“ನಾನು ವಿಚ್ಛೇದನ ಪಡೆಯುತ್ತಿದ್ದೇನೆ…”- ಐಶ್ವರ್ಯಾ ಜೊತೆ ಡಿವೋರ್ಸ್ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್ ಹೇಳಿಕೆ

Abhishek Bachchan on Divorce Rumour: ಅದು 2014… "ನಾನು ವಿಚ್ಛೇದನ ಪಡೆಯುತ್ತಿದ್ದೇನೆ. ಏಕೆ ಎಂದು ಆಶ್ಚರ್ಯಪಡುತ್ತೀರಾ?" ಎನ್ನುತ್ತಾ ನಟ ಅಭಿಷೇಕ್ ಬಚ್ಚನ್ ಟ್ವಿಟರ್‌ ಮೂಲಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಇದನ್ನು ಕಂಡ ಜನರು ಶಾಕ್ ಆಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

2 /7

ಬಾಲಿವುಡ್ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ವದಂತಿ ಅನೇಕ ದಿನಗಳಿಂದ ಸುದ್ದಿಯಲ್ಲಿದೆ.

3 /7

ಈ ವದಂತಿಗಳ ಮಧ್ಯೆ ಜೋಡಿ ಎಷ್ಟೇ ಬಾರಿ ಒಟ್ಟಾಗಿ ಕಾಣಿಸಿಕೊಂಡರೂ ಸಹ, ಇವರ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬಂತೇ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲದರ ಮಧ್ಯೆ ಅಭಿಷೇಕ ಮಾಡಿರುವ ಹಳೆಯ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.

4 /7

ಅಂದು ಕೂಡ ಇದೇ ರೀತಿ ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿ ಹಬ್ಬಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ ನಟ, ಇಂತಹದ್ದೊಂದು ಪೋಸ್ಟ್ ಶೇರ್ ಮಾಡಿದ್ದರು.

5 /7

"ಸರಿ.. ನಾನು ವಿಚ್ಛೇದನ ಪಡೆಯುತ್ತಿದ್ದೇನೆ. ನನಗೆ ಈ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು! ಅಂದಹಾಗೆ ನಾನು ಮರು ಮದುವೆ ಯಾವಾಗ ಆಗುತ್ತೇನೆ ಎಂಬುದನ್ನು ಸಹ ನನಗೆ ತಿಳಿಸುವಿರಾ? ಧನ್ಯವಾದಗಳು”ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದರು.

6 /7

"ನನಗೆ ಮತ್ತು ಐಶ್ವರ್ಯಾಗೆ ಹೇಗೆ ನಮ್ಮ ಜೀವನವನ್ನು ನಡೆಸಬೇಕು ಎಂಬುದು ತಿಳಿದಿದೆ. ಮೂರನೇ ವ್ಯಕ್ತಿ ಅದರ ಬಗ್ಗೆ ತಿಳಿಸಿಕೊಡುವ ಅಗತ್ಯವಿಲ್ಲ. ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಮತ್ತು ಅವಳು ನನ್ನನ್ನು ಎಷ್ಟು ಪ್ರೀತಿಸುತ್ತಾಳೆಂದು ನನಗೆ ತಿಳಿದಿದೆ'' ಎಂದಿದ್ದರು,

7 /7

“ನೀವು ನಿಮ್ಮ ಅನುಕೂಲಕ್ಕಾಗಿ ಏನನ್ನಾದರೂ ತಪ್ಪಾಗಿ ಅರ್ಥೈಸಿಕೊಂಡಿದ್ದರೆ, ಅದನ್ನೇ ಮುಂದುವರಿಸಿ. ಅಷ್ಟಕ್ಕೂ ನಾನು ಸಾರ್ವಜನಿಕ ವ್ಯಕ್ತಿ. ನಾನು ಎಲ್ಲಾ ಸಮಯದಲ್ಲೂ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ನನ್ನ ಮದುವೆ ಮತ್ತು ನನ್ನ ಜೀವನ ಮಾಧ್ಯಮಗಳು ಏನು ಹೇಳುತ್ತವೆ ಎಂಬುದನ್ನು ಅನುಸರಿಸಲು-ಅರಿಯಲು ಹೋಗುವುದಿಲ್ಲ. ಹಾಗಾಗಿ ಇದು ನಿಜವಾಗಿಯೂ ನನಗೆ ಸಮಸ್ಯೆಯಲ್ಲ" ಎಂದಿದ್ದಾರೆ.