Salman Khan want be Father : ಬಾಲಿವುಡ್‌ ನಟ ಸಲ್ಮಾನ್ ಖಾನ್ ಮದುವೆ, ಡೇಟಿಂಗ್‌, ಲವ್‌ ಕುರಿತು ಹಲವಾರು ವಿಚಾರಗಳು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಇತ್ತಿಚೀಗೆ ಅವರು ನಟಿ ಪೂಜಾ ಹೆಗ್ಡೆ ಜೊತೆ ಲವ್‌ನಲ್ಲಿದ್ದು, ಇಬ್ಬರು ಮದುವೆಯಾಗ್ತಾರೆ ಎನ್ನುವ ಸುದ್ದಿ ಹಬ್ಬಿತ್ತು ನಂತರ ಪೂಜಾ ಅದಕ್ಕೆ ಪುಲ್‌ ಸ್ಟಾಪ್‌ ಇಟ್ಟಿದ್ದರು. ಇದೀಗ ಸ್ವತಃ ಸಲ್ಮಾನ್‌ ಖಾನ್‌ ತನ್ನ ಜೀವನದ ವ್ಯಯಕ್ತಿಕ ವಿಚಾರಗಳ ಕುರಿತು ಮಾತನಾಡಿದ್ದು, ಚರ್ಚೆಗೆ ಕಾರಣವಾಗುತ್ತಿವೆ.


COMMERCIAL BREAK
SCROLL TO CONTINUE READING

ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್‌ ಭಾಗವಹಿಸಿದ್ದರು. ಅಲ್ಲಿ ಅವರು ತಮ್ಮ ಜೀವನದ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಇವುಗಳ ಪೈಕಿ ಅವರ ಮದುವೆ ವಿಚಾರವು ಒಂದಾಗಿತ್ತು. ನನಗೆ ಮದುವೆಯ ಬಗ್ಗೆ ತಿಳಿದಿಲ್ಲ. ಆದರೆ, ಮಕ್ಕಳ ಬಗ್ಗೆ ಒಮ್ಮೆ ಯೋಚಿಸಿದೆ ಎಂದು ಹೇಳಿದ್ದಾರೆ. ಹೌದು.. ಸಲ್ಮಾನ್ ಖಾನ್ ಅವರು ತಂದೆಯಾಗಲು ಬಯಸಿದ್ದರಂತೆ ಅಲ್ಲದೆ, ದೇಶದ ಕಾನೂನು ಅದಕ್ಕೆ ಅವಕಾಶ ನೀಡದ ಕಾರಣ ಆ ಆಸೆ ಈಡೇರಲಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: ʼಸಮಂತಾʼ ಹಿಂದಿಕ್ಕಿದ ʼಕನ್ನಡತಿ ರಶ್ಮಿಕಾʼ..! ನ್ಯಾಷುನಲ್‌ ಕ್ರಶ್‌ ಈಗ ʼಕೈಗೆಟುಕದ ನಕ್ಷತ್ರʼ


ಸಲ್ಮಾನ್ ಖಾನ್ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಅವರು ತಮ್ಮ ಸಹೋದರಿ ಅರ್ಪಿತಾ ಮಕ್ಕಳೊಂದಿಗಿರುವ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ನಮ್ಮ ತಂದೆ ತಾಯಿಗೆ ಸೊಸೆ ಸಿಗ್ತಾಳೋ ಇಲ್ಲವೋ ಎಂಬುದೇ ಮನೆಯವರಿಗೆ ಗೊತ್ತಿಲ್ಲ ಆದರೆ, ನಾನು ಮಗುವಿನ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ಕಾನೂನು ಅಡ್ಡಿಯಿಂದ ಇದು ಸಾಧ್ಯವಾಲಿಲ್ಲ ಎಂದು ಹೇಳಿದ್ದಾರೆ. ಮಗುವಿಗೆ ತಾಯಿಯ ಅಗತ್ಯವಿಲ್ಲ, ಅವರೇ ಮಕ್ಕಳನ್ನು ತಾಯಿಯಂತೆ ನೋಡಿಕೊಳ್ಳುತ್ತಾರಂತೆ.


ಇನ್ನು ಸಲ್ಲು ಸಿನಿಮಾ ವಿಚಾರಕ್ಕೆ ಬರುವುದಾದ್ರೆ, ಇತ್ತೀಚೆಗೆ ಅವರ ಆಕ್ಷನ್ ಎಂಟರ್ಟೈನರ್ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ಪಾಲಕ್ ತಿವಾರಿ, ಸಿದ್ಧಾರ್ಥ್ ನಿಗಮ್, ವೆಂಕಟೇಶ್ ದಗ್ಗುಬಾಟಿ, ಭೂಮಿಕಾ ಚಾವ್ಲಾ, ರಾಘವ್ ಜುಯಲ್ ಮತ್ತು ಜಾಸ್ಸಿ ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಲ್ಮಾನ್ ಮುಂದಿನ ಆಕ್ಷನ್ ಥ್ರಿಲ್ಲರ್ ಚಿತ್ರ ಟೈಗರ್ 3 ನಲ್ಲಿ ನಟಿ ಕತ್ರಿನಾ ಕೈಫ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. 2023 ರ ದೀಪಾವಳಿಗೆ ಈ ಸಿನಿಮಾ ರಿಲೀಸ್‌ ಆಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.