರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಹಲವಾರು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಆರೋಪಿಗಳು ಧರಿಸಿದ್ದ ಬಟ್ಟೆಗಳು, ಕೃತ್ಯಕ್ಕೆ ಬಳಸಿದ್ದ ವಸ್ತುಗಳು, ಹೋಟೆಲ್ ಲೆಡ್ಜರ್ ಬುಕ್, ಶವ ಬಿಸಾಡಲು ಬಳಸಿದ್ದ ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣ ಮುಚ್ಚಿ ಹಾಕಲು ಆರೋಪಿಗಳು ಪಡೆದುಕೊಂಡಿದ್ದ ಹಣ, ಮೊಬೈಲ್ ಪೋನ್ & ರೇಣುಕಾಸ್ವಾಮಿ ಧರಿಸಿದ್ದ ಚಿನ್ನಾಭರಣ ಸೇರಿದಂತೆ ಒಟ್ಟು 139 ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ 28 ಸ್ಥಳಗಳಲ್ಲಿ ಮಹಜರ್ ನಡೆಸಲಾಗಿದೆ. ದರ್ಶನ್ ಸೇರಿ ಎಲ್ಲಾ 17 ಆರೋಪಿಗಳ ನಿವಾಸ ಮತ್ತು ಇನ್ನಿತರ 11 ಸ್ಥಳಗಳಲ್ಲಿ ಮಹಜರ್ ಪ್ರಕ್ರಿಯೆಯನ್ನು ನಡೆಸಲಾಗಿದೆ.


COMMERCIAL BREAK
SCROLL TO CONTINUE READING

40.40 ಲಕ್ಷ ರೂ. ಜಪ್ತಿ!


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್‌ ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ 24ನೇ ACMM ನ್ಯಾಯಾಲಯವು 2 ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ. ಇದರ ಬೆನ್ನಲ್ಲೇ ದರ್ಶನ್‌ ಮನೆಯಲ್ಲಿ ಪೊಲೀಸರು 37.40 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರೇ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್‌ ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ. ಜೂನ್‌ 19ರಂದು A2 ಆರೋಪಿಯ ಮನೆಯಿಂದ 37.40 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ದರ್ಶನ್‌ ತನ್ನ ಪತ್ನಿಗೆ ನೀಡಿದ್ದ 3 ಲಕ್ಷ ರೂ.ವನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ವಶಪಡಿಸಿಕೊಂಡಿರುವ ಈ ಹಣದ ಮೂಲದ ಬಗ್ಗೆ ಆರೋಪಿಯಿಂದ ಮಾಹಿತಿ ಪಡೆದು ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.  


ಇದನ್ನೂ ಓದಿ: “ನಾನು ವಿಚ್ಛೇದನ ಪಡೆಯುತ್ತಿದ್ದೇನೆ…”- ಐಶ್ವರ್ಯಾ ಜೊತೆ ಡಿವೋರ್ಸ್ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್ ಹೇಳಿಕೆ


ಸ್ನೇಹಿತರ ಬಳಿ 40​ ಸಾಲ!?


ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ನಟ ದರ್ಶನ್‌ ತನ್ನ ಬಳಿ ಇಟ್ಟುಕೊಂಡಿದ್ದ 40 ಲಕ್ಷ ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ನೇಹಿತ ಮೋಹನ್‌ರಾಜ್‌ ಎಂಬುವರ ಬಳಿ ಈ ಹಣ ಪಡೆದುಕೊಂಡಿದ್ದ ದರ್ಶನ್‌, ಐಡಿಯಲ್‌ ಹೋಮ್ಸ್‌ನ ಮನೆಯಲ್ಲಿಟ್ಟಿದ್ದರಂತೆ. ಮಾಹಿತಿ ಮೇರೆಗೆ ತನಿಖಾಧಿಕಾರಿಗಳು ಜೂ.19ರಂದು ದಾಳಿ ನಡೆಸಿ 37.40 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಮೇಕಪ್‌ಮ್ಯಾನ್‌ ಮೂಲಕ ಪತ್ನಿ ವಿಜಯಲಕ್ಷ್ಮೀಗೆ 3 ಲಕ್ಷ ರೂ. ನಗದು ಹಾಗೂ ಇತರ ವಸ್ತುಗಳನ್ನು ಕೊಟ್ಟು ಕಳುಹಿಸಿದ್ದರಂತೆ. ಈ ಹಣವನ್ನು ವಿಜಯಲಕ್ಷ್ಮೀಯವರಿಂದ ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ಪ್ರದೋಶ್‌ಗೆ ನೀಡಿದ್ದ 30 ಲಕ್ಷ ರೂ.ವನ್ನು ಜಪ್ತಿ ಮಾಡಲಾಗಿತ್ತು. ಈ ಹಣದ ಮೂಲದ ಬಗ್ಗೆಯೂ ತನಿಖೆ ನಡೆಯಬೇಕಿದೆ.


ಶೆಡ್​​ ಕಾರ್ಮಿಕರಿಗೆ ಭಾರೀ ಆಮಿಷ!


ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಬಚಾವ್ ಆಗಲು ನಟ ದರ್ಶನ್ ತಮ್ಮ ಮನೆಯಲ್ಲಿ 40 ಲಕ್ಷ ರೂ. ಸಂಗ್ರಹಿಸಿಟ್ಟಿದ್ದ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪಟ್ಟಣಗೆರೆ ಶೆಡ್​​ ಕಾರ್ಮಿಕರ ಬಾಯಿ ಮುಚ್ಚಿಸಲು ಭಾರೀ ಮೊತ್ತದ ದುಡ್ಡಿನ ಆಮಿಷ ಒಡ್ಡಲಾಗಿತ್ತು. ಪ್ರಕರಣ ಸಂಬಂಧ 2ನೇ ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ 40 ಲಕ್ಷ ರೂ. ಹಣದ ಬಗ್ಗೆ ದರ್ಶನ್ ಬಾಯಿಟ್ಟಿದ್ದಾರೆ. ಆರ್.ಆರ್.ನಗರದ ಐಡಿಯಲ್ ಹೋಮ್ ಲೇಔಟ್‌ನಲ್ಲಿರುವ ದರ್ಶನ್ ಮನೆಯಲ್ಲಿ 37.40 ಲಕ್ಷ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. 


ಇದನ್ನೂ ಓದಿ: ಇನ್ಮುಂದೆ ಹೊಸ ಕಾನೂನು ಮಾಡೋಣ..! ಸಂಚಲನ ಮೂಡಿಸುತ್ತಿದೆ ನಟ ಸೂರ್ಯ ಹೇಳಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.