ಬೆಂಗಳೂರು: ಕನ್ನಡದಲ್ಲಿ ಅದ್ಭುತ ಸ್ಟೋರಿ ಹೊಂದಿರೋ ಸಾಲು ಸಾಲು ಸಿನಿಮಾಗಳು ಬರುತ್ತಿವೆ. ಒಳ್ಳೊಳ್ಳೆ ಕಂಟೆಂಟ್ ಇರೋ ಚಿತ್ರಗಳನ್ನು ಜನ ಕೂಡ ಒಪ್ಪಿ ಅಪ್ಪಿಕೊಳ್ಳುತ್ತಾರೆ. ಅಂತೆಯೇ ಇದೀಗ ಸಖತ್ ಸ್ಟೋರಿ ಹೊಂದಿರೋ ಸಿನಿಮಾ ಬರುತ್ತಿದೆ. ಅದುವೇ 'ರಿಚ್ಚಿ'. ಯೆಸ್ ರಿಚ್ಚಿ ಟೈಟಲ್ ಕೂಡ ಅಷ್ಟೇ ಕ್ಯಾಚಿಯಾಗಿದೆ.


COMMERCIAL BREAK
SCROLL TO CONTINUE READING

ಹೊಸತನ, ಹೊಸ ಪ್ರಯೋಗಗಳನ್ನು ಒಳಗೊಂಡಿರುವ ಒಂದಷ್ಟು ಚಿತ್ರಗಳು ಇಡೀ ದೇಶವೇ ತಿರುಗಿ ನೋಡುವಂತೆ ತಯಾರಾಗುತ್ತಿವೆ. ಜೊತೆಗೆ ಬ್ಯಾಕ್ ಟು ಬ್ಯಾಕ್ ಬಿಡುಗಡೆಗೂ ಸಜ್ಜಾಗುತ್ತಿರೋ ಮ್ಯಾಟರ್ ನಿಮ್ಗೆ ಗೊತ್ತೇ ಇದೆ. ಆ ಸಾಲಿನಲ್ಲಿ ಸದ್ಯದ ಮಟ್ಟಿಗೆ ಮುನ್ನೆಲೆಯಲ್ಲಿರುವ ಚಿತ್ರ ‘ರಿಚ್ಚಿ’. ವಿಶೇಷವೆಂದರೆ ಈ ಸಿನಿಮಾದ ನಾಯಕ, ನಿರ್ದೇಶಕ, ನಿರ್ಮಾಪಕ ಹೀಗೆ ಅನೇಕ ಜವಾಬ್ದಾರಿಗಳನ್ನು ರಿಚ್ಚಿ ಅವರೇ ಹೊತ್ತುಕೊಂಡಿದ್ದಾರೆ. ತಮ್ಮ ಹೆಸರನ್ನೇ ಶೀರ್ಷಿಕೆಯಾಗಿಟ್ಟುಕೊಂಡು ಒಂದೊಳ್ಳೆ ಸಿನಿಮಾ ಮಾಡಿರುವ ಖಷಿಯಲ್ಲಿರುವ ರಿಚ್ಚಿ, ತಮ್ಮ ಸಿನಿಮಾದ ಚೆಂದದ ಹಾಡೊಂದನ್ನು ಪ್ರೇಕ್ಷಕರಿಗೆ ತಲುಪಿಸಲು ಮುಂದಾಗಿದ್ದಾರೆ.


ಇದನ್ನೂ ಓದಿ: Actress Jennifer: ನಿರ್ಮಾಪಕನ ವಿರುದ್ದ ಲೈಂಗಿಕ ಕಿರುಕುಳ ಆರೋಪ - ಕಿರುತೆರೆ ನಟಿ ಜೆನ್ನಿಫರ್


ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ಹಾಡಿರುವ ಆ ಹಾಡು ಇದೇ ಮೇ ತಿಂಗಳ 18ರಂದು ಬಿಡುಗಡೆಗೊಳ್ಳಲಿದೆ. ಸಾಮಾನ್ಯವಾಗಿ ಒಂದು ಜವಾಬ್ದಾರಿ ಹೊತ್ತುಕೊಂಡು ಸಿನಿಮಾವೊಂದನ್ನು ರೂಪಿಸೋದೇ ಸಾಹಸ. ಅಂಥದ್ರಲ್ಲಿ ಎಲ್ಲಾ ಜವಾಬ್ದಾರಿಗೂ ಹೆಗಲುಕೊಟ್ಟು, ಬಹು ಕಾಲದ ಕನಸನ್ನು ನನಸು ಮಾಡಿಕೊಂಡಿರೋ ರಿಚ್ಚಿಯ ಸಾಹಸವನ್ನು ಮೆಚ್ಚದಲೇಬೇಕು. ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗೆ ಸೇರಬಹುದಾದ ಈ ಚಿತ್ರದಲ್ಲಿ ಹಾಡುಗಳಿಗೂ ಪ್ರಧಾನ ಪ್ರಾಶಸ್ತ್ಯ ಕೊಡಲಾಗಿದೆಯಂತೆ. ಅದರಲ್ಲೊಂದು ಹಾಡನ್ನು ಗೌಸ್ ಫೀರ್ ಬರೆದಿದ್ದಾರೆ. ಅದಕ್ಕೆ ಅಗಸ್ತ್ಯ ಸಂತೋಷ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದ ಮಂದಿಗೆ ಚಿರಪರಿಚಿತರಾಗಿರುವ ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ಆ ಹಾಡಿಗೆ ಧ್ವನಿಯಾಗಿದ್ದಾರೆ. ಈಗಾಗಲೇ ಅನೇಕ ಹಿಟ್ ಸಾಂಗುಗಳನ್ನು ಹಾಡಿ, ಒಂದಷ್ಟು ಕಾಲದಿಂದ ದೂರವುಳಿದಿದ್ದ ಕುನಾಲ್ ಗಾಂಜಾವಾಲಾ ಈ ಹಾಡಿನ ಮೂಲಕ ಮತ್ತೆ ವಾಪಾಸಾಗಿದ್ದಾರೆ.


ಇನ್ನು ಈ ಈ ಚಿತ್ರದಲ್ಲಿ ರಿಚ್ಚಿಗೆ ನಾಯಕಿಯಾಗಿ ಕಿರುತೆರೆ ಖ್ಯಾತಿಯ ರಮೋಲಾ ನಟಿಸಿದ್ದಾರೆ. ಒಂದು ಭರ್ಜರಿ ತಾರಾಗಣ ಈ ಜೋಡಿಗೆ ಸಾಥ್ ಕೊಟ್ಟಿದೆ. ಹಲವಾರು ಹೊಸತನ, ಚೆಂದದ ಕಥೆ ಮತ್ತು ಅದ್ಭುತ  ಮೇಕಿಂಗ್‍  ಕೂಡ ಈ ಸಿನಿಮಾಗಿದೆ. ಪ್ರತಿಭಾವಂತರ ತಾಂತ್ರಿಕ ವರ್ಗದ ಸಾಥ್‍ನೊಂದಿಗೆ ಈ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆಯೆಂಬ ತೃಪ್ತಿ ಚಿತ್ರತಂಡದಲ್ಲಿದೆ. ವಿಶೇಷವೆಂದರೆ ಖ್ಯಾತ ಕೋರಿಯೋಗ್ರಾಫರ್ ಚಿನ್ನಿಮಾಸ್ಟರ್ ಬಲು ಪ್ರೀತಿಯಿಂದ ಈ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದ್ದಾರೆ.


ಇದನ್ನೂ ಓದಿ: ಕೆಂಪು ಬಿಕಿನಿಯಲ್ಲಿ ಸೌಂದರ್ಯದ ಗಣಿ ನೇಹಾ ಮಲ್ಲಿಕ್‌, ಪೋಟೋಸ್‌ ನೋಡಿ..!


ಅಣಜಿ ನಾಗರಾಜ್ ಅರ್ಪಿಸುವ ಈ ಚಿತ್ರಕ್ಕೆ ರಾಕೇಶ್ ರಾವ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾದಲ್ಲಿ ಮೈ ನವಿರೇಳಿಸುವಂತಹ ಸಾಹಸ ಸನ್ನಿವೇಶಗಳೂ ನಿಮಗೆ ಪಕ್ಕಾ ಖುಷಿ ಕೊಡುತ್ತವೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಕಾರ್ಯನಿರ್ವಹಿಸಿರುವ ರಿಚ್ಚಿ, ಅಚ್ಚರಿದಾಯಕ ಲುಕ್‍ಗಳೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಿರುವ ಸಂಭ್ರಮದಲ್ಲಿದಾರೆ. ಅಜಿತ್ ಕುಮಾರ್ ಎನ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿ ಪ್ರಕಾಶ್, ಧನಂಜಯ ಮತ್ತು ಭೂಷಣ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಹಾಡು ಬಿಡುಗಡೆಗೊಂಡ ನಂತರದಲ್ಲಿ ‘ರಿಚ್ಚಿ’  ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆಯಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.