ಅಂದು-ಇಂದು ‘ಭಾರತ’: ಸ್ವಾತಂತ್ರ್ಯ ಬಳಿಕ ದೇಶದಲ್ಲಿ ನಡೆದ ಹೆಮ್ಮೆಯ ಘಟನಾಗಳಿಗಳ ಒಂದು ಮೆಲುಕು ನೋಟ

ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಸಭೆಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ, ಕಳೆದ 20 ವರ್ಷಗಳಲ್ಲಿ ಜೀವಿತಾವಧಿಯಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Written by - Bhavishya Shetty | Last Updated : Aug 13, 2022, 10:30 AM IST
    • ಕೃಷಿಯಿಂದ ಆರೋಗ್ಯ, ಶಿಕ್ಷಣ ಮತ್ತು ಭಾರತದ ಯಶಸ್ಸಿನ ಈ ಸುದೀರ್ಘ ಪ್ರಯಾಣ
    • ಅನೇಕ ದೇಶಗಳಿಗೆ ಉಚಿತ ಲಸಿಕೆಗಳನ್ನು ನೀಡುವ ಮೂಲಕ ಆರೋಗ್ಯ ವಲಯದಲ್ಲಿ ಭಾರತ ಮುಂಚೂಣಿ
    • ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಂಡುಬಂದ ಬದಲಾವಣೆಗಳ ಬಗ್ಗೆ ಇಲ್ಲಿದೆ ವಿವರ
ಅಂದು-ಇಂದು ‘ಭಾರತ’: ಸ್ವಾತಂತ್ರ್ಯ ಬಳಿಕ ದೇಶದಲ್ಲಿ ನಡೆದ ಹೆಮ್ಮೆಯ ಘಟನಾಗಳಿಗಳ ಒಂದು ಮೆಲುಕು ನೋಟ title=
Success Path of India

ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳು ಕಳೆದಿವೆ ಮತ್ತು ಭಾರತವು ತನ್ನ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅಂದರೆ ತನ್ನ ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ. ಈ 75 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸ್ವಾತಂತ್ರ್ಯ ಬಂದಾಗ ಕೇವಲ 34 ಕೋಟಿಯಷ್ಟಿದ್ದ ದೇಶದ ಜನಸಂಖ್ಯೆ ಈಗ ಸುಮಾರು 140 ಕೋಟಿ ಆಗಿದೆ. ಇಂತಹ ಸಂದರ್ಭದಲ್ಲಿ ಆಹಾರ ಕ್ಷೇತ್ರ ಸೇರಿದಂತೆ ಯಾವ ವಿಷಯಗಳಲ್ಲಿ ಭಾರತವು ಎಷ್ಟು ಬದಲಾಗಿದೆ ಅಂದರೆ ಕೃಷಿಯಿಂದ ಆರೋಗ್ಯ, ಶಿಕ್ಷಣ ಮತ್ತು ಭಾರತದ ಯಶಸ್ಸಿನ ಈ ಸುದೀರ್ಘ ಪ್ರಯಾಣದ ವೈಭವದ ಕಥೆ (Success story India 1947-2022) ಈ ವರದಿಯಲ್ಲಿ ತಿಳಿಸಲಾಗಿದೆ

ಸ್ವಾತಂತ್ರ್ಯದ ನಂತರ ಆರೋಗ್ಯ ಮೂಲಸೌಕರ್ಯ:

ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಸಭೆಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ, ಕಳೆದ 20 ವರ್ಷಗಳಲ್ಲಿ ಜೀವಿತಾವಧಿಯಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಸ್ವಾತಂತ್ರ್ಯದ ನಂತರ, ಮಕ್ಕಳ ಮರಣ ಪ್ರಮಾಣ ಮತ್ತು ಸರಾಸರಿ ವಯಸ್ಸಿನಲ್ಲಿ ಪರಿಸ್ಥಿತಿ ಸುಧಾರಿಸಿದೆ. ಕೊರೊನಾ ಸಾಂಕ್ರಾಮಿಕದ ಸವಾಲುಗಳ ನಡುವೆ ವಿಶ್ವದ ಪ್ರತಿಯೊಂದು ದೇಶವೂ ತನ್ನ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಬೇಕು ಎಂದು WHO ಒತ್ತಿಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಈ ಕ್ಷೇತ್ರದಲ್ಲಿ ಅಮೋಘ ಸಾಧನೆಯನ್ನು ಮಾಡಿದೆ. ಸ್ವಾತಂತ್ರ್ಯದ ಸಮಯದಲ್ಲಿ ಅಂದರೆ 1947 ರ ಭಾರತವು ಇಂದಿನ 2022 ಕ್ಕೆ ಹೋಲಿಸಿದರೆ, ಆಗ ದೇಶದಲ್ಲಿ ಕೇವಲ 30 ವೈದ್ಯಕೀಯ ಕಾಲೇಜುಗಳು ಇದ್ದವು. ಆದರೆ ಈಗ ಸುಮಾರು 550 ಕಾಲೇಜುಗಳಿವೆ. 1947ರಲ್ಲಿ 2,014 ಸರ್ಕಾರಿ ಆಸ್ಪತ್ರೆಗಳಿದ್ದು, ಈಗ ಅವುಗಳ ಸಂಖ್ಯೆ 23ವರೆ ಸಾವಿರಕ್ಕೂ ಹೆಚ್ಚಿದೆ. ದೇಶದಲ್ಲಿ ವೈದ್ಯರ ಸಂಖ್ಯೆಯೂ ಹೆಚ್ಚಿದೆ. ಪ್ರಸ್ತುತ, ದೇಶದಲ್ಲಿ 1,313 ಜನಸಂಖ್ಯೆಗೆ ಒಬ್ಬ ವೈದ್ಯರಿದ್ದಾರೆ. ಆದರೆ WHO ಪ್ರಕಾರ, ಪ್ರತಿ 1000 ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು. 74 ವರ್ಷಗಳ ಸ್ವಾತಂತ್ರ್ಯದ ಪಯಣದಲ್ಲಿ ಭಾರತೀಯ ವಿಜ್ಞಾನಿಗಳೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಭಾರತವು ತನ್ನದೇ ಆದ ಎರಡು ದೇಶೀಯ ಕೊರೊನಾ ಲಸಿಕೆಗಳನ್ನು (ಕೋವಾಕ್ಸಿನ್ ಮತ್ತು ಕೋವಿಶೀಲ್ಡ್) ತಯಾರಿಸುವ ಮೂಲಕ ತನ್ನ ದೇಶದ ಕೋಟ್ಯಂತರ ಜನರ ಜೀವಗಳನ್ನು ಉಳಿಸಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಅನೇಕ ದೇಶಗಳಿಗೆ ಉಚಿತ ಲಸಿಕೆಗಳನ್ನು ನೀಡುವ ಮೂಲಕ ಆರೋಗ್ಯ ವಲಯದಲ್ಲಿಯೂ ಸಹ ಪ್ರಪಂಚವನ್ನು ಮುನ್ನಡೆಸುವ ಸೂಚನೆಯನ್ನು ನೀಡಿದೆ.

ಇದನ್ನೂ ಓದಿ: ಚಂದನವನಕ್ಕೆ ರಾಜ್ ಕುಟುಂಬದ ಮತ್ತೊಂದು ಕುಡಿ ಎಂಟ್ರಿ: ಶೀಘ್ರದಲ್ಲೇ ತೆರೆಗೆ ಬರಲಿದೆ ‘ಶಿವ 143’

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ:

ಯಾವುದೇ ದೇಶದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಯುವ ಅಳತೆ ಆ ದೇಶದ GDP ಅಂದರೆ Gross Demostic Product. ಬ್ರಿಟಿಷರು ಭಾರತಕ್ಕೆ ಬಂದಾಗ ವಿಶ್ವದ ಜಿಡಿಪಿಯಲ್ಲಿ ಭಾರತದ ಪಾಲು 22% ಕ್ಕಿಂತ ಹೆಚ್ಚಿತ್ತು ಎಂದು ಹೇಳಲಾಗುತ್ತದೆ. ಆದರೆ 1947ರಲ್ಲಿ ದೇಶ ಸ್ವತಂತ್ರವಾದಾಗ ಈ ಪಾಲು ಶೇ.3ಕ್ಕೆ ಇಳಿದಿತ್ತು. ಬಳಿಕ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮ್ಮ ಜಿಡಿಪಿ 50 ಪಟ್ಟು ಹೆಚ್ಚಾಗಿದೆ. 1950-51ರಲ್ಲಿ ಜಿಡಿಪಿ ಅಂಕಿ-ಅಂಶ 2.93 ಲಕ್ಷ ಕೋಟಿ ರೂ.ಗಳಾಗಿದ್ದು, 2020-21ರಲ್ಲಿ 134 ಲಕ್ಷ ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇಂದು ಜಗತ್ತು ಹಣದುಬ್ಬರದ ಸಂಕಷ್ಟವನ್ನು ಎದುರಿಸುತ್ತಿದೆ. ಆದರೆ ಹಣದುಬ್ಬರದ ಹೊರತಾಗಿಯೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ.

ಭಾರತವು $5,000 ಶತಕೋಟಿ ಆರ್ಥಿಕತೆಯ ಹಾದಿಯಲ್ಲಿದೆ

ಸದ್ಯಕ್ಕೆ ಭಾರತದ ಆರ್ಥಿಕ ಬೆಳವಣಿಗೆ ಕುಂಠಿತವಾಗುವ ಪ್ರಶ್ನೆಯೇ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅದೇ ಸಮಯದಲ್ಲಿ, 2022 ಮತ್ತು 2023 ರ ಹಣಕಾಸು ವರ್ಷಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಪರಿಗಣಿಸಲ್ಪಟ್ಟಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಜಾಗತಿಕ ಮಟ್ಟದಲ್ಲಿ ಚೀನಾ ಮತ್ತು ತೈವಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಆರ್ಥಿಕ ಬೆಳವಣಿಗೆಯ ದರವು ಉತ್ತಮವಾಗಿದೆ. ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯನ್ನಾಗಿ ಮಾಡುವತ್ತ ಕೇಂದ್ರ ಸರ್ಕಾರ ಗಮನಹರಿಸಿದ್ದು, ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಇತ್ತೀಚೆಗೆ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರಯತ್ನಗಳಿಂದ ದೇಶದ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಕೂಡ ಏರಿಕೆ ಕಂಡಿದೆ. ಈ ಕ್ರಮಗಳು ಬೊಕ್ಕಸಕ್ಕೆ ಆದಾಯ ಸಂಗ್ರಹವನ್ನು ಹೆಚ್ಚಿಸಿವೆ. ಇದರೊಂದಿಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯಲ್ಲಿದೆ.

ಅಂತರಾಷ್ಟ್ರೀಯ ಹಣಕಾಸು ನಿಧಿಯ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿಯ ಪ್ರಕಾರ, ಮೋದಿ ಸರ್ಕಾರದ ಕಾರ್ಯತಂತ್ರದ ಸುಧಾರಣೆಗಳು ಮತ್ತು ಕೊರೊನಾ ವ್ಯಾಕ್ಸಿನೇಷನ್ ಅಭಿಯಾನದ ವೇಗವರ್ಧನೆಯಿಂದಾಗಿ, ಭಾರತದ ಆರ್ಥಿಕತೆಯು ವಿಶ್ವದ ಇತರ ದೇಶಗಳಿಗಿಂತ ವೇಗವಾಗಿ ಚಲಿಸುತ್ತಿದೆ. ಭಾರತವು 2022 ರಲ್ಲಿ 8.5 ಶೇಕಡಾ ಬೆಳವಣಿಗೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯುತ್ತದೆ.

“ಒಂದು ಕಾಲದಲ್ಲಿ ಇಡೀ ದೇಶವೇ ಉಪವಾಸ ಮಾಡಿದರೆ ಇಂದು ಭಾರತ ಜಗತ್ತಿನ ಹೊಟ್ಟೆ ತುಂಬಿಸುತ್ತಿದೆ“

1965ರಲ್ಲಿ ದೇಶದಲ್ಲಿ ಆಹಾರದ ಬಿಕ್ಕಟ್ಟು ಉಂಟಾಯಿತು. ಆ ಸಮಯವನ್ನು ಸದುಪಯೋಗಪಡಿಸಿಕೊಂಡ ಅಮೆರಿಕ ಕೆಲವು ಷರತ್ತುಗಳೊಂದಿಗೆ ಭಾರತಕ್ಕೆ ಆಹಾರ ಧಾನ್ಯ ನೀಡಲು ಮುಂದಾಗಿತ್ತು. ಅಮೆರಿಕದಿಂದ ಆಹಾರ ಧಾನ್ಯ ತೆಗೆದುಕೊಂಡು ಹೋದರೆ ದೇಶದ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂಬುದು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು ಅಮೇರಿಕಾಕ್ಕೆ ತಲೆಬಾಗಲು ಒಪ್ಪಲಿಲ್ಲ ಮತ್ತು ಹೆಂಡತಿ ಮತ್ತು ಮಕ್ಕಳೊಂದಿಗೆ ಆ ದಿನ ಏನನ್ನೂ ತಿನ್ನಲಿಲ್ಲ. ಬಳಿಕ ಅವರಿಗೆ ಮನವರಿಕೆಯಾಯಿತು. “ ಒಂದು ದಿನ ಆಹಾರ ಸೇವಿಸದಿದ್ದರೂ ಸಹ ಆ ವ್ಯಕ್ತಿಯು ಹಸಿವನ್ನು ಸಹಿಸಿಕೊಳ್ಳಬಹುದು” ಎಂದು. ಹೀಗಾಗಿ ಒಂದು ದಿನದ ಉಪವಾಸ ಮಾಡಲು ದೇಶವಾಸಿಗಳಿಗೆ ಕರೆ ನೀಡಿದರು. ಶಾಸ್ತ್ರಿಯವರ ಈ ಕರೆ ದೇಶವಾಸಿಗಳ ಮೇಲೆ ಆಳವಾದ ಪ್ರಭಾವ ಬೀರಿತು. ಜನರು ಹಿಂಜರಿಕೆಯಿಲ್ಲದೆ ತಮ್ಮ ಪ್ರಧಾನಿಯ ಕರೆಗೆ ಓಗೊಟ್ಟರು ಮತ್ತು ವಾರಕ್ಕೊಮ್ಮೆ ಊಟವನ್ನು ತ್ಯಜಿಸಿದರು. ಆದರೆ ಇಂದು ಭಾರತವು ತನ್ನ ಉತ್ಪಾದನೆಯ ಆಧಾರದ ಮೇಲೆ ವಿಶ್ವದ ಲಕ್ಷಾಂತರ ಜನರಿಗೆ ಆಹಾರವನ್ನು ನೀಡುತ್ತಿದೆ.

ಭಾರತದಲ್ಲಿ ಹಸಿರು ಕ್ರಾಂತಿ:

1965ರಲ್ಲಿ ಭಾರತದಲ್ಲಿ ಆಹಾರದ ಕೊರತೆ ಎದುರಿಸಿತು. ಜನರು ಒಂದು ಸಮಯದಲ್ಲಿ ಒಂದು ಊಟವನ್ನು ತಿನ್ನಲು ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಯಿತು. ಪಾಕಿಸ್ತಾನದೊಂದಿಗಿನ ಯುದ್ಧ ನಿಲ್ಲಿಸದಿದ್ದರೆ, ಗೋಧಿ ನೀಡುವುದಿಲ್ಲ ಎಂಬ ಅಮೆರಿಕದ ಬೆದರಿಕೆ ಭಾರತೀಯರ ಸ್ವಾಭಿಮಾನಕ್ಕೆ ಪೆಟ್ಟು ನೀಡಿತ್ತು. 2 ವರ್ಷಗಳೊಳಗೆ, ಭಾರತದ ರೈತರು ಅಂತಹ ವರ್ಚಸ್ಸನ್ನು ತೋರಿಸಿದರು. ಭಾರತದಲ್ಲಿ ಹಸಿರು ಕ್ರಾಂತಿ ಕಂಡುಬಂತು. 1968ರಲ್ಲಿ ನಮ್ಮ ರೈತರು ದಾಖಲೆಯ 170 ಟನ್‌ಗಳಷ್ಟು ಗೋಧಿಯನ್ನು ಉತ್ಪಾದಿಸಿದರು. ಇದು 1964ರ ವರ್ಷಕ್ಕಿಂತ 50 ಲಕ್ಷ ಟನ್‌ ಹೆಚ್ಚು ಉತ್ಪಾದನೆಯಾಯಿತು.

ದೇಶದ ಮೊದಲ ರಾಜಧಾನಿ ರೈಲು ಮತ್ತು ಇಂದಿನ ‘ವಂದೇ ಭಾರತ್’

ಅಂದಿನ ಜನರ ಪ್ರಯಾಣವನ್ನು ಸುಲಭಗೊಳಿಸಿದ ಭಾರತೀಯ ರೈಲ್ವೆಯ ಜೀವನ ಎಂದು ಕರೆಯಲ್ಪಡುವ ರಾಜಧಾನಿ ಎಕ್ಸ್‌ಪ್ರೆಸ್ ಹಳಿಯಲ್ಲಿ ತನ್ನ ಪ್ರಯಾಣವನ್ನು ಯಾವಾಗ ಪ್ರಾರಂಭಿಸಿತು ಎಂಬುದು ನಿಮಗೆ ತಿಳಿದಿದೆಯೇ? ಮಾರ್ಚ್ 1, 1969 ರಂದು ರಾಜಧಾನಿ ಎಕ್ಸ್‌ಪ್ರೆಸ್ ಹಳಿಗೆ ಬಂದಿತು. ಈ ರೈಲು ನವದೆಹಲಿಯಿಂದ ಕೋಲ್ಕತ್ತಾದ ಹೌರಾ ನಿಲ್ದಾಣವನ್ನು ಗಂಟೆಗೆ 120 ಕಿಮೀ ವೇಗದಲ್ಲಿ ತಲುಪುತ್ತಿತ್ತು. ಮೊದಲು 24 ಗಂಟೆಗಳಲ್ಲಿ ಆವರಿಸಿದ್ದ ಪ್ರಯಾಣವನ್ನು 17 ಗಂಟೆಗಳಲ್ಲಿ ಪೂರ್ಣಗೊಳಿಸುವಂತೆ ಈ ರೈಲು ಮಾಡುತ್ತಿತ್ತು. ಸ್ವಾತಂತ್ರ್ಯದ ಈ 74 ವರ್ಷಗಳಲ್ಲಿ ಭಾರತೀಯ ರೈಲ್ವೆ ಕೂಡ ದೊಡ್ಡ ಬದಲಾವಣೆಯನ್ನು ಮಾಡಿದೆ. ರಾಜಧಾನಿ, ಶತಾಬ್ದಿ ರೈಲುಗಳ ಯುಗವು ಬಂದಿತು ಮತ್ತು ಇಂದು ವಂದೇ ಭಾರತ್‌ನಂತಹ ರೈಲುಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮೀಸಲಾತಿ ಪ್ರಕ್ರಿಯೆ ಎಂದಿಗಿಂತಲೂ ಸುಲಭವಾಗಿದೆ. ದೇಶದ ರೈಲ್ವೆ ಜಾಲದಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ.

ರೈಲ್ವೆ ಸಚಿವರು, ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಜಿಎಂ ಇನ್ನು ಮುಂದೆ ಸೆಲ್ಯೂಟ್ ಪಡೆಯುವುದಿಲ್ಲ. ಬ್ರಿಟಿಷರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಆಯ್ಕೆಯಾದ ಆರ್‌ಪಿಎಫ್ ಸಿಬ್ಬಂದಿಗಳು ರೈಲ್ವೇ ಸಚಿವಾಲಯ ಮತ್ತು ದೇಶಾದ್ಯಂತ ರೈಲ್ವೆ ಜಿಎಂ ಕಚೇರಿಗಳಲ್ಲಿ ಸೆಲ್ಯೂಟ್ ನೀಡಲು ಗೇಟ್‌ನಲ್ಲಿ ನಿಂತಿರುತ್ತಿದ್ದರು. ಊಳಿಗಮಾನ್ಯ ಪದ್ಧತಿಯನ್ನು ಪರಿಗಣಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಪದ್ಧತಿಯನ್ನು ನಿಲ್ಲಿಸುವಂತೆ ಆದೇಶ ನೀಡಿದ್ದರು. ವಾಸ್ತವವಾಗಿ, ಸೆಲ್ಯೂಟ್ ಅಭ್ಯಾಸವನ್ನು ನಿಲ್ಲಿಸಲು ಒಂದು ಉದ್ದೇಶವೆಂದರೆ GM ಮತ್ತು ರೈಲ್ವೆ ಅಧಿಕಾರಿಗಳು ತಮ್ಮನ್ನು ತಾವು ವಿಶೇಷವೆಂದು ಪರಿಗಣಿಸಬಾರದು ಎಂದು. ಸ್ವಾತಂತ್ರ್ಯ ಬಂದ ಅಮೃತ ಸಂವತ್ಸರದಲ್ಲಿ ಈ ಪದ್ಧತಿಗೆ ಕಡಿವಾಣ ಹಾಕಲಾಗಿದ್ದು, ಸಚಿವಾಲಯ ಅಥವಾ ರೈಲ್ವೆ ಕಚೇರಿಗಳಲ್ಲಿ ಎಲ್ಲರೂ ಕೆಲಸಕ್ಕೆ ಬರುತ್ತಾರೆ, ಇಲ್ಲಿ ವಿಶೇಷತೆ ಇಲ್ಲ, ಎಲ್ಲರೂ ಸಮಾನರು ಎಂಬ ಸಂದೇಶವನ್ನು ಅಧಿಕಾರಿಗಳಿಗೆ ನೀಡಲಾಗುತ್ತಿದೆ.

ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿ ಭಾರತ:

ಸ್ವಾತಂತ್ರ್ಯದ ಸಮಯದಲ್ಲಿ, ಭಾರತವು ವಿದೇಶಿ ಶಸ್ತ್ರಾಸ್ತ್ರಗಳ ವಿಷಯದಲ್ಲಿ ರಷ್ಯಾವನ್ನು ಮಾತ್ರ ಸಂಪೂರ್ಣವಾಗಿ ಅವಲಂಬಿಸಿತ್ತು. ಇದೇ ವೇಳೆ ಇಂದಿನ ನವಭಾರತದ ಹೊಸ ಯುಗದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ನೌಕರರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. 74 ವರ್ಷಗಳಲ್ಲಿ, ಭಾರತದ ಶಕ್ತಿಯ ಮೌಲ್ಯ ಮತ್ತು ಸ್ಥಾನಮಾನವು ದೊಡ್ಡದಾಗಿದೆ. ಇದರಲ್ಲಿ ಇಂದಿನ ಭಾರತ ಯುರೋಪಿನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿದೆ. ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಾದ ಫ್ರಾನ್ಸ್‌ನಿಂದ ರಫೇಲ್, ಅಮೆರಿಕದಿಂದ ಚಿನೂಕ್ ಮತ್ತು ರಷ್ಯಾದಿಂದ ಎಸ್ -400 ಅನ್ನು ಪಡೆಯುವುದು ದೊಡ್ಡ ಯಶಸ್ಸು ಎಂದರೆ ತಪ್ಪಾಗಲ್ಲ. DRDO ನಂತಹ ಸಂಸ್ಥೆಗಳು ಬುಲೆಟ್ ಪ್ರೂಫ್ ಜಾಕೆಟ್‌ಗಳಿಂದ ಲಘು ಯುದ್ಧ ವಿಮಾನಗಳವರೆಗೆ ತಯಾರಿಸುತ್ತಿವೆ.

ದೇಶದ ಮೊದಲ ಟ್ರಾಫಿಕ್ ಸಿಗ್ನಲ್:

1947 ರಲ್ಲಿ ಸ್ವಾತಂತ್ರ್ಯದ ನಂತರ, 1953 ರಲ್ಲಿ ಸ್ವತಂತ್ರ ಭಾರತದ ಬೆಳೆಯುತ್ತಿರುವ ಹೆಜ್ಜೆಗಳು ಆವಿಷ್ಕಾರದ ಹೊಸ ಆಯಾಮಗಳನ್ನು ಸ್ಪರ್ಶಿಸುತ್ತಿದ್ದವು. ಈ ಮಧ್ಯೆ, ದೇಶದಲ್ಲಿ ಮೊದಲ ಟ್ರಾಫಿಕ್ ಲೈಟ್ ಬಂದಿತು. ಇದನ್ನು ದಕ್ಷಿಣ ಭಾರತದಲ್ಲಿ ಪ್ರಾರಂಭಿಸಲಾಯಿತು. ದೇಶದ ಮೊದಲ ಟ್ರಾಫಿಕ್ ಲೈಟ್ ಅನ್ನು 1953 ರಲ್ಲಿ ಮದ್ರಾಸಿನ ಎಗ್ಮೋರ್ ಜಂಕ್ಷನ್‌ನಲ್ಲಿ ಬಳಸಲಾಯಿತು. ಇದಾದ ಸರಿಯಾಗಿ 10 ವರ್ಷಗಳ ನಂತರ ಅಂದರೆ 1963ರಲ್ಲಿ ಬೆಂಗಳೂರಿನ ಕಾರ್ಪೊರೇಷನ್ ವೃತ್ತದಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿತ್ತು. ಇಂದು, ಭಾರತದ ರಸ್ತೆ ಸಾರಿಗೆ ವ್ಯವಸ್ಥೆಯ ಉದಾಹರಣೆಗಳನ್ನು ಅನೇಕ ದೇಶಗಳಲ್ಲಿ ನೀಡಲಾಗುತ್ತಿದೆ. ಭಾರತವು ಈ 74 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಹೆದ್ದಾರಿಗಳನ್ನು ನಿರ್ಮಿಸಿದೆ ಮತ್ತು ಈಗ ಎಕ್ಸ್‌ಪ್ರೆಸ್‌ವೇ ಯುಗವಾಗಿದೆ. ದೇಶದ ಪ್ರಮುಖ ನಗರಗಳ ನಡುವಿನ ಅಂತರ ಕಡಿಮೆಯಾಗಿದೆ. ಪ್ರಯಾಣವು ಮೊದಲಿಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತಿದೆ. ಭಾರತದ ಸಾರಿಗೆ ವ್ಯವಸ್ಥೆಯು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿದೆ. ಸಾರಿಗೆ ಇಲಾಖೆಯ ಲೋಪದೋಷಗಳು ದೂರವಾಗಿವೆ. ಮತ್ತು ದೇಶವು ಪ್ರಗತಿಯ ಪಥದಲ್ಲಿ ವೇಗವಾಗಿ ಸಾಗುತ್ತಿದೆ.

1995 ರಲ್ಲಿ ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡಿತು. ಮೊಟ್ಟಮೊದಲ ಬಾರಿಗೆ ದೇಶದಲ್ಲಿ ಮೊಬೈಲ್ ಫೋನ್ ಬಂದಾಗ. ಭಾರತದಲ್ಲಿ ಮೊದಲ ಮೊಬೈಲ್ ಕರೆಯನ್ನು ಸುಮಾರು ಎರಡೂವರೆ ದಶಕಗಳ ಹಿಂದೆ 31 ಜುಲೈ 1995 ರಂದು ಮಾಡಲಾಯಿತು. ದೇಶದಲ್ಲಿ ಮೊದಲ ಮೊಬೈಲ್ ಕರೆ ಮಾಡಿದ್ದು ಬೇರೆ ಯಾರೂ ಅಲ್ಲ, ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಜ್ಯೋತಿ ಬಸು, ಕೇಂದ್ರ ಟೆಲಿಕಾಂ ಸಚಿವ ಸುಖರಾಮ್ ಅವರಿಗೆ. ಈ ಫೋನ್ ಕರೆ ಕೋಲ್ಕತ್ತಾದ ರೈಟರ್ಸ್ ಬಿಲ್ಡಿಂಗ್‌ನಿಂದ ದೆಹಲಿಯ ಸಂಚಾರ ಭವನಕ್ಕೆ ಸಂಪರ್ಕ ಹೊಂದಿದೆ. ಈ ಕರೆಯೊಂದಿಗೆ ಕೋಲ್ಕತ್ತಾದಲ್ಲಿ ಮೊಬೈಲ್ ಫೋನ್ ಸೇವೆಯನ್ನು ಆರಂಭಿಸಲಾಯಿತು. ದೇಶದ ಮೊದಲ ಮೊಬೈಲ್ ಕರೆಯನ್ನು ಮೋದಿ ಟೆಲ್ಸ್ ಟ್ರಾಮೊಬೈಲ್ ನೆಟ್ ಸೇವೆಯ ಮೂಲಕ ಮಾಡಲಾಗಿದೆ.

ಇದನ್ನೂ ಓದಿ: Salman Rushdie Attacked: ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ಹಲ್ಲೆ

ದೇಶದಲ್ಲಿ ಇಂಟರ್ನೆಟ್ ಸೇವೆ ಪ್ರಾರಂಭ:

ಒಂದೆಡೆ, 1995 ರಲ್ಲಿ ದೇಶದಲ್ಲಿ ಮೊಬೈಲ್ ಫೋನ್‌ಗಳ ಸೌಲಭ್ಯವನ್ನು ಭಾರತೀಯರು ಪಡೆದರೆ, ಇನ್ನೊಂದೆಡೆ, ಈ ವರ್ಷದಿಂದ ಭಾರತಕ್ಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಆಯಾಮ ಸಿಕ್ಕಿತು. ಅದು ಇಂಟರ್ನೆಟ್ ಸೇವೆಯಾಗಿದೆ. ಇಂದಿನ ಜಗತ್ತಿನಲ್ಲಿ, ಇಂಟರ್ನೆಟ್ ಬಹುತೇಕ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದೆ. ಆದರೆ ಭಾರತದಲ್ಲಿ ಇದರ ಅಡಿಪಾಯವನ್ನು 1995 ರಲ್ಲಿ ಹಾಕಲಾಯಿತು. ಭಾರತದಲ್ಲಿ ಇಂಟರ್ನೆಟ್ ಸೇವೆಯನ್ನು 1995 ರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಅಂದರೆ ಆಗಸ್ಟ್ 15 ರಂದು ಪ್ರಾರಂಭಿಸಲಾಯಿತು. ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ VSNL ನ ಗೇಟ್‌ವೇ ಸೇವೆಯೊಂದಿಗೆ ಸಾಮಾನ್ಯ ಜನರಿಗೆ ಇಂಟರ್ನೆಟ್ ಸೌಲಭ್ಯವನ್ನು ಪ್ರಾರಂಭಿಸಲಾಯಿತು. ಇದಾದ ನಂತರ, 1998 ರಲ್ಲಿ, ಸರ್ಕಾರವು ಖಾಸಗಿ ಕಂಪನಿಗಳಿಗೆ ಇಂಟರ್ನೆಟ್ ಸೇವಾ ಕ್ಷೇತ್ರವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು ಮತ್ತು ಇಂದು ಇಡೀ ಜಗತ್ತು ಭಾರತದ ಇಂಟರ್ನೆಟ್ ಕ್ರಾಂತಿಯಿಂದ ಕೂಡಿದೆ ಎಂದರೆ ತಪ್ಪಾಗಲ್ಲ. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News