ಭಾರತಕ್ಕೆ ಲಗ್ಗೆ ಇಟ್ಟ ಈ ‘ಬೈಕ್’: ಇದರ ವಿಶೇಷತೆ ಕೇಳಿದ್ರೆ ಇಂದೇ ಬುಕ್ ಮಾಡಿಕೊಳ್ಳೋದು ಪಕ್ಕಾ!

ಹೀರೋ ಮೋಟೋಕಾರ್ಪ್ ಈಗ ಭಾರತದಲ್ಲಿ ಹಾರ್ಲೆ ಡೇವಿಡ್‌ಸನ್‌ನ ವಿತರಣೆ, ಭಾಗಗಳು ಮತ್ತು ಪರಿಕರಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ

Written by - Bhavishya Shetty | Last Updated : Aug 13, 2022, 11:11 AM IST
    • ಭಾರತದಲ್ಲಿ ಹಾರ್ಲೆ ಡೇವಿಡ್‌ಸನ್‌ ನೈಟ್ ಸ್ಟರ್ 2022 ಬಿಡುಗಡೆ
    • ಕಾರಿನಷ್ಟೇ ಬಲಶಾಲಿಯಾಗಿರುವ ವಿಭಿನ್ನ
    • ಈ ಬೈಕ್ ಬೆಲೆ ಕೇಳಿದ್ರೆ ಇಂದೇ ಬುಕ್ ಮಾಡಿಕೊಳ್ಳುವುದು ಖಂಡಿತ
ಭಾರತಕ್ಕೆ ಲಗ್ಗೆ ಇಟ್ಟ ಈ ‘ಬೈಕ್’: ಇದರ ವಿಶೇಷತೆ ಕೇಳಿದ್ರೆ ಇಂದೇ ಬುಕ್ ಮಾಡಿಕೊಳ್ಳೋದು ಪಕ್ಕಾ!  title=
Harley Davidson Nightster 2022

Hero MotoCorp ಮತ್ತು Harley Davidson ಜಂಟಿಯಾಗಿ ಭಾರತದಲ್ಲಿ ಹೊಸ ಬೈಕ್ Harley Davidson Nightster ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ₹ 14.99 ಲಕ್ಷ (ಎಕ್ಸ್ ಶೋ ರೂಂ). ಬೈಕ್ 975 ಸಿಸಿ ಎಂಜಿನ್ ಹೊಂದಿದ್ದು, ಶಕ್ತಿಯ ವಿಷಯದಲ್ಲಿ ಯಾವುದೇ ವಾಹನಕ್ಕಿಂತ ಕಡಿಮೆ ಇಲ್ಲ. ಕಂಪನಿಯು ತನ್ನ ಬುಕಿಂಗ್ ಅನ್ನು ಸಹ ಪ್ರಾರಂಭಿಸಿದೆ.

ಇದನ್ನೂ ಓದಿ: Sandalwood: ಹನಿಟ್ರಾಪ್ ಮಾಡಿದ್ದ ಉದಯೋನ್ಮುಖ ನಟ ಅರೆಸ್ಟ್..!

ಹೀರೋ ಮೋಟೋಕಾರ್ಪ್ ಈಗ ಭಾರತದಲ್ಲಿ ಹಾರ್ಲೆ ಡೇವಿಡ್‌ಸನ್‌ನ ವಿತರಣೆ, ಭಾಗಗಳು ಮತ್ತು ಪರಿಕರಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

ವಿಶೇಷವೆಂದರೆ ಈ ಬೈಕ್ ಹಾರ್ಲೆ-ಡೇವಿಡ್‌ಸನ್‌ನ ಸ್ಪೋರ್ಟ್‌ಸ್ಟರ್ ಸರಣಿಯ ಅತ್ಯಂತ ಅಗ್ಗದ ಮೋಟಾರ್‌ಸೈಕಲ್ ಆಗಿದೆ. ಇದು ವಿಭಾಗದಲ್ಲಿ ಉಳಿದ ಬಾಬರ್ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ. ಅಂದರೆ, ಟ್ರಯಂಫ್ ಬೊನೆವಿಲ್ಲೆ ಬಾಬರ್ ಮತ್ತು ಇಂಡಿಯನ್ ಸ್ಕೌಟ್ ಬಾಬರ್ ಬೈಕ್ ಜೊತೆ ನೇರ ಪೈಪೋಟಿಗೆ ಇಳಿಯುವಷ್ಟು ಶಕ್ತಿಶಾಲಿಯಾಗಿದೆ. ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದರೂ ಬೈಕ್ ಅನ್ನು ಕೇವಲ ಒಂದು ರೂಪಾಂತರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗನ್‌ಶಿಪ್ ಗ್ರೇ ಮತ್ತು ರೆಡ್‌ಲೈನ್ ರೆಡ್ ಪೇಂಟ್ ಸ್ಕೀಮ್‌ಗಳ ಬೆಲೆ 15.13 ಲಕ್ಷ ರೂ. ಇದೆ. ಇನ್ನು ವಿವಿಡ್ ಬ್ಲ್ಯಾಕ್ ಬಣ್ಣವು ನಿಮಗೆ 14.99 ಲಕ್ಷ ರೂ. ಲಭ್ಯವಿದೆ.

ಹೊಸ ಹಾರ್ಲೆ-ಡೇವಿಡ್ಸನ್ ನೈಟ್‌ಸ್ಟರ್‌ನ ನೋಟದ ಕುರಿತು ಮಾತನಾಡುವುದಾದರೆ, ಇದು ರೌಂಡ್ ಹೆಡ್‌ಲೈಟ್, ರೌಂಡ್ ಆಕಾರದ ತಿರುವು ಸೂಚಕಗಳು, ಬಾರ್-ಎಂಡ್ ಮಿರರ್‌ಗಳು, ಹಿಂಭಾಗದ ಫೆಂಡರ್‌ಗಳು ಮತ್ತು ಸೈಡ್-ಸ್ಲಂಗ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ. ಇದರ ಇಂಧನ ಟ್ಯಾಂಕ್ 11.7 ಲೀಟರ್ ಇದೆ. ಬೈಕ್ 218 ಕೆಜಿ ತೂಕವನ್ನು ಹೊಂದಿದ್ದು, ಹಿಂದಿನ ಸ್ಪೋರ್ಟ್ಸ್ ಬೈಕ್‌ಗಳಿಗಿಂತ ಹಗುರವಾಗಿದೆ. ನೈಟ್‌ಸ್ಟರ್‌ನ ಸೀಟ್ ಎತ್ತರವು 705 ಎಂಎಂ ಆಗಿದೆ, ಅಂದರೆ ಸರಾಸರಿ ಎತ್ತರದ ಚಾಲಕರು ಸರಾಗವಾಗಿ ಓಡಿಸಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ: ಅಂದು-ಇಂದು ‘ಭಾರತ’: ಸ್ವಾತಂತ್ರ್ಯ ಬಳಿಕ ದೇಶದಲ್ಲಿ ನಡೆದ ಹೆಮ್ಮೆಯ ಘಟನಾಗಳಿಗಳ ಒಂದು ಮೆಲುಕು ನೋಟ

ಕಾರಿನಷ್ಟು ಶಕ್ತಿಶಾಲಿ ಎಂಜಿನ್

975 cc V-ಟ್ವಿನ್, ಲಿಕ್ವಿಡ್-ಕೂಲಿಂಗ್ ಎಂಜಿನ್ ಅನ್ನು ಹಾರ್ಲೆ ಡೇವಿಡ್‌ಸನ್ ನೈಟ್‌ಸ್ಟರ್‌ನಲ್ಲಿ ನೀಡಲಾಗಿದೆ. ಇದು 7,500 rpm ನಲ್ಲಿ 89 Bhp ಯ ಗರಿಷ್ಠ ಶಕ್ತಿಯನ್ನು ಮತ್ತು 5,750 rpm ನಲ್ಲಿ 95 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಾರುತಿ ಸ್ವಿಫ್ಟ್‌ನ ಎಂಜಿನ್ ಕೇವಲ 89bph ಶಕ್ತಿಯನ್ನು ನೀಡುತ್ತದೆ. ಈ ಬೈಕ್ ಮತ್ತು ಕಾರಿನ ಇಂಜಿನ್ ಸರಾಸರಿ ಒಂದೇ ಇದೆ.  ಇದು 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಬ್ರೇಕಿಂಗ್‌ಗಾಗಿ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News