ಬೆಂಗಳೂರು : ಡಿ ಬಾಸ್ ದರ್ಶನ್ (D Boss Darshan) ಅಭಿನಯದ ಬಹುನಿರೀಕ್ಷಿತ ರಾಬರ್ಟ್ (Roberrt) ಚಿತ್ರ ಮಾರ್ಚ್ 11ಕ್ಕೆ ತೆರೆ ಕಾಣಲಿದೆ. ದರ್ಶನ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಬಹು ದಿನಗಳಿಂದ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಮತ್ತೆ ದರ್ಶನ್ ರಾಬರ್ಟ್ ಚಿತ್ರದ ಹೊಸ ಪೋಸ್ಟರ್ ಶೇರ್ ಮಾಡಿದ್ದಾರೆ. ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆ ಕಾಣಲಿವೆ. ಎಂದಿನಂತೆ ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ದರ್ಶನ್ ಅಭಿಮಾನಿಗಳಲ್ಲಿ ಕೋರಿದ್ದಾರೆ
ರಾಬರ್ಟ್ (Roberrt) ಮಾರ್ಚ್ 11ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಚಿತ್ರ ಬಿಡುಗಡೆಗೆ ಎಲ್ಲಾ ಸಿದ್ಧತೆ ನಡೆದಿದೆ. ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆ ಕಾಣಲಿವೆ. ಈ ನಡುವೆ, ದರ್ಶನ್ ಚಿತ್ರದ (Cinema) ಹೊಸ ಪೋಸ್ಟರ್ ಅನ್ನು ಶೇರ್ ಮಾಡಿದ್ದು, ಅಭಿಮಾನಿಗಳ ಬೆಂಬಲ ಕೋರಿದ್ದಾರೆ.
Happy Republic Day to all the Indians residing across the globe. #Roberrt is all set to hit the theatres on #March11 in Kannada and Telugu Languages.
Thanks for your support as always pic.twitter.com/gFMKrlpzFI
— Darshan Thoogudeepa (@dasadarshan) January 26, 2021
ಇದನ್ನೂ ಓದಿ : D BOSS : ಈ ಸಲ ಹುಟ್ಟುಹಬ್ಬ ಆಚರಣೆ ಇಲ್ಲ , ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್ : facebook liveನಲ್ಲಿ ಅಭಿಮಾನಿಗಳೊಂದಿಗೆ ದರ್ಶನ್ ಮಾತು
ಗಣರಾಜ್ಯೋತ್ಸವದ ದಿನದಂದು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ದರ್ಶನ್ (Darshan), ರಾಜ್ಯದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಅಲ್ಲದೆ, ರಾಯಣ್ಣ ಹುಟ್ಟಿದರೆ ಸ್ವಾತಂತ್ರೋತ್ಸವ, ಗಲ್ಲಿಗೇರಿದರೆ ಗಣರಾಜ್ಯೋತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಹುತಾತ್ಮ ದಿನದಂದು ಶತ ಶತ ನಮನಗಳು ಎಂದು ಬರೆದುಕೊಂಡಿದ್ದಾರೆ.
ರಾಯಣ್ಣ ಹುಟ್ಟಿದರೆ ಸ್ವಾತಂತ್ರೋತ್ಸವ, ಗಲ್ಲಿಗೇರಿದರೆ ಗಣರಾಜ್ಯೋತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಹುತಾತ್ಮ ದಿನದಂದು ಶತ ಶತ ನಮನಗಳು....
ಸಮಸ್ತ ನಾಡಿನ ಜನತೆಗೆ 72 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು...
Happy Republic Day🇮🇳 pic.twitter.com/fdaY4EcYtw— Darshan Thoogudeepa (@dasadarshan) January 26, 2021
ಇದೇ ವೇಳೆ, ಇಂದು ಅಂದರೆ ಜನವರಿ 26 ಚಿತ್ರದ ನಾಯಕಿ ಐಶ್ವರ್ಯಪ್ರಸಾದ್ (Aishwarya Prasad) ಜನ್ಮದಿನ. ಹಾಗಾಗಿ ಅವರಿಗೂ ಶುಭ ಕೋರಿ ಚಿತ್ರ ತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.
happy birthday to @Aishwaryapras5 . Have a wonderful year #RoberrtStormMarch11 https://t.co/jUOgdbvDkx
— Darshan Thoogudeepa (@dasadarshan) January 26, 2021
ಇದನ್ನೂ ಓದಿ : Rajinikanth: ಅಭಿಮಾನಿಗಳಿಗೆ 'ಗುಡ್ ನ್ಯೂಸ್' ನೀಡಿದ ತಲೈವಾ..!
ಚಿತ್ರದ ಬಗ್ಗೆ ಈ ಮೊದಲು ಫೇಸ್ ಬುಕ್ (Facebook) ಲೈವ್ ನಲ್ಲಿ ಮಾತನಾಡಿದ್ದ ದರ್ಶನ್, ಚಿತ್ರವನ್ನು ಸಿನಿಮಾ ಮಂದಿರಗಳಲ್ಲಿಯೇ ಬಿಡುಗಡೆಗೊಳಿಸುವುದಾಗಿ ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.