ಮುಂಬೈ: Radhe Release Date - ಸಲ್ಮಾನ್ ಖಾನ್ ಅಭಿನಯದ 'ರಾಧೇ: ಯುವರ್ ಮೋಸ್ಟ ವಾಂಟೆಡ್ ಭಾಯಿ (Radhe)' ಚಿತ್ರ ಬರುವ ಈದ್ ಹಬ್ಬದಂದು ಮಲ್ಟಿ ಫಾರ್ಮ್ಯಾಟ್ ಬಿಡುಗಡೆಗೆ ಸಿದ್ಧವಾಗಿದೆ. ಅಂದರೆ ಈ ಚಿತ್ರ ಚಿತ್ರಮಂದಿರಗಳಲ್ಲಿ ಸೇರಿದಂತೆ 'ಪೆ ಪರ್ ವ್ಯೂ ಫಾರ್ಮ್ಯಾಟ್' ನಲ್ಲಿ OTT ಪ್ಲಾಟ್ಫಾರ್ಮ್ ಮೇಲೂ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲಾ ಪ್ಲಾಟ್ಫಾರ್ಮ್ ಗಳ ಮೇಲೆ ಸುಮಾರು 65 ಮಿಲಿಯನ್ ಗೂ ಅಧಿಕ ವೀಕ್ಷಣೆಗೊಂಡು ಅಬ್ಬರಿಸುತ್ತಿದೆ. ಟ್ರೈಲರ್ ಬಿಡುಗಡೆಯ ಬಳಿಕ ಸಲ್ಮಾನ್ (Salman Khan) ಅಭಿಮಾನಿಗಳು ಸಲ್ಮಾನ ಅವರ ಈ ರೂಪವನ್ನು ನೋಡಲು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ದಿನವೇ ನೀವು ಇದನ್ನು ಚಿತ್ರಮಂದಿರಗಳ ಜೊತೆಗೆ ನಿಮ್ಮ ಮನೆಯಲ್ಲಿಯೇ ಕುಳಿತು ವಿಕ್ಷೀಸಬಹುದಾಗಿದೆ. ಅಂದರೆ, ಮನೆಯಲ್ಲಿಯೇ ಕುಳಿತು ನೀವು ಈ ಚಿತ್ರವನ್ನು ಪೆ ಪರ್ ವ್ಯೂ ಫಾರ್ಮ್ಯಾಟ್ (Pay Per View) ನಲ್ಲಿ ರೂ.249 ಪಾವತಿಸಿ ವಿಕ್ಷೀಸಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ- Radhe Trailer: ಸಲ್ಮಾನ್ ಖಾನ್ ನಟನೆಯ 'ರಾಧೆ' ಸಿನಿಮಾದ ಟ್ರೈಲರ್ ರಿಲೀಸ್! ಇಲ್ಲಿದೆ ನೋಡಿ


ಅಂದರೆ ಸಲ್ಮಾನ್ ಅವರ ಈ ಚಿತ್ರ ಹೈಬ್ರಿಡ್ ಬಿಡುಗಡೆ ಕಾಣುತ್ತಿದೆ. ಅಂದರೆ ಇದು ಚಿತ್ರಮಂದಿರಗಳ ಜೊತೆಗೆ OTT ಪ್ಲಾಟ್ ಫಾರ್ಮ್ (Multi Platform Release)ಗಳ ಮೇಲೂ ಕೂಡ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಆದರೆ, OTT ಪ್ಲಾಟ್ ಫಾರ್ಮ್ ಮೇಲೆ ಈ ಚಿತ್ರ 'ಪೆ ಪರ್ ವ್ಯೂ' ಆಧಾರದ ಮೇಲೆ ಬಿಡುಗಡೆಯಾಗುತ್ತಿದೆ. ಅಂದರೆ, OTT ಪ್ಲಾಟ್ ಫಾರ್ಮ್ ಮೇಲೆ ನೀವು ಹಣವನ್ನು ಪಾವತಿಸಿ ಈ ಚಿತ್ರವನ್ನು ವಿಕ್ಷೀಸಬಹುದು. ಅಂದರೆ, 'ರಾಧೇ' ಮಲ್ಟಿ ಫಾರ್ಮಾಟ್ ಮೇಲೆ ದೊಡ್ಡ ಮಟ್ಟದಲ್ಲಿ  ಬಿಡುಗಡೆಯಾಗುತ್ತಿರುವ  ಮೊದಲ ಭಾರತೀಯ ಚಿತ್ರವಾಗಿರಲಿದೆ. ಈ ಚಿತ್ರ 40ಕ್ಕೂ ಅಧಿಕ ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಜೊತೆಗೆ ಜಿ5 ಮೇಲೆ 'ಪೆ ಪರ್ ವ್ಯೂ' ಸೇವೆಯಾಗಿರುವ ಜಿಪ್ಲೆಕ್ಸ್ ಜೊತೆಗೆ ಎಲ್ಲಾ ಪಮುಖ DTH ಸೇವೆ ಒದಗಿಸುವ ಆಪರೇಟರ್ ಅಂದರೆ ಡಿಶ್, D2H, ಟಾಟಾ ಸ್ಕೈ ಹಾಗೂ ಏರ್ಟೆಲ್ ಡಿಜಿಟಲ್ ಮೇಲೂ ಕೂಡ ವೀಕ್ಷಣೆಗೆ ಲಭ್ಯವಿರಲಿದೆ. ಅಂದರೆ ಸಲ್ಮಾನ್ ಖಾನ್ ಅವರ ಈ ಬಹುನಿರೀಕ್ಷಿತ ಚಿತ್ರವನ್ನು ಮನೆಯಲ್ಲಿಯೇ ಕುಳಿತು ರೂ.249 ಪಾವತಿಸಿ ವಿಕ್ಷೀಸಬಹುದಾಗಿದೆ.


ಇದನ್ನೂ ಓದಿ- ರಾಕಿಭಾಯ್ ಕೆಜಿಎಫ್ 2 ಚಿತ್ರ ರಿಲೀಸ್ ಗೆ ಆವರಿಸಿದೆ ಕರೊನಾ ಗ್ರಹಣ


ಸಲ್ಮಾನ್ ಖಾನ್ ಜೊತೆಗೆ ಈ ಚಿತ್ರದಲ್ಲಿ ದಿಶಾ ಪಾಟ್ನಿ (Disha Patani), ರಣದೀಪ್ ಹುಡ್ದಾ ಹಾಗೂ ಜಾಕಿ ಶ್ರಾಫ್ ಕೂಡ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್, ಸೋಹೈಲ್ ಖಾನ್ ಹಾಗೂ ರೀಲ್ ಲೈಫ್ ಪ್ರೊಡಕ್ಷನ್ ಮೂಲಕ ನಿರ್ಮಾಣಗೊಂಡ ಈ ಚಿತ್ರ ಈ ವರ್ಷದ ಈದ್ ಹಬ್ಬ ಅಂದರೆ ಮೇ 13 ಕ್ಕೆ ತೆರೆಕಾಣುತ್ತಿದೆ.


ಇದನ್ನೂ ಓದಿ- Virat-Anushka Expensive Things : ಕೊಹ್ಲಿ-ಅನುಷ್ಕಾ ಬಳಿ ಇರುವ ದುಬಾರಿ ವಸ್ತುಗಳು ಯಾವವು ಮತ್ತೆ ಎಷ್ಟಿವೆ ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.