ಬೆಂಗಳೂರು : ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂಬ ಕಾಳಜಿ ಇಟ್ಟುಕೊಂಡು ಹೋರಾಡುವ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್​ (Sanchari Vijay) ನಟಿಸಿರುವ ತಲೆದಂಡ ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾ (Taledanda Film) . ಒಂದು ಪುಟ್ಟ ಹಳ್ಳಿ ಅಲ್ಲೊಂದಷ್ಟು ಜನ ಪರಿಸರವೇ ಅವರ ಉಸಿರು ಪ್ರಕೃತಿ ಮಾತೆಯೇ ಅವರ ದೇವರು.


COMMERCIAL BREAK
SCROLL TO CONTINUE READING

ಬುದ್ಧಿಮಾಂದ್ಯ ನಾಗಿ ಹುಟ್ಟಿದ ಮಗನಿಗೆ ತಂದೆ ತೋರುವ ಅಕ್ಕರೆ, ತಾಯಿ ತೋರುವ ಪ್ರೀತಿ ಈ ಸಿನಿಮಾದಲ್ಲಿ ಮನಮುಟ್ಟುವಂತೆ ಮೂಡಿಬಂದಿದೆ (Taledandaa review). ಪರಿಸರದ ಮೇಲೆ ಅಪಾರ ಕಾಳಜಿ ಹೊಂದಿರುವ ತಂದೆ, ಮಗನಲ್ಲೂ ಪರಿಸರದ ಬಗ್ಗೆ ಅರಿವು ಮೂಡಿಸುತ್ತಾನೆ. ಮರಗಳನ್ನು ಮಗುವಿನಂತೆ ಕಾಣುವ ಓರ್ವ ಬುದ್ಧಿಮಾಂದ್ಯನನ್ನು ಬಂಡವಾಳಶಾಹಿಗಳು ಕಾಣುವ ರೀತಿಯನ್ನು ಅದ್ಭುತವಾಗಿ ತೋರಿಸಲಾಗಿದೆ. 


ಇದನ್ನೂ ಓದಿ : ಥ್ರಿಲ್ಲರ್ ಎಕ್ಸ್ ಪೆರಿಮೆಂಟಲ್ ‘ರಾಘು’ಫಸ್ಟ್ ಲುಕ್ ರಿಲೀಸ್..!


ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ನಾಶಮಾಡುವ ಸಂಗತಿಯನ್ನು ಸಿನಿಮಾ ದಲ್ಲಿ ಕಟ್ಟಿಕೊಡಲಾಗಿದೆ.  ಅಪ್ಪ-ಅಮ್ಮ ಬುದ್ಧಿಮಾಂದ್ಯ ಮಗನೊಂದಿಗೆ ಆರಂಭವಾಗುವ ಕಥೆ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣಾಲೆಗಳು ಒದ್ದೆಯಾಗುವ ದೃಶ್ಯಗಳು ಇವೆ. 


ಮುಗ್ಧತೆ, ಪರಿಸರದ ಅರಿವು, ಮರಗಳನ್ನು ಉಳಿಸಬೇಕೆಂಬ ಕಾಳಜಿ ಈ ಎಲ್ಲದರ ಮಧ್ಯೆ ಅಧಿಕಾರದ ದರ್ಪ, ಆಧುನಿಕತೆ ತಂದೊಡ್ಡುತ್ತಿರುವ ಅವನತಿ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ (Sanchari Vijay Film). ಮರಕ್ಕೆ ಕೊಡಲಿ ಏಟು ಬಿದ್ದರೆ ಅದಕ್ಕೆ ಔಷಧಿ ಹಚ್ಚುವ ಮಗುವಂತೆ ಬಿಗಿದಪ್ಪಿ ಅಳುವ ದೃಶ್ಯ ಎಂಥವರ ಕರಳನ್ನು ಹಿಂಡುವಂತಿದೆ. ಪರಿಸರಕ್ಕಾಗಿ ಜೀವನವನ್ನ ಮುಡುಪಿಟ್ಟ ಜೀವದ ಕಥೆಯೇ ತಲೆದಂಡ. 


ಇದನ್ನೂ ಓದಿ : ದಿವ್ಯಾ ಉರುಡುಗ - ಅರವಿಂದ್ ಎಂಗೇಜ್ಮೆಂಟ್ ಯಾವಾಗ ಗೊತ್ತಾ?


ಪ್ರಕೃತಿಯನ್ನು ಉಳಿಸಬೇಕೆಂಬ ತುಡಿತದ ಜೊತೆಗೆ ಸೋಲಿಗ ಜನಾಂಗದ ಹಾಡುಗಳು ಮತ್ತು ಸಾಂಪ್ರದಾಯಿಕ ಹಬ್ಬಗಳು ಈ ಚಿತ್ರದಲ್ಲಿದೆ. ಸೋಲಿಗ ಭಾಷೆಯ ಸ್ಲಾಂಗ್ ನಲ್ಲಿ ಚಿತ್ರದ ಡೈಲಾಗ್ ಗಳಿವೆ. 


ಮರಗಳ ಔಷಧೀಯ ಗುಣದ ಮಹತ್ವ ಅರಿಯದೆ ಮನುಷ್ಯ ಮಾಡುವ ತಪ್ಪನ್ನು ಎತ್ತಿ ತೋರಿಸಲಾಗಿದೆ (importance of Plants). ಮರಗಳ ಮೇಲಾಗುತ್ತಿರುವ ಅನ್ಯಾಯವನ್ನು ತಡೆಯುವ ಬುದ್ಧಿಮಾಂದ್ಯನ ಸ್ಥಿತಿಯ ಬಗ್ಗೆ ಮನಮುಟ್ಟುವಂತೆ ತೋರಿಸಲಾಗಿದೆ.


ತಾಯಿಗೆ ಮಗನೆ ಜೀವ.. ಆದರೆ ಆ ಮಗನಿಗೆ ಮರಗಳೇ ದೈವ.. ಮಗನಿಗಾಗಿ ಮಿಡಿಯುವ ತಾಯಿಯ ಹೃದಯ ಒಂದೆಡೆ, ಮರಗಳ ರಕ್ಷಣೆಗೆ ಹವಣಿಸುವ ಮಗನ ಮನಸ್ಸು ಮತ್ತೊಂದೆಡೆ ಈ ಎರಡರ ಮಧ್ಯೆ ಸಾಗುವ ಕಥೆ ತಲೆದಂಡ.


ಇದನ್ನೂ ಓದಿ : ಸಖತ್ ಸೌಂಡ್ ಮಾಡುತ್ತಿದೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಟ್ರೇಲರ್


ತನ್ನೂರಿನ ಮರಗಳನ್ನು ರಕ್ಷಿಸುವ ಓರ್ವ ಬುದ್ಧಿಮಾಂದ್ಯ ಕೊನೆಗೆ ಅದೆಂತಹ ತಲೆದಂಡ ತೆರಬೇಕಾಗುತ್ತದೆ ಎಂಬುದೇ ಚಿತ್ರದ ಪ್ರಮುಖ ಅಂಶ. ಈ ಸಿನಿಮಾ ಒಬ್ಬ  ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ, ಹೋರಾಟದ ಕಥೆ ಹೊಂದಿದ್ದು ಪಕ್ಕಾ ಕಂಟೆಂಟ್ ಬೇಸ್ಡ್ ಸಿನಿಮಾ. ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ ಹಾಡುಗಳು. ಒಟ್ಟು 12 ಹಾಡುಗಳಿದ್ದು, ಎಲ್ಲವೂ ಬಿಟ್ ಸಾಂಗ್ ಗಳು. 


ತಲೆದಂಡ ಚಿತ್ರಕಥೆ ಕೇಳುತ್ತಿದ್ದ ಹಾಗೆ ಸಂಪೂರ್ಣ ಪರಿಸರದ ಒಂದು ಚಿತ್ರಣ ಕಣ್ಮುಂದೆ ಬರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.