Sadasya:ಪ್ರೇಕ್ಷಕರನ್ನು ನಕ್ಕು ನಗಿಸಲು ಬರ್ತಿದ್ದಾನೆ `ಸದಸ್ಯ`!
ಕನ್ನಡದಲ್ಲಿ (Kannada Movie) ಹೊಸ ಹೊಸ ಪ್ರತಿಭೆಗಳ ಅನಾವರಣವಾಗ್ತಿದೆ. ಆದ್ರೆ ಕಂಟೆಂಟ್ ಗಟ್ಟಿಯಾಗಿ ಇದ್ದವರು ಮಾತ್ರ ಇಲ್ಲಿ ನೆಲೆಯೂರುತ್ತಾರೆ. ಈಗ ಅದೇ ಗಟ್ಟಿ ಭರವಸೆಯೊಂದಿಗೆ ಹೊಸಬರ ತಂಡವೊಂದು ಎಂಟ್ರಿ ಕೊಡ್ತಿದೆ.
ಕನ್ನಡದಲ್ಲಿ (Kannada Movie) ಹೊಸ ಹೊಸ ಪ್ರತಿಭೆಗಳ ಅನಾವರಣವಾಗ್ತಿದೆ. ಆದ್ರೆ ಕಂಟೆಂಟ್ ಗಟ್ಟಿಯಾಗಿ ಇದ್ದವರು ಮಾತ್ರ ಇಲ್ಲಿ ನೆಲೆಯೂರುತ್ತಾರೆ. ಈಗ ಅದೇ ಗಟ್ಟಿ ಭರವಸೆಯೊಂದಿಗೆ ಹೊಸಬರ ತಂಡವೊಂದು ಎಂಟ್ರಿ ಕೊಡ್ತಿದೆ. ಯುಗಾದಿ (Ugadi) ಹಬ್ಬದ ಪ್ರಯುಕ್ತ ಸಿನಿಮಾದ ಟೈಟಲ್ ನ್ನು ರಿವೀಲ್ ಮಾಡಿದೆ.
ಇದನ್ನೂ ಓದಿ: Halal vs Jhatka Row: ಹಿಂದೂ ಸಂಘಟನೆಗಳ ವಿರುದ್ಧ ಗುಡುಗಿದ ನಟ ಚೇತನ್ ಅಹಿಂಸಾ
ಮೂಲತಃ ಇಂಜಿನಿಯರಿಂಗ್ ಆಗಿರುವ ಶ್ರೀಕಾಂತ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಹೊಸ ಸಿನಿಮಾ ಸದಸ್ಯ (Sadasya). ಈಗಾಗಲೇ ವಾರ್ಡ್ ನಂಬರ್ 11 ಸಿನಿಮಾ ಮೂಲಕ ನಿರ್ದೇಶಕರಾಗಿರುವ ಶ್ರೀಕಾಂತ್ ಕಿರು ಚಿತ್ರಗಳ ಮೂಲಕ ಬಣ್ಣದ ಬದುಕು ಆರಂಭಿಸಿ ಈಗ ಪೂರ್ಣಪ್ರಮಾಣ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸದಸ್ಯ ಶ್ರೀಕಾಂತ್ ನಿರ್ದೇಶನದ ಎರಡನೇ ಸಿನಿಮಾವಾಗಿದ್ದು, ಯುಗಾದಿ ಸ್ಪೆಷಲ್ ಆಗಿ ಚಿತ್ರತಂಡದ ಟೈಟಲ್ ಅನಾವರಣ ಮಾಡಿದೆ ಚಿತ್ರತಂಡ.
ಇದನ್ನೂ ಓದಿ:Golden Star Ganesh: ‘ಬಾನದಾರಿಯಲ್ಲಿ’ ಪಯಣಿಸಲು ಸಜ್ಜಾದ ಗೋಲ್ಡನ್ ಸ್ಟಾರ್ ಗಣೇಶ್!
ಕಾಮಿಡಿ ಹೂರಣ (Comedy) ಒಳಗೊಂಡಿರುವ ಸದಸ್ಯ ಸಿನಿಮಾವನ್ನು ಪ್ರೊಡಕ್ಷನ್ ಫೀನಿಕ್ಸ್ ಎಂಟರ್ ಟೈನ್‌ಮೆಂಟ್ ನಡಿ ಅನಿಲ್ ಕುಮಾರ್ ನಿರ್ಮಾಣ ಮಾಡ್ತಿದ್ದು, ಒಂದಷ್ಟು ಹೊಸ ಪ್ರತಿಭೆಗಳು, ಹಸಿವಿರುವ ಕಲಾವಿದರಿಗೆ ಅವಕಾಶ ನೀಡಲಿದೆ. ಸದ್ಯ ಟೈಟಲ್ ರಿವೀಲ್ ಮಾಡಿದ್ದು, ಮೇ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ. ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲಿಯೇ ರಿವೀಲ್ ಮಾಡಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.