ಬಿಗ್ ಬಾಸ್ ಕನ್ನಡ ಒಟಿಟಿ ಪ್ರಾರಂಭವಾಗಿ ಕೆಲ ದಿನಗಳೇ ಕಳೆದಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಇಂತಹದ್ದೊಂದು ಪ್ರಯತ್ನ ಮಾಡಿರುವ ವಾಹಿನಿಯು ಸದ್ಯ ಸಖತ್ ಗಮನ ಸೆಳೆಯುತ್ತಿದೆ. ಇನ್ನು ಬಿಗ್ ಬಾಸ್ ಎಂದರೆ ಕಲಾವಿದರ ಬಣ್ಣ ಬಯಲು ಮಾಡುವ ರಂಗಮಂದಿರ ಎಂದೇ ಹೇಳಬಹುದು. ಇನ್ನು ಈ ಮನೆಯಲ್ಲಿ ಅದೆಷ್ಟೋ ಪ್ರೇಮ ಪುರಾಣಗಳು ಕಂಡಿವೆ. ಅಂತಹ ಸಂಬಂಧಗಳು ಕೆಲವೊಂದು ಮುರಿದು ಬಿದ್ದರೂ ಸಹ ಇನ್ನೂ ಕೆಲವು ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: OMG!: RCBಯ ಅಧಿಕೃತ ಯೂಟ್ಯೂಬ್ ಚಾನೆಲ್ ಹ್ಯಾಕ್..!


ಇದೀಗ ಅಂತಹದ್ದೇ ಒಂದು ಲವ್ ಸ್ಟೋರಿ ಈ ಮನೆಯಲ್ಲಿ ಮೂಡುವಂತೆ ಕಾಣುತ್ತಿದೆ. ಸಾನಿಯಾ ಅಯ್ಯರ್ ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಹೆಸರು ಗಳಿಸಿದವರು. ಈಗಾಗಲೇ ದೊಡ್ಡ ಮನೆಗೆ ಹೆಜ್ಜೆ ಇಟ್ಟಿರುವ ಇವರು ತಮ್ಮ ಜೀವನದಲ್ಲಿ ನಡೆದ ಅನೇಕ ನೋವಿನ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಇವರ ಮೇಲೆ ದೊಡ್ಡ ಮನೆಯಲ್ಲಿರುವ ಮತ್ತೋರ್ವ ಸ್ಪರ್ಧಿಗೆ ಲವ್ ಆದಂತೆ ಕಾಣುತ್ತಿದೆ.


ಹೌದು. ಕೋಸ್ಟಲ್ ವುಡ್ ಸ್ಟಾರ್, ನಿರೂಪಕ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ಅಯ್ಯರ್ ಹೆಸರನ್ನು ದೊಡ್ಡ ಮನೆಯೊಳಗೆ ತಳುಕು ಹಾಕಲಾಗುತ್ತಿದೆ. ಇಬ್ಬರದ್ದೂ ಉತ್ತಮ ಜೋಡಿ ಎಂದೆಲ್ಲಾ ಇತರ ಸ್ಪರ್ಧಿಗಳಯ ತಮಾಷೆ ಮಾಡುತ್ತಿದ್ದಾರೆ, ಇನ್ನೊಂದೆಡೆ ರೂಪೇಶ್ ಸಹ ತಾನು ಸಾನಿಯಾಗೆ ಕನೆಕ್ಟ್ ಆಗಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆ ಬಳಿಕ ಅದನ್ನು ಹೇಳಿರುವ ಅರ್ಥ ಬೇರೆ ಎಂದು ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಏನೇ ಆದರೂ ಸಹ ಬಿಗ್ ಮನೆಯಿಂದ ಮತ್ತೊಂದು ಜೋಡಿ ಹೊರಬರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.


ಇದನ್ನೂ ಓದಿ: ಭಾರತಕ್ಕೆ ಲಗ್ಗೆ ಇಟ್ಟ ಈ ‘ಬೈಕ್’: ಇದರ ವಿಶೇಷತೆ ಕೇಳಿದ್ರೆ ಇಂದೇ ಬುಕ್ ಮಾಡಿಕೊಳ್ಳೋದು ಪಕ್ಕಾ!


ಬಿಗ್ ಬಾಸ್ ಸೀಸನ್ 9 ಕಳೆದಿದೆ. ಈ ಎಲ್ಲಾ ಸೀಸನ್ ಗಳಲ್ಲಿಯೂ ಒಂದಲ್ಲ ಒಂದು ಜೋಡಿ ಕಾಣಿಸುತ್ತಿತ್ತು. ಸದ್ಯ ಬಿಗ್ ಬಾಸ್ ಹೊಸದೊಂದು ತಂತ್ರ ರೂಪಿಸಿ ದೊಡ್ಡ ಮನೆ ಒಳಗಡೆ ಕಪಲ್ ಗಳನ್ನು ಕಳುಹಿಸಿದ್ದಾರೆ. ಜಶ್ವಂತ್ ಮತ್ತು ನಂದಿನಿ ಈಗಾಗಲೇ ಜೋಡಿಗಳಾಗಿದ್ದು, ಅವರು ಮನೆಯೊಳಗೆ ಇದ್ದಾರೆ. ಇವರಿಬ್ಬರ ಕೆಮೆಸ್ಟ್ರಿ ಕಂಡು ಮನೆ ಮಂದಿ ಮಾತ್ರವಲ್ಲ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.