Kantara for Shivaratri : ಸಾಮಾನ್ಯವಾಗಿ ಶಿವರಾತ್ರಿ ವೇಳೆ ರಾತ್ರಿಯಿಡೀ ಜಾಗರಣೆ ಮಾಡಿ ಭಕ್ತಿಯಿಂದ ಶಿವನ ನಾಮಸ್ಮರಣೆ ಮಾಡುತ್ತಾರೆ. ಚಿತ್ರಪ್ರೇಮಿಗಳು ಶಿವರಾತ್ರಿ ಜಾಗರಣೆ ಹೆಸರಿನಲ್ಲಿ ಸಿನಿಮಾ ನೋಡುತ್ತಾ ಕಾಲ ಕಳೆಯುತ್ತಾರೆ. ಶಿವರಾತ್ರಿಯನ್ನು ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಅಲ್ಲದೆ, ತೆಲುಗು ರಾಜ್ಯಗಳಲ್ಲಿ ಜಾಗರಣೆಗಾಗಿ ಚಿತ್ರಮಂದಿರಗಳಲ್ಲಿ ಭಕ್ತಿ ಪ್ರಧಾನ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ಈ ವರ್ಷ ಶಿವರಾತ್ರಿಯಂದು ದಿ ಡಿವೈನ್‌ ಬ್ಲಾಕ್ಬಸ್ಟರ್‌ ಕಾಂತಾರ ಸಿನಿಮಾ ನೋಡುವ ಅವಕಾಶ ಸಿನಿ ಪ್ರೇಮಿಗಳಿಗೆ ಲಭಿಸಿದೆ.


COMMERCIAL BREAK
SCROLL TO CONTINUE READING

ಅದ್ರೆ, ಕಾಂತಾರ ಕರ್ನಾಟಕದಲ್ಲಿ ರಿ ರಿಲೀಸ್‌ ಆಗುತ್ತಿಲ್ಲ. ಬದಲಿಗೆ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕನ್ನಡಿಗನ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಪ್ರತಿವರ್ಷ ಶಿವರಾತ್ರಿಯ ದಿನದಂದು ಆ ವರ್ಷ ಸೂಪರ್ ಹಿಟ್ ಆಗಿದ್ದ ತೆಲುಗು ಸಿನಿಮಾಗಳ ಪೈಕಿ ಮೂರು ಸಿನಿಮಾಗಳನ್ನು ರಾತ್ರಿಯಿಡಿ ಪ್ರದರ್ಶನ ಮಾಡಲಾಗುತ್ತದೆ. ಅದರಂತೆ ಇದೀಗ, ಕಾಂತಾರ ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಗುವುದು.


ಇದನ್ನೂ ಓದಿ:  Rishabh Shetty : ʻಅತ್ಯಂತ ಭರವಸೆಯ ನಟʼ.. ರಿಷಬ್ ಶೆಟ್ಟಿಗೆ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ


ನಟ ರಿಷಬ್‌ ಶೆಟ್ಟಿ ಈ ಸಿನಿಮಾದಲ್ಲಿ ನಾಯಕಯಾಗಿ ನಟಿಸಿದ್ದು, ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಕಿಶೋರ್ ಮತ್ತು ಅಚ್ಯುತ್ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು 2022 ರ ಅತಿದೊಡ್ಡ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ಒಂದಾಗಿದೆ. ರಿಷಬ್‌ ಅವರೇ ನಿರ್ದೇಶಿಸಿರುವ ಈ ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಇದುವರೆಗೆ 350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.


ಸದ್ಯ ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಿದ್ದು, ಶಿವರಾತ್ರಿಯಂದು ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ನಿರ್ಧರಿಸಲಾಗಿದೆ. ಈ ಚಿತ್ರವು ಕರಾವಳಿ ಭಾಗದ ಜನರ ದೈವಿಕ ಕಲೆಯಾದ ಭೂತಕೋಲವನ್ನು ಒಳಗೊಂಡಿದೆ. ಎಷ್ಟೋ ಜನ ಆ ಕಲೆಯನ್ನು ಇಷ್ಟಪಟ್ಟಿದ್ದರಿಂದ ಪ್ರೇಕ್ಷಕರು ಸಿನಿಮಾವನ್ನು ಪದೇ ಪದೇ ನೋಡುತ್ತಿದ್ದರು. ಈ ಹಿನ್ನಲೆಯಲ್ಲಿ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿ ಅದ್ಧೂರಿಯಾಗಿ ಕಲೆಕ್ಷನ್ ಮಾಡಿತ್ತು. ಇದೀಗ ಕನ್ನಡಿಗನ ಸಿನಿಮಾ ಅನ್ಯ ರಾಜ್ಯದಲ್ಲಿ ಬೇಡಿಕೆಯ ಮೇಲೆ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.