ಸದ್ಯ ಕನ್ನಡ ಕಿರುತೆರೆಯ ತಾರಾಜೋಡಿ ವಿವಾಹವನ್ನು ಅಭಿಮಾನಿಗಳು ಎದುರು ನೋಡ್ತಿದ್ದಾರೆಂದ್ರೆ ಬಹುಶಃ ಅದು ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ ಕೆ.ಪಿ. ಮದ್ವೆಯನ್ನು ಅಂದ್ರೆ ತಪ್ಪಾಗದು.
ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಆಶಿಕಾ,ರೋಹನ್..!
ಬಿಗ್ ಬಾಸ್ (Bigboss) ನಲ್ಲಿ ದಿವ್ಯಾ ಅರವಿಂದ್ ಗೆ ಉಂಗುರು ಕೊಟ್ಟಾಗಲೇ ಬಿಗ್ ಬಾಸ್ ನಿಂದ ಹೊರಬರುತ್ತಿದ್ದಂತೆ ಎಂಗೇಜ್ಮೆಂಟ್ ಅನ್ನೋ ಚರ್ಚೆ ಶುರುವಾಗಿತ್ತು. ಬಿಗ್ ಬಾಸ್ ಮುಗಿದ ಬಳಿಕ ದಿವ್ಯಾ ಉರುಡುಗ ಅವರ ತಂದೆ ಇಂಟರ್ ವ್ಯೂ ಒಂದರಲ್ಲಿ ದಿವ್ಯಾ ಅರವಿಂದ್ ಗೆ ಉಂಗುರ ಕೊಟ್ಟ ಬಗ್ಗೆ ಖುಷಿಯಿಂದಲೇ ಮಾತನಾಡಿದ್ರು. ಜೊತೆಗೆ ಅವಳ ಖುಷಿಯೇ ನಮ್ಮ ಖುಷಿ ಅನ್ನೋ ಮೂಲಕ ಪರೋಕ್ಷವಾಗಿ ಅರವಿಯಾ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು.
ಇದನ್ನೂ ಓದಿ: ಸಖತ್ ಸೌಂಡ್ ಮಾಡುತ್ತಿದೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಟ್ರೇಲರ್
ಅರವಿಂದ್ ಮತ್ತು ದಿವ್ಯಾ ಬಿಗ್ ಬಾಸ್ ನಿಂದ ಬಂದ ಮೇಲೆ ಸಾಕಷ್ಟು ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಿದೆ. ದಿವ್ಯಾರ ಕೆಲವು ಸೋಶಿಯಲ್ ಮೀಡಿಯಾ ಪೋಸ್ಟ್ ಗಳು ಪರೋಕ್ಷವಾಗಿ ಅರವಿಂದ್ ಮತ್ತು ತನ್ನ ನಡುವಿನ ಪ್ರೇಮಕಹಾನಿಯನ್ನು ಬಹಿರಂಗ ಪಡಿಸುವಂತಿವೆ. ಅರವಿಯಾ ಯಾವುದನ್ನೂ ಸೀಕ್ರೆಟ್ ಆಗಿಟ್ಟಿಲ್ಲ. ನೇರವಾಗಿ ಹೇಳದಿದ್ದರೂ ಇಬ್ಬರ ನಡುವೆ ಪ್ರೀತಿ ಇದೆ ಎಂಬುದನ್ನು ಬಿಗ್ ಬಾಸ್ ಮನೆಯಿಂದಲೂ ಈಗಲೂ ಸೂಚ್ಯವಾಗಿ ಹೇಳುತ್ತಲೇ ಬರುತ್ತಿದ್ದಾರೆ.ಆದರೆ ಯಾವಾಗ ಎಂಗೇಜ್ಮೆಂಟ್ ? ಯಾವಾಗ ಮದ್ವೆ ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಬಾಹುಬಲಿ ದಾಖಲೆಯನ್ನೂ ಮುರಿದ ಆರ್ಆರ್ಆರ್!
ಸದ್ಯ ಇಬ್ಬರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇದ್ದಾರೆ. ವೃತ್ತಿಪರ ರೇಸರ್ ಆಗಿರುವ ಅರವಿಂದ್ ತಮ್ಮ ಆ ವೃತ್ತಿಯ ಜೊತೆಗೆ ಎಂಟರ್ ಟ್ರೈನ್ಮೆಂಟ್ ಕ್ಷೇತ್ರದಲ್ಲೂ ಅಂದ್ರೆ ಕಿರುತೆರೆ, ಸಿನಿಮಾ ಇತ್ಯಾದಿ ಇತ್ಯಾದಿ ವಿಚಾರದಲ್ಲೂ ಸ್ಬಲ್ಪ ವರ್ಕ್ ಮಾಡ್ತಿದ್ದಾರೆ. ದಿವ್ಯಾ-ಅರವಿಂದ್ ಇಬ್ಬರೂ ಮುಂದಿನ ಯುಗಾದಿ ಬಳಿಕ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ. ಆಮೇಲೆ ಕೆಲ ತಿಂಗಳು ಬಿಟ್ಟು ಮದ್ವೆ ಆಗ್ತಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ.
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.