ಡಿ ಬಾಸ್ ಅಭಿನಯದ `ರಾಬರ್ಟ್` ಸಿನಿಮಾ ರೀ ರಿಲೀಸ್!
Robert Re release: ಕನ್ನಡ ಚಿತ್ರರಂಗದಲ್ಲಿ ಭಾರಿ ಸೌಂಡ್ ಮಾಡಿದ್ದ ಡಿ ಬಾಸ್ ನಟನೆಯ ‘ರಾಬರ್ಟ್ʼ ಚಿತ್ರ ರೀ ರಿಲೀಸ್ಗೆ ಸಜ್ಜಾಗಿದೆ. ಹಾಗಾದರೆ ಸಿನಿಮಾ ರೀ ರಿಲೀಸ್ ಯಾವಾಗ? ಯಾವ ಯಾವ ಥಿಯೇಟರ್ನಲ್ಲಿ ಸಿನಿಮಾ ತೆರೆ ಕಾಣಲಿದೆ? ಈ ಸ್ಟೋರಿ ಓದಿ.
Robert: ಕನ್ನಡ ಚಿತ್ರರಂಗದಲ್ಲಿ ಸಿನಿಮಾ ರೀ ರಿಲೀಸ್ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಒಂದಾದ ಮೇಲೊಂದು ಕನ್ನಡ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಇತ್ತೀಚೆಗಷ್ಟೆ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿರುವ 'A' ಚಿತ್ರ ರಿಲೀಸ್ ಆಗಿತ್ತು. ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಅಪ್ಪು ಅಭಿನಯದ 'ಜಾಕಿ'(Jackie) ಚಿತ್ರವನ್ನ ಕೂಡ ರೀ ರಿಲೀಸ್ ಮಾಡಲಾಗಿತ್ತು. ಇದೀಗ 'ರಾಬರ್ಟ್' ಸರದಿ. ಹೌದು, 2021 ರಲ್ಲಿ ರಿಲೀಸ್ ಆಗಿ ಹಿಟ್ ಕಂಡಿದ್ದ 'ರಾಬರ್ಟ್' ಸಿನಿಮಾ ಇದೇ ಶುಕ್ರವಾರ ಅಂದ್ರೆ ಜೂ. 07 ಕ್ಕೆ ರೀ ರಿಲೀಸ್ ಆಗಲು ಸಜ್ಜಾಗಿದೆ.
ಡಿ ಬಾಸ್ ಅಭಿನಯದ 'ರಾಬರ್ಟ್'(Robert) ಚಿತ್ರ 2021 ರಲ್ಲಿ ತೆರೆಕಂಡಿತ್ತು. ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ದರ್ಶನ್, ಅಭಿಮಾನಿಗಳ ಮನ ಗೆದಿದ್ದರು. ಇದೀಗ ಮತ್ತೆ 'ರಾಬರ್ಟ್'ಅಬ್ಬರಿಸಲು ಪ್ರೇಕ್ಷಕರ ಮುಂದೆ ಬರ್ತಾ ಇದೆ. ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಜೋಡಿ ಈ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಬಾಕ್ಸ್ ಆಫಿಸ್‌ನಲ್ಲಿ ಸಿನಿಮಾ ಧೂಳ್ ಎಬ್ಬಿಸುವ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ಇದನ್ನೂ ಓದಿ: ಈ ವಾರ ಥಿಯೇಟರ್‌ಗಳಲ್ಲಿ ಕನ್ನಡ ಸಿನಿಮಾಗಳದ್ದೆ ಅಬ್ಬರ! ಯಾವೆಲ್ಲಾ ಸಿನಿಮಾ ರಿಲೀಸ್ ಆಗಲಿದೆ ಗೊತ್ತಾ..?
ತರುಣ್ ನಿರ್ದೇಶನದ ರಾಬರ್ಟ್ ಸಿನಿಮಾ ಮಾರ್ಚ್ 11, 2021 ರಲ್ಲಿ ರಿಲೀಸ್ ಆಗಿತ್ತು. ಥಿಯೇಟರ್‌ಗಳಲ್ಲಿ ಒಳ್ಳೆ ರೆಸ್ಪಾನ್ಸ್ ಗಳಿಸಿದ್ದ ಈ ಸಿನಿಮಾ ಬರೋಬ್ಬರಿ 100 ಕೋಟಿ ಕಲೆಕ್ಷನ್ ಮಾಡಿತ್ತು. ಅದಷ್ಟೆ ಅಲ್ಲ ಬಹುದಿನಗಳ ವರೆಗೂ ಅಷ್ಟರ ಮಟ್ಟಿಗೆ ಗೆಲುವು ಕಂಡಿರದ ದರ್ಶನ್‌ಗೆ ಈ ಸಿನಿಮಾ ಒಳ್ಳೆ ಫೇಮ್ ತಂದುಕೊಟ್ಟಿತ್ತು.
ದರ್ಶನ್ ಅಭಿನಯದ ಹಿಟ್ ಸಿನಿಮಾಗಳ ಲಿಸ್ಟ್‌ನಲ್ಲಿ ರಾಬರ್ಟ್ ಸಿನಿಮಾ ಕೂಡ ಒಂದಾಗಿದೆ. ಇದೀಗ ಈ ಸಿನಿಮಾ ಮತ್ತೇ ರೀ ರಿಲೀಸ್ ಆಗ್ತಾ ಇರೋದು ದರ್ಶನ್ ಅಭಿಮಾನಿಗಳಿಗೆ ಸಂತಸ ತಂದುಕೊಟ್ಟಿದೆ.
ಇದನ್ನೂ ಓದಿ: Maidaan : ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ಗೆ ಎಂಟ್ರಿ
ಡಿ ಬಾಸ್ ಅಭಿನಯದ 'ಕಾಟೇರ'(Kaatera) ಡಿಸೆಂಬರ್ 29, 2023 ರಲ್ಲಿ ರಿಲೀಸ್ ಆಗಿತ್ತು ಈ ಸಿನಿಮಾ ಕೂಡ ಭಾರಿ ದೊಡ್ಡ ಹಿಟ್ ಕಂಡಿತ್ತು. ಆಗಿನಿಂದ ಈಗಿನವರೆಗೆ ಡಿ ಬಾಸ್ ಅಭಿನಯದ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಇದೀಗ 6 ತಿಂಗಳ ಅಂತರದ ನಂತರ ಡಿ ಬಾಸ್ ಸಿನಿಮಾ ರೀ ರಿಲೀಸ್ ಆಗುತ್ತಾ ಇರೋದು ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಇನ್ನೂ ಈ ಸಿನಿಮಾಗೆ ಯಾವ ರೀತಿಯ ರೆಸ್ಪಾನ್ಸ್ ಸಿಗಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ.