Guess Who: ಈ ಫೋಟೋದಲ್ಲಿರುವ ಇಬ್ಬರೂ ಸೋದರಿಯರೂ ಇಂದು ಖ್ಯಾತ ನಟಿಯರು.!

Bollywood Siblings: ಈ ಚಿತ್ರದಲ್ಲಿ ಇರುವ ಇಬ್ಬರು ಸಹೋದರಿಯರು ಬಾಲಿವುಡ್ ಇಂಡಸ್ಟ್ರಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ. ಅವರಲ್ಲಿ ಒಬ್ಬರು ವರ್ಷಗಳ ಹಿಂದೆ ನಟನೆಯನ್ನು ತೊರೆದರೆ, ಇನ್ನೊಬ್ಬರು ಸೂಪರ್‌ಸ್ಟಾರ್‌ ಆಗಿದ್ದಾರೆ. ನೀವು ಅವರನ್ನು ಯಾರೆಂದು ಗುರುತಿಸಬಹುದೇ?  

Written by - Chetana Devarmani | Last Updated : Apr 11, 2023, 12:19 PM IST
  • ಈ ಇಬ್ಬರೂ ಸೋದರಿಯರೂ ಇಂದು ಖ್ಯಾತ ನಟಿಯರು.!
  • ಈ ಫೋಟೋದಲ್ಲಿರುವ ಖ್ಯಾತ ನಟಿಯರನ್ನು ಗುರುತಿಸುವಿರಾ?
Guess Who: ಈ ಫೋಟೋದಲ್ಲಿರುವ ಇಬ್ಬರೂ ಸೋದರಿಯರೂ ಇಂದು ಖ್ಯಾತ ನಟಿಯರು.! title=
Malaika Arora

Bollywood Celebrities Childhood Pics: ಕೆಲವು ವಿಶೇಷ ಸಂದರ್ಭಗಳಲ್ಲಿ ಖ್ಯಾತನಾಮರು ಸಾಮಾನ್ಯವಾಗಿ ತಮ್ಮ ಥ್ರೋಬ್ಯಾಕ್ ಅಥವಾ ಬಾಲ್ಯದ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಇದನ್ನು ಅವರ ಅಭಿಮಾನಿಗಳು ಕೂಡ ಬಹಳ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಹಲವಾರು ಸೆಲೆಬ್ರಿಟಿಗಳು ತಮ್ಮ ಒಡಹುಟ್ಟಿದವರ ಜೊತೆ ಕೆಲವು ಬಾಲ್ಯದ ಚಿತ್ರಗಳನ್ನು ಆಗಾಗೆ ಹಂಚಿಕೊಳ್ಳುತ್ತಾರೆ. ಈಗ ನೀವು ಮೇಲೆ ನೋಡುತ್ತಿರುವ ಈ ಫೋಟೋದಲ್ಲಿ ಕಂಡುಬರುವ ಸೆಲೆಬ್ರಿಟಿಗಳನ್ನು ನೀವು ಗುರುತಿಸಬಹುದೇ.. ಬಹುಶಃ ಇದು ಸ್ವಲ್ಪ ಕಷ್ಟ.

ಮಲೈಕಾ ಅರೋರಾ, ಅಸಂಖ್ಯಾತ ಬಾಲ್ಯದ ನೆನಪುಗಳನ್ನು ಹೊಂದಿರುವ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಕ್ರೈಂ ಪಾರ್ಟನರ್‌ ಜೊತೆ ಕಾಣಿಸಿಕೊಂಡಿದ್ದಾರೆ. ಅವರ ಸಹೋದರಿ ಅಮೃತಾ ಅರೋರಾ ಜೊತೆಗಿನ ಬಾಲ್ಯದ ಫೋಟೋಗಳನ್ನು ಮಲೈಕಾ ಶೇರ್‌ ಮಾಡಿದ್ದಾರೆ. ಮಲೈಕಾ ಮತ್ತೆ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ, ಸಹೋದರಿಯರಿಬ್ಬರೂ ಹೊಲಿಗೆ ಯಂತ್ರದ ಕೆಳಗೆ ಕುಳಿತು ಕ್ಯಾಮೆರಾಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಎರಡನೇ ಫೋಟೋದಲ್ಲಿ, ಮಲೈಕಾ ಅಮೃತಾ ಬಿಗ್‌ ಸ್ಮೈಲ್‌ ಮಾಡುತ್ತಿದ್ದಾರೆ. ಮೂರನೇ ಚಿತ್ರವನ್ನು ನೋಡುವಾಗ, ನಿಮಗೆ ನಗು ತಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Salman Khan: ವೇದಿಕೆ ಮೇಲೆಯೇ ಶರ್ಟ್‌ ಬಿಚ್ಚಿದ ಸಲ್ಮಾನ್ ಖಾನ್.!

ಮೂರನೆಯ ಚಿತ್ರವು ಅವರ ಹದಿಹರೆಯದ ಸಮಯದ್ದಾಗಿದ್ದು, ಅದರಲ್ಲಿ ಅವರ ಕೇಶವಿನ್ಯಾಸವು ತಮಾಷೆಯಂತೆಯೇ ವಿಚಿತ್ರವಾಗಿದೆ. ಇದನ್ನು ನೋಡಿ ಬಳಕೆದಾರರಿಗೂ ನಗು ತಡೆಯಲಾಗುತ್ತಿಲ್ಲ. ಅದೇ ಸಮಯದಲ್ಲಿ, ಸ್ವತಃ ಮಲೈಕಾ ಕೂಡ ಈ ಹೇರ್ ಸ್ಟೈಲ್ ಅನ್ನು ಗೇಲಿ ಮಾಡುತ್ತಿದ್ದಾರೆ. 

 

 

ಮಲೈಕಾ ಅರೋರಾ ಯಾವಾಗಲೂ ನಟನೆಯಿಂದ ದೂರವಿದ್ದರು, ಆದರೂ ಅವರು ಚಲನಚಿತ್ರಗಳಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ಮಾಡುತ್ತಿದ್ದರು, ಇದರಿಂದಾಗಿ ಅವರು ಸಾಕಷ್ಟು ಹೆಸರು ಮಾಡಿದರು. ಆದರೆ ಅಚ್ಚರಿಯ ವಿಷಯವೆಂದರೆ ನಟನೆಯಿಂದ ದೂರವಿದ್ದರೂ ಮಲೈಕಾ ಇನ್ನೂ ಸೂಪರ್ ಸ್ಟಾರ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಆಕೆಯನ್ನು ಇಂಡಸ್ಟ್ರಿಯಲ್ಲಿ ಸ್ಟೈಲಿಶ್ ದಿವಾ ಎಂದು ಕರೆಯುತ್ತಾರೆ. ಅಮೃತಾ ಬಗ್ಗೆ ಮಾತನಾಡುತ್ತಾ, ಅವರು 2002 ರಲ್ಲಿ ಕಿತ್ನೆ ದೂರ್‌ ಕಿತ್ನೆ ಪಾಸ್ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅದರ ನಂತರ ಅವರು 2015 ರವರೆಗೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆ ಬಳಿಕ ಸಿನಿರಂಗದಿಂದ ದೂರವಾದರು. 

ಇದನ್ನೂ ಓದಿ: ರಾಧಿಕಾ ಪಂಡಿತ್‌ ಅವರ Personal Photographer ಇವರೇ.! ಸಿಕ್ಕಾಪಟ್ಟೆ ಫೇಮಸ್‌ ಈ ವ್ಯಕ್ತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News