Oscar Awards 2023: ಎಲ್ಲಾ RRR ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ. ಹಾಲಿವುಡ್ ಆಸ್ಕರ್ 2023 ರಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆಲ್ಲಲು ಉತ್ತಮ ಅವಕಾಶವನ್ನು ಆರ್‌ಆರ್‌ಆರ್‌ ಸಿನಿಮಾ ಹೊಂದಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಎಸ್‌.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ಜಗತ್ತಿನಾದ್ಯಂತ ಪ್ರೇಕ್ಷಕರ ಮನಗೆದ್ದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Puneeth Rajkumar Twitter: ಪುನೀತ್‌ ಟ್ವಿಟರ್‌ ಖಾತೆಗೆ ಮರಳಿದ ಬ್ಲೂ ಟಿಕ್


ಆಸ್ಕರ್ 2023 ರೇಸ್‌ನಲ್ಲಿ RRR:


IndieWire ಪ್ರಕಾರ, ರಾಜಮೌಳಿಯವರ RRR ಆಸ್ಕರ್ 2023 ರಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮುಂಚೂಣಿಯಲ್ಲಿರುವ ಸಿನಿಮಾಗಳಲ್ಲಿ ಒಂದಾಗಿದೆ. ಹಾಲಿವುಡ್ ನಿರ್ದೇಶಕರು, ಚಿತ್ರಕಥೆಗಾರರ ಗಮನವನ್ನು ಸೆಳೆದಿದೆ. ಸ್ಕಾಟ್ ಡೆರಿಕ್ಸನ್, ಜೇಮ್ಸ್ ಗನ್ ಮತ್ತು ಆರನ್ ಸ್ಟೀವರ್ಟ್ ಅಹ್ನ್ ಸಾಮಾಜಿಕ ಮಾಧ್ಯಮದಲ್ಲಿ ಚಲನಚಿತ್ರವನ್ನು ಸಾರ್ವಜನಿಕವಾಗಿ ಹೊಗಳಿದ್ದಾರೆ. ಇದರರ್ಥ ಆಸ್ಕರ್ 2023 ಕ್ಕೆ ಆಯ್ಕೆಯಾದ ಚಲನಚಿತ್ರವಾಗಿ ಇದನ್ನು ಭಾರತದಿಂದ ಕಳುಹಿಸಲಾಗಿದೆ ಎಂದು ತಯಾರಕರು ಖಚಿತಪಡಿಸಿಕೊಳ್ಳಬೇಕು.


ಆಸ್ಕರ್ 2023 ಕ್ಕೆ RRR ನಾಮನಿರ್ದೇಶನ: 


ಆರ್‌ಆರ್‌ಆರ್‌- 'ರೌದ್ರಂ ರಣಂ ರುಧಿರಂ' ಸಿನಿಪ್ರಿಯರ ಮೆಚ್ಚುಗೆ ಪಡೆದಿದೆ. ಈಗ ಹೊರದೇಶಗಳಲ್ಲಿ ಸಹ ಈ ಚಿತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಆರ್‌ಆರ್‌ಆರ್ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಸ್ಕರ್ 2023 ಪ್ರಶಸ್ತಿಯನ್ನು ಗೆಲ್ಲಬಹುದು ಎಂಬ ಸುದ್ದಿ ಬಂದಿದೆ. 


ಇದೆಲ್ಲದರ ಹೊರತಾಗಿ ಫ್ರಾನ್ಸ್ ನ 'ಬಾತ್ ಸೈಡ್ ಆಫ್ ದಿ ಬ್ಲೇಡ್', ಆಸ್ಟ್ರಿಯಾದ 'ಕೋರ್ಸೇಜ್', ಕೊರಿಯಾದಿಂದ 'ಡೆಸಿಷನ್ ಟು ಲೀವ್', ಡೆನ್ಮಾರ್ಕ್ ನ 'ಹೋಳಿ', ಫ್ರಾನ್ಸ್ ನ 'ಸ್ಪೈಡರ್', 'ಒನ್ ಫೈನ್ ಮಾರ್ನಿಂಗ್', ಬೆಲ್ಜಿಯಂನ 'ಟೋರಿ ಮತ್ತು ಲೋಕಿತಾ' ಮತ್ತು 'ಉತಮಾ' ಮುಂತಾದ ಚಿತ್ರಗಳ ಹೆಸರು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ.


ಇದನ್ನೂ ಓದಿ:Kiccha Sudeep: ʻಕನ್ನಡ್ ಅಲ್ಲ ಕನ್ನಡʼ ಎಂದ ಸುದೀಪ್, ವೈರಲ್ ಆಯ್ತು ಕಿಚ್ಚನ ಮಾತು


ಸಂಯೋಜಕ ಎಆರ್ ರೆಹಮಾನ್ ಅವರ ಸಂಗೀತ ಸೇರಿದಂತೆ ಅತ್ಯುತ್ತಮ ನಿರ್ದೇಶನ ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ ಡ್ಯಾನಿ ಬೋಯ್ಲ್ ಅವರ ‘ಸ್ಲಮ್‌ಡಾಗ್ ಮಿಲಿಯನೇರ್ʼ ಆಸ್ಕರ್‌ ಪ್ರಶಸ್ತಿ ಗೆದ್ದಿತ್ತು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.