ನಾಳೆ ಧೂಳೆಬ್ಬಿಸಲು ಬರುತ್ತಿದ್ದಾನೆ `ರಾಬರ್ಟ್` ; ಇಲ್ಲಿದೆ ಅದರ ಸ್ಪೆಷಾಲಿಟಿ.!
ರಾಬರ್ಟ್ ಚಿತ್ರದಲ್ಲಿ ದರ್ಶನ್ ಮತ್ತು ನಿರ್ದೇಶಕ ತರುಣ್ ಕಾಂಬಿನೇಶನ್ ಬಗ್ಗೆ ಸಿನಿವಲಯದಲ್ಲಿ ಅಪಾರ ಕುತೂಹಲ ಇದೆ. ಚೌಕ ಸಿನಿಮಾದ ಅತಿಥಿ ಪಾತ್ರ `ರಾಬರ್ಟ್` ಅನ್ನೇ ತರುಣ್ ಇಲ್ಲಿ ಸಿನಿಮಾ ಮಾಡಿದ್ದಾರೆ.
ಬೆಂಗಳೂರು : ಬಹುನಿರೀಕ್ಷಿತ ದರ್ಶನ್ ಅಭಿನಯದ `ರಾಬರ್ಟ್' (Roberrt) ಚಿತ್ರ ನಾಳೆ (ಮಾರ್ಚ್ 11) ರಿಲೀಸ್ ಆಗಲಿದೆ. ಸಿನಿರಂಗದಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರ, ದರ್ಶನ್ ಅಭಿಮಾನಿಗಳ ಹಬ್ಬದ ಸಂಭ್ರಮಕ್ಕೆ ಕಾರಣವಾಗಿದೆ. ಡಿಸೆಂಬರ್ 2019ನಲ್ಲಿ ದರ್ಶನ್ (Darshan) ಅಭಿನಯದ `ಒಡೆಯ' ತೆರೆ ಕಂಡಿತ್ತು. ಒಂದು ವರ್ಷಕ್ಕೂ ಹೆಚ್ಚು ಸುದೀರ್ಘ ಅವಧಿಯ ಬಳಿಕ ದರ್ಶನ್ ಸಿನಿಮಾ ತೆರೆ ಕಾಣುತ್ತಿದೆ.
ರಾಬರ್ಟ್ (Roberrt) ಚಿತ್ರದಲ್ಲಿ ದರ್ಶನ್ ಮತ್ತು ನಿರ್ದೇಶಕ ತರುಣ್ ಕಾಂಬಿನೇಶನ್ ಬಗ್ಗೆ ಸಿನಿವಲಯದಲ್ಲಿ ಅಪಾರ ಕುತೂಹಲ ಇದೆ. ಚೌಕ ಸಿನಿಮಾದ ಅತಿಥಿ ಪಾತ್ರ `ರಾಬರ್ಟ್' ಅನ್ನೇ ತರುಣ್ (Tharun) ಇಲ್ಲಿ ಸಿನಿಮಾ ಮಾಡಿದ್ದಾರೆ. ನೆನಪಿರಲಿ `ಚೌಕ' ಸಿನಿಮಾದಲ್ಲಿ `ರಾಬರ್ಟ್'ಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು.
ಇದನ್ನೂ ಓದಿ : 'ವಿಶ್ವ ಎಂಬ ಚಲಿಸುವ ಗಾಡಿಯಲ್ಲಿ ಯಾರು ಸ್ನೇಹಿತರಲ್ಲಾ ಯಾರು ಶತೃಗಳು ಅಲ್ಲಾ' - ಜಗ್ಗೇಶ್ ಮನದ ಮಾತು
ಚಂದನವನದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಗಳಾದ ಅರ್ಜುನ್ ಜನ್ಯ (Arjun Janya) ಮತ್ತು ಹರಿಕೃಷ್ಣ ಈ ಚಿತ್ರಕ್ಕೆ ಜೊತೆಯಾಗಿ ಸಂಗೀತ ನೀಡಿದ್ದಾರೆ. ಅರ್ಜುನ್ ಜನ್ಯ ಹಾಡುಗಳಿಗೆ ಸಂಗೀತ ಕೊಟ್ಟಿದ್ದರೆ, ಹರಿಕೃಷ್ಣ (Harikrishna) ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಹಾಡುಗಳು ಈಗಾಗಲೇ ಭರ್ಜರಿ ಹಿಟ್ ಆಗಿವೆ.
ರಾಬರ್ಟ್ ಸಿನೆಮಾದಲ್ಲಿ (Cinema) ಘಟಾನುಘಟಿ ಕಲಾವಿದರ ದಂಡೇ ಇದೆ. ಜಗಪತಿ ಬಾಬು, ರವಿ ಕಿಶನ್ ರಾಬರ್ಟ್ನಲ್ಲಿ ವಿಲನ್ ಆಗಿ ಆರ್ಭಟಿಸಲಿದ್ದಾರೆ. ವಿನೋದ್ ಪ್ರಭಾಕರ್, ರವಿಶಂಕರ್, ಚಿಕ್ಕಣ್ಣ, ಅವಿನಾಶ್, ದೇವರಾಜ್, ಶಿವರಾಜ್ ಕೆಆರ್ ಪೇಟೆ, ಐಶ್ವರ್ಯ ಪ್ರಸಾದ್ ಮೊದಲಾದವರು ನಟಿಸಿದ್ದಾರೆ.
ಇದನ್ನೂ ಓದಿ : Petrol Bomb Explodes : ಪೆಟ್ರೋಲ್ ಬಾಂಬ್ ಸಿಡಿಸುವಾಗ ಅನಾಹುತ, ನಟ ರಿಷಬ್ ಶೆಟ್ಟಿಗೆ ಗಾಯ
ತೆಲುಗಿನಲ್ಲೂ ರಾಬರ್ಟ್ ತೆರೆಕಾಣಲಿದೆ. ಆಂಧ್ರ, ತೆಲಂಗಾಣದಲ್ಲೂ ದರ್ಶನ್ (Darshan) ಕಟೌಟ್ ರಾರಾಜಿಸುತ್ತಿವೆ. ತೆಲುಗು ಟೀಸರ್, ಹಾಡುಗಳು ಸಾಕಷ್ಟು ಹಿಟ್ ಆಗಿವೆ. ತೆಲುಗು ವರ್ಷನ್ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.