Salman Khan Death Threat: `ಏಪ್ರಿಲ್ 30 ರಂದು ಸಲ್ಮಾನ್ ಖಾನ್ ಕತೆ ಮುಗಿಸುತ್ತೇವೆ`
Salman Khan Get Another Death Threat: ಸಲ್ಮಾನ್ ಖಾನ್ ಅವರಿಗೆ ಇದೀಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಸಲ್ಮಾನ್ ಖಾನ್ ಅವರನ್ನು ಮುಗಿಸುವುದಾಗಿ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಬಂದಿದೆ.
Salman Khan Death Threat: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೊಮ್ಮೆ ಜೀವ ಬೆದರಿಕೆ ಬಂದಿದೆ. ಸಲ್ಮಾನ್ ಖಾನ್ ಅವರನ್ನು ಏಪ್ರಿಲ್ 30 ರಂದು ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಿರುವ ವ್ಯಕ್ತಿ ಹೇಳಿದ್ದಾನೆ. ಸಲ್ಮಾನ್ ಖಾನ್ ಅವರಿಗೆ ಈ ಮುಂಚೆಯೂ ಕೊಲೆ ಬೆದರಿಕೆಗಳು ಬಂದಿದ್ದು, ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದೀಗ ಸಲ್ಮಾನ್ ಖಾನ್ ಗೆ ಈ ಬೆದರಿಕೆ ಕರೆ ಜೋಧ್‌ಪುರದಿಂದ ಬಂದಿದೆ. ಇದರಲ್ಲಿ ದಿನಾಂಕದ ಜೊತೆಗೆ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಲಾಗಿದೆ.
ಮಾಹಿತಿ ಪ್ರಕಾರ, ನಿನ್ನೆ ಸಂಜೆ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಈ ಬೆದರಿಕೆ ಕರೆ ಬಂದಿದೆ. ಈ ಹಿಂದೆ ಇಮೇಲ್ ಮೂಲಕ ಬೆದರಿಕೆ ಬಂದಿತ್ತು. ಆದರೆ ಈ ಬಾರಿ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು, ನೇರವಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಈ ಬೆದರಿಕೆ ಹಾಕಲಾಗಿದೆ.
ಇದನ್ನೂ ಓದಿ: Salman Khan: ವೇದಿಕೆ ಮೇಲೆಯೇ ಶರ್ಟ್ ಬಿಚ್ಚಿದ ಸಲ್ಮಾನ್ ಖಾನ್.!
ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ವ್ಯಕ್ತಿ ಏಪ್ರಿಲ್ 30 ರಂದು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಅವನ ಗುರುತಾಗಿ, ಅವನು ತನ್ನ ಹೆಸರನ್ನು ರಾಕಿ ಎಂದು ಹೇಳಿದ್ದಾನೆ. ಬೆದರಿಕೆ ಹಾಕಿದ ವ್ಯಕ್ತಿ ಜೋಧ್‌ಪುರ ನಿವಾಸಿಯಾಗಿದ್ದು, ತನ್ನನ್ನು ಗೋರಕ್ಷಕ ಎಂದು ಕರೆದುಕೊಳ್ಳುತ್ತಿದ್ದಾನೆ.
ಈ ಬೆದರಿಕೆ ಕರೆಯನ್ನು ಪತ್ತೆ ಹಚ್ಚಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಫೋನ್ ಕರೆ ನಿಜವಾಗಿಯೂ ರಾಜಸ್ಥಾನದಿಂದ ಬಂದಿದೆಯೇ ಅಥವಾ ಬೇರೆ ಸ್ಥಳದಿಂದ ಕರೆ ಮಾಡಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರೊಂದಿಗೆ ಫೋನ್ ನಲ್ಲಿ ತನ್ನ ಬಗ್ಗೆ ನೀಡಿರುವ ಮಾಹಿತಿ ಸರಿಯೇ ಇಲ್ಲವೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Guess Who: ಈ ಫೋಟೋದಲ್ಲಿರುವ ಇಬ್ಬರೂ ಸೋದರಿಯರೂ ಇಂದು ಖ್ಯಾತ ನಟಿಯರು.!
ಪೊಲೀಸರು ಬರುತ್ತಿರುವ ಬೆದರಿಕೆಗಳನ್ನು ಲಘುವಾಗಿ ಪರಿಗಣಿಸುವ ಮನಸ್ಥಿತಿಯಲ್ಲಿಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಲ್ಮಾನ್ ಖಾನ್‌ಗೆ ಬೆದರಿಕೆಗಳು ಬಂದಿದ್ದವು. ಆ ಬಳಿಕ ಇಮೇಲ್ ಮೂಲಕವೂ ಬೆದರಿಕೆ ಹಾಕಲಾಗಿತ್ತು. ಬಳಿಕ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದರು. ಈ ಪ್ರಕರಣದಲ್ಲಿ ಗೋಲ್ಡಿ ಬ್ರಾರ್ ಹೆಸರು ಕೂಡ ಕೇಳಿ ಬಂದಿತ್ತು. ಇದರಲ್ಲಿ ಸಲ್ಮಾನ್ ಕ್ಷಮೆ ಯಾಚಿಸುವಂತೆ ಕೇಳಲಾಗಿದ್ದು, ಕ್ಷಮೆ ಯಾಚಿಸದೇ ಇದ್ದಲ್ಲಿ ಅದರ ಪರಿಣಾಮ ಎದುರಿಸಲು ಸಿದ್ಧರಾಗಿರುವಂತೆ ಸೂಚಿಸಲಾಗಿದೆ. ಸದ್ಯ ಸಲ್ಮಾನ್ ಖಾನ್ ಗೆ Y+ ಭದ್ರತೆ ನೀಡಲಾಗಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಇತ್ತೀಚೆಗೆ ಬುಲೆಟ್ ಪ್ರೂಫ್ ಕಾರನ್ನು ಕೂಡ ಸಲ್ಮಾನ್ ಖಾನ್ ಖರೀದಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.