Prabhas remuneration for Salaar: ಬಹು ನಿರೀಕ್ಷಿತ 'ಸಲಾರ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಸ್ಫೋಟಕ ಟೀಸರ್‌ನೊಂದಿಗೆ, ಪ್ರಭಾಸ್, ಸಲಾರ್ ಟೀಸರ್ ಮತ್ತು ಪ್ರಶಾಂತ್ ನೀಲ್ ಅವರ ವಿಚಾರಗಳು ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಟ್ರೆಂಡಿಂಗ್ ಆಗುತ್ತಿವೆ. ಈ ಚಿತ್ರದ ಮೂಲಕ ಪ್ರಭಾಸ್ ಬಾಕ್ಸ್ ಆಫೀಸ್ ನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಅವರ ಈ ಚಿತ್ರದ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ವೇಳೆ ಸಲಾರ್‌ ಸಿನಿಮಾಗೆ ಪ್ರಭಾಸ್‌ ಸೇರಿದಂತೆ ಇತರ ತಾರಾಗಣ ಪಡೆದ ಸಂಭಾವನೆ ಮುನ್ನೆಲೆಗೆ ಬಂದಿದೆ. 


COMMERCIAL BREAK
SCROLL TO CONTINUE READING

ಪ್ರಭಾಸ್ ಸಂಭಾವನೆ: ‘ಆದಿಪುರುಷ’ ಚಿತ್ರದ ಪಾತ್ರಕ್ಕೆ ಪ್ರಭಾಸ್ ನೆಗೆಟಿವ್ ರೆಸ್ಪಾನ್ಸ್ ಪಡೆಯುತ್ತಿರುವಾಗಲೇ ‘ಸಲಾರ್’ ಚಿತ್ರಕ್ಕೆ ಪ್ರಭಾಸ್ ಮತ್ತೊಮ್ಮೆ ಭಾರಿ ಸಂಭಾವನೆ ಪಡೆದಿದ್ದಾರೆ. 'ಆದಿಪುರುಷ'ದಲ್ಲಿ 100 ಕೋಟಿ ಸಂಭಾವನೆಯನ್ನು ಪ್ರಭಾಸ್‌ ಪಡೆದಿದ್ದರು. ಇದೀಗ ಸಲಾರ್‌ ಸಿನಿಮಾದಲ್ಲಿ ಪ್ರಭಾಸ್‌ ಆದಾಯ ದುಪ್ಪಟ್ಟಾಗುವ ನಿರೀಕ್ಚೆಯಿದೆ. ಸಲಾರ್‌ ಸಿನಿಮಾಗಾಗಿ ಪ್ರಭಾಸ್ 100 ಕೋಟಿ ಶುಲ್ಕದ ಜೊತೆಗೆ, ಚಿತ್ರದ ಲಾಭದ ಶೇಕಡಾ 10 ರಷ್ಟನ್ನು ಪಡೆಯಲಿದ್ದಾರೆ.


ಇದನ್ನೂ ಓದಿ: Salaar Teaser:ಪ್ರಭಾಸ್ ಪವರ್ ಫುಲ್ ಲುಕ್‌, ಗೂಸ್‌ಬಂಪ್ಸ್‌ ಫಿಕ್ಸ್‌.. ಪ್ರಶಾಂತ್‌ ನೀಲ್‌ ಕಮಾಲ್‌ !


ಶ್ರುತಿ ಹಾಸನ್: ಪ್ರಭಾಸ್ ಜೊತೆ 'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ. ಚಿತ್ರದ ನಾಯಕಿಯಾಗಿರುವ ಶ್ರುತಿ ಹಾಸನ್‌, ಭಾರೀ ಮೊತ್ತವನ್ನು ಚಾರ್ಜ್ ಮಾಡಿದ್ದಾರೆ. ವರದಿಯ ಪ್ರಕಾರ, ಶ್ರುತಿ ಹಾಸನ್ ಸುಮಾರು 8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.


ಪೃಥ್ವಿರಾಜ್ ಸುಕುಮಾರನ್: ಸಲಾರ್ ಚಿತ್ರದ ಟೀಸರ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ವಿಲನ್‌ ಆಗಿದ್ದಾರೆ. ಕುತ್ತಿಗೆಯ ಸುತ್ತ ಚೋಕರ್ ಮತ್ತು ಹಣೆಯ ಮೇಲೆ ಕಪ್ಪು ಟಿಕಾವನ್ನು ಧರಿಸಿ ಸಂಪೂರ್ಣ ವಿಭಿನ್ನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಪೃಥ್ವಿರಾಜ್ ಸುಮಾರು 4 ಕೋಟಿ ಸಂಭಾವನೆ ಪಡೆದಿದ್ದಾರೆ.


ಜಗಪತಿ ಬಾಬು: ಸೌತ್ ಚಿತ್ರರಂಗದಲ್ಲಿ ಜಗಪತಿ ಬಾಬು ಕೂಡ ದೊಡ್ಡ ಹೆಸರು ಮಾಡಿದ್ದಾರೆ. ವರದಿಗಳ ಪ್ರಕಾರ, ಜಗಪತಿ ಬಾಬು ಈ ಚಿತ್ರಕ್ಕಾಗಿ ಸುಮಾರು 4 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ.


ಪ್ರಶಾಂತ್ ನೀಲ್: ಕೆಜಿಎಫ್ ಚಿತ್ರದ ನಂತರ ಪ್ರಶಾಂತ್ ನೀಲ್ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ ಎನ್ನಲಾಗಿತ್ತು. ಕೆಜಿಎಫ್ ಚಿತ್ರಕ್ಕೆ ಪ್ರಶಾಂತ್ ಸುಮಾರು 25 ಕೋಟಿ ಚಾರ್ಜ್ ಮಾಡಿದ್ದರು. ಇದೀಗ ಸಲಾರ್‌ ಚಿತ್ರಕ್ಕೆ 50 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಹಸೆಮಣೆ ಏರುವ ಹೊತ್ತಿನಲ್ಲಿ ಹಾಟ್‌ ಫೋಟೋಸ್‌ ಹಂಚಿಕೊಂಡ ಹರ್ಷಿಕಾ..! ಫೋಟೋಸ್‌ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.