Salman Khan: ಸಲ್ಮಾನ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗಿನಿಂದಲೂ ಹಲವು ನಾಯಕಿಯರ ಜೊತೆ ಡೇಟಿಂಗ್‌ ಮಾಡಿದ್ದಾರೆ ಎಂಬ ವರದಿಗಳು ಬಂದಿದ್ದವು. ಅವರಲ್ಲಿ ಐಶ್ವರ್ಯಾ ರೈ ಮತ್ತು ಕತ್ರಿನಾ ಕೈಫ್ ಅವರಂತಹ ಸೂಪರ್ ಸ್ಟಾರ್‌ಗಳು ಇದ್ದಾರೆ. ಆದರೆ ಇದುವರೆಗೂ ಸಲ್ಮಾನ್ ಯಾರನ್ನೂ ಮದುವೆಯಾಗಿಲ್ಲ. ಹಾಗಾಗಿಯೇ ಸಲ್ಲು ಲವ್ ಲೈಫ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ಸಲ್ಮಾನ್ ಯಾರನ್ನು ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಇನ್ನೂ ಊಹಿಸುತ್ತಿದ್ದಾರೆ. ಇದೀಗ ಸಲ್ಮಾನ್ ತಮ್ಮ ಹತ್ತಿರದವರಿಗೆ ಬರೆದಿರುವ ಪತ್ರ ವೈರಲ್ ಆಗಿದ್ದು.. ಈ ಪತ್ರವನ್ನು ಸ್ವತಃ ಸಲ್ಮಾನ್ ಖಾನ್ ಬರೆದಿದ್ದಾರಂತೆ.


ಇದನ್ನೂ ಓದಿ-ಸ್ಟಾರ್‌ ನಟಿ ಅಗ್ಬೇಕು ಅಂದ್ರೆ, ಈ ಮೂವರ ರೂಮ್‌ಗೆ ಹೋಗ್ಬೇಕು : ರಮ್ಯಾಕೃಷ್ಣ ಶಾಕಿಂಗ್‌ ಹೇಳಿಕೆ


ಆದರೆ ಸಲ್ಮಾನ್ ಬರೆದಿರುವ ಈ ಪತ್ರ 34 ವರ್ಷ ಹಳೆಯದು. ಈ ಪತ್ರವನ್ನು ಅವರ ಹತ್ತಿರದವರಿಗಾಗಿ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ.. ಈ ಪತ್ರದಲ್ಲಿ ಐ ಲವ್ ಯೂ.. ನೀವೂ ನನ್ನನ್ನು ಪ್ರೀತಿಸುತ್ತೀರಿ ಎಂದು ಆಶಿಸುತ್ತೇನೆ ಎಂದು ಬರೆದಿದ್ದಾರೆ.


ಆದರೆ ಸಲ್ಮಾನ್ ಈ ಪತ್ರ ಬರೆದಿರುವುದು ಪ್ರೇಮಿಗಾಗಿ ಅಲ್ಲ ಬದಲಾಗಿ ತನ್ನ ಅಭಿಮಾನಿಗಳಿಗಾಗಿ ಎಂದು ಹೇಳಲಾಗಿದೆ. ಸಲ್ಮಾನ್ ಖಾನ್ ಅವರ ಕ್ಲಾಸಿಕ್ ಚಿತ್ರ ಮೈನೆ ಪ್ಯಾರ್ ಕಿಯಾ ದೊಡ್ಡ ಯಶಸ್ಸನ್ನು ಕಂಡಿತ್ತು.. ಈ ಕುರಿತು ಸಲ್ಮಾನ್ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ.. 


ಇದನ್ನೂ ಓದಿ-Aishwarya Rai ಜೊತೆಗೆ ಡೇಟ್ ಮಾಡುತ್ತಿದ್ದಾಗ, ಈ ನಟಿಗೆ ಮದುವೆಗಾಗಿ ಪ್ರಪೋಸ್ ಮಾಡಿದ್ದರಂತೆ Salman Khan!


ಈ ಪತ್ರದಲ್ಲಿ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಮತ್ತು ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು.. ನನ್ನ ಕೈಲಾದಷ್ಟು ಉತ್ತಮ ಸ್ಕ್ರಿಪ್ಟ್‌ಗಾಗಿ ಕೆಲಸ ಮಾಡುತ್ತಿದ್ದೇನೆ. ಏಕೆಂದರೆ ಇನ್ನು ಮುಂದೆ ನಾನು ಮಾಡುವ ಯಾವುದೇ ಸಿನಿಮಾವನ್ನು ಮೈನೆ ಪ್ಯಾರ್ ಕಿಯಾಗೆ ಹೋಲಿಸಲಾಗುತ್ತದೆ.. ಹಾಗಾಗಿ ನನ್ನ 100% ಪ್ರಯತ್ನ ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.


ಪತ್ರದಲ್ಲಿ ಸಲ್ಮಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಉಲ್ಲೇಖಿಸಿದ್ದಾರೆ. 'ನನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಏನೆಂದು ನಿಮಗೆ ಈಗಾಗಲೇ ತಿಳಿದಿದೆ. ಹೀಗೆ ಹೇಳುವ ಮೂಲಕ ಸಲ್ಮಾನ್ ಅಭಿಮಾನಿಗಳ ಮನ ಗೆದ್ದಿದ್ದಾರೆ. 34 ವರ್ಷಗಳ ಹಿಂದೆ ಅವರು ಬರೆದಿರುವ ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.