ಯೋಗರಾಜ್‌ ಭಟ್‌ರ ಪ್ರಕಾರ ಗದ್ದುಗೆ ಏರೋ ಪಕ್ಷ ಯಾವುದು ಗೊತ್ತಾ? ವಿಡಿಯೋ ನೋಡಿ..!

Yogaraj Bhat : ಕನ್ನಡ ಚಿತ್ರರಂಗದ ಸ್ಟಾರ್‌ ನಿರ್ದೇಶಕ ಯೋಗರಾಜ್‌ ಭಟ್‌ ಸಾಮಾನ್ಯವಾಗಿ ರಾಜಕೀಯದ ಬಗ್ಗೆ ಏನೂ ಮಾತನಾಡುವುದಿಲ್ಲ. ಇವರು ಯಾವುದೇ ನಿರ್ಧಿಷ್ಟ ಪಕ್ಷಕ್ಕೆ ಬೆಂಬಲವನ್ನು ನೀಡುವುದಿಲ್ಲ, ಸಾಮಾನ್ಯವಾಗಿ ಇವರು ಎಲ್ಲ ರಾಜಕೀಯ ಮುಖಂಡರ ಜೊತೆಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.   

Written by - Zee Kannada News Desk | Last Updated : May 12, 2023, 12:02 PM IST
  • ಯೋಗರಾಜ್‌ ಭಟ್ಟರು ಯಾವುದೇ ರಾಜಕೀಯ ಪಕ್ಷಗಳ ಕುರಿತು ನೇರವಾಗಿ ಮಾತನಾಡಿರಲಿಲ್ಲ,
  • ಮತಚಲಾಯಿಸಿ ಬಂದ ನಂತರ ಪತ್ನಿ ಹಾಗೂ ಮಕ್ಕಳೊಂದಿಗೆ ರಾಜಕೀಯ ಲೆಕ್ಕಾಚಾರ ಮಾಡಿದ್ದಾರೆ.
  • ಸಾಮಾನ್ಯವಾಗಿ ಭಟ್ಟರ ಸಿನಿಮಾದಲ್ಲಿ ರಾಜಕೀಯದ ಛಾಯೆ ಇದ್ದೇ ಇರುತ್ತೆ,
ಯೋಗರಾಜ್‌ ಭಟ್‌ರ ಪ್ರಕಾರ ಗದ್ದುಗೆ ಏರೋ ಪಕ್ಷ ಯಾವುದು ಗೊತ್ತಾ? ವಿಡಿಯೋ ನೋಡಿ..!  title=

Karnataka Assembly Election 2023 : ಯೋಗರಾಜ್‌ ಭಟ್ಟರು ಯಾವುದೇ ರಾಜಕೀಯ ಪಕ್ಷಗಳ ಕುರಿತು ನೇರವಾಗಿ ಮಾತನಾಡಿರಲಿಲ್ಲ, ಆದರೆ ಇದೀಗ ಅವರು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತಚಲಾಯಿಸಿ ಬಂದ ನಂತರ ಪತ್ನಿ ಹಾಗೂ ಮಕ್ಕಳೊಂದಿಗೆ ರಾಜಕೀಯ ಲೆಕ್ಕಾಚಾರ ಮಾಡಿದ್ದಾರೆ. ಸಾಮಾನ್ಯವಾಗಿ ಭಟ್ಟರ ಸಿನಿಮಾದಲ್ಲಿ ರಾಜಕೀಯದ ಛಾಯೆ ಇದ್ದೇ ಇರುತ್ತೆ, ಆದರೆ ಅದು ಒಮ್ಮೊಮ್ಮೆ ಗೋಚರಿಸುತ್ತೆ ಒಮ್ಮೆ ಗೋಚರಿಸುವುದಿಲ್ಲ. 

ಹೀಗೆ ಅವರು ಯಾವತ್ತು ರಾಜಕೀಯ ಪಕ್ಷ ಅಥವಾ ಮುಖಂಡರ ಕುರಿತಾಗಿ ನೇರವಾಗಿ ಮಾತನಾಡಿರಲಿಲ್ಲ. ಅಂತಹ ಸಂದರ್ಭ ಬಂದರೆ ಅದರಿಂದ ತಪ್ಪಿಸಿಕೊಂಡ ನಿದರ್ಶನಗಳು ಇವೆ. ಅದೇನೋ ಇದೀಗ ಅವರ ಪತ್ನಿ ರೇಣುಕಾ ಅವರೊಂದಿಗೆ ರಾಜಕೀಯ ಚರ್ಚೆ ಮಾಡಿದ್ದಾರೆ. ಯಾವ ಪಕ್ಷ ಗದ್ದುಗೆ ಏರುತ್ತೆ ಅಂತ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. 

 

ಇದನ್ನೂ ಓದಿ-ರಜನಿಕಾಂತ್‌-ವಿಷ್ಣುವರ್ಧನ್‌ ಸ್ನೇಹದ ಸವಿನೆನಪು-ವಿಡಿಯೋ ವೈರಲ್‌

"ಜನರೇಷನ್‌ ತುಂಬಾ ಸ್ಪೀಡ್‌ ಆಗಿದೆ. ಮನುಷ್ಯ ಕಂಡು ಹಿಡಿದುಕೊಂಡಿದ್ದನ್ನೆಲ್ಲಾ ಮನುಷ್ಯನೇ ಸ್ಪೀಡ್‌ ಮಾಡಿಕೊಂಡಿದ್ದಾನೆ. ಈ ಹಿಂದೆ 5 ದಿನ ಟೆಸ್ಟ್‌ ಕ್ರಿಕೆಟ್‌ ಅಂತ ನಡೆಯುತ್ತಿತ್ತು, ಆದರೆ ಇದೀಗ ಒಂದು ದಿನ ಆಡೋದೆ ದೊಡ್ಡದಾಯಿತು. ಈಗ 20 ಓವರ್‌ಗೆ ಒಂದಾಗಿದೆ. ಇನ್ನೊಂದು ಸ್ವಲ್ಪ ದಿನ ಬರೀ ಹೈಲೈಟ್ಸ್‌ ಅಷ್ಟೇ. ಇನ್ನ ಮೂರುವರೇ ನಾಲ್ಕು ತಾಸು ಸಿನಿಮಾಗಳೆಲ್ಲವೂ ಇದ್ದವು. ಅವೆಲ್ಲ ಈಗ 20 ಸೆಕೆಂಡ್‌ ರೀಲ್ಸ್‌, ಶಾರ್ಟ್‌ ಆಗಿ ಮೊಬೈಲ್‌ನಲ್ಲಿ ಬಿದ್ದು ಬಿಡುತ್ತವೆ. 

ಇನ್ನು ಐದು ವರ್ಷಕ್ಕೆ ಮತ್ತೊಂದು ಚುನಾವಣೆ ನಾಲ್ಕರಿಂದ ಐದು ಮಂದಿ ಕೂತು ಏಳುತ್ತಾರೆನೋ ಗೊತ್ತಿಲ್ಲ. ವರ್ಷಕ್ಕೆ ಇಬ್ಬರು ಅಂತ ಬಂದರೆ, ವರ್ಷಕ್ಕೊಂದು ಎಲೆಕ್ಷನ್‌ ಲೆಕ್ಕಾನೇ ಬರುತ್ತೆ. ಆದಿ ಮಾನವ ಆಗಿಬಿಡೋನ ಅಂತ ಎಲ್ಲರಿಂದ ಮುಕ್ತ ಅಂತ." ಎಂದು ತಮ್ಮದೇ ಎಫಿಕ್‌ ಸ್ಟೈಲ್‌ನ ಮೂಲಕ ಚುನಾವಣಾ ಲೆಕ್ಕಾಚಾರ ಹಾಕಿದ್ದಾರೆ.

ಇದನ್ನೂ ಓದಿ-ಸಿನಿಮಾ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ʼದಿ ಕೇರಳ ಸ್ಟೋರಿʼ ಚಿತ್ರತಂಡ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News