Golden Star Ganesh: ‘ಬಾನದಾರಿಯಲ್ಲಿ’ ಪಯಣಿಸಲು ಸಜ್ಜಾದ ಗೋಲ್ಡನ್ ಸ್ಟಾರ್ ಗಣೇಶ್!

ಪ್ರೀತಂಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಈ ಹಿಂದೆ ‘ಮಳೆಯಲಿ ಜೊತೆಯಲಿ’ , ‘ದಿಲ್ ರಂಗೀಲಾ’ ಹಾಗೂ ‘99’ ಚಿತ್ರಗಳಲ್ಲಿ ನಟಿಸಿದ್ದರು.

Written by - YASHODHA POOJARI | Edited by - Puttaraj K Alur | Last Updated : Apr 2, 2022, 09:21 PM IST
  • ಮತ್ತೆ ತೆರೆಮೇಲೆ ಮೋಡಿ ಮಾಡಲು ಒಂದಾದ ‘ಮಳೆಯಲಿ ಜೊತೆಯಲಿ’ ಜೋಡಿ
  • ಪ್ರೀತಂ ಗುಬ್ಬಿ ‘ಬಾನದಾರಿಯಲ್ಲಿ’ ಪಯಣಿಸಲು ಸಜ್ಜಾದ ಗೋಲ್ಡನ್ ಸ್ಟಾರ್ ಗಣೇಶ್
  • ಯುಗಾದಿ ಹಬ್ಬದ ಶುಭದಿನದಂದು ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ
Golden Star Ganesh: ‘ಬಾನದಾರಿಯಲ್ಲಿ’ ಪಯಣಿಸಲು ಸಜ್ಜಾದ ಗೋಲ್ಡನ್ ಸ್ಟಾರ್ ಗಣೇಶ್! title=
‘ಬಾನದಾರಿಯಲ್ಲಿ’ ಪಯಣಿಸಲು ಸಜ್ಜಾದ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ‘ಮಳೆಯಲಿ ಜೊತೆಯಲಿ’ ಜೊತೆಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಹಾಗೂ ಪ್ರೀತಂ ಗುಬ್ಬಿ ಜೋಡಿ ಈಗ ‘ಬಾನದಾರಿಯಲ್ಲಿ’ ಸಾಗಲಿದೆ. ಇವರಿಬ್ಬರ ಕಾಂಬಿನೇಶನಲ್ಲಿ ಬರುತ್ತಿರುವ ಈ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಎಂದು ಹೆಸರಿಡಲಾಗಿದೆ. ಮೇ ತಿಂಗಳಿನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಯುಗಾದಿ ಹಬ್ಬದ ಶುಭದಿನದಂದು ಪೋಸ್ಟರ್ ಬಿಡುಗಡೆ(Baanadaariyalli Poster Release)ಮಾಡಲಾಗಿದೆ. ಪ್ರೀತಂ ಗುಬ್ಬಿ(Preetham Gubbi)ನಿರ್ದೇಶನದಲ್ಲಿ ಗಣೇಶ್ ಈ ಹಿಂದೆ ‘ಮಳೆಯಲಿ ಜೊತೆಯಲಿ’ , ‘ದಿಲ್ ರಂಗೀಲಾ’ ಹಾಗೂ ‘99’ ಚಿತ್ರಗಳಲ್ಲಿ ನಟಿಸಿದ್ದರು. ಇದು ನಾಲ್ಕನೇ ಚಿತ್ರ. ‘ಬಾನದಾರಿಯಲ್ಲಿ’ಗೆ ‘ನೋಡು ಎಂಥಾ ಚೆಂದ!’ ಎಂಬ ಅಡಿಬರಹವಿದೆ.

ಇದನ್ನೂ ಓದಿ: Ashika Ranganath: ‘ಚುಟು ಚುಟು ಬೆಡಗಿ’ಯ ಈ ವಿಷಯ ಕೇಳಿದ್ರೆ ಶಾಕ್ ಆಗ್ತೀರಾ!

ವಿ.ಹರಿಕೃಷ್ಣ(V Harikrishna) ಸಂಗೀತ ನಿರ್ದೇಶನ, ಪ್ರೀತ ಜಯರಾಂ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

ಡಾ.ಪುನೀತ್ ರಾಜಕುಮಾರ್(Dr. Puneeth Rajkumar) ಅವರು ಹಾಡಿದ್ದ ‘ಬಾನದಾರಿಯಲ್ಲಿ’ ಹಾಡು ಇಂದಿಗೂ, ಎಂದೆಂದಿಗೂ ಜನಪ್ರಿಯ.. ಆ ಹಾಡಿನ ಮೊದಲ ಪದವೇ‌ ಈ ಚಿತ್ರದ ಶೀರ್ಷಿಕೆಯಾಗಿದ್ದು, ಆ ಹಾಡಿನಷ್ಟೇ ಈ ಚಿತ್ರ ಕೂಡ ಯಶಸ್ವಿಯಾಗಲಿ.

ಇದನ್ನೂ ಓದಿ: ಹೋಂ ಮಿನಿಸ್ಟರ್‌ ಟೈಟಲ್‌ಗೂ ರಾಜಕೀಯಕ್ಕೂ ಏನಾದರೂ ಸಂಬಂಧ ಇದೆಯಾ? ಉಪ್ಪಿ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News