Rashmika Mandanna instagram Followers : ಕನ್ನಡತಿ ರಶ್ಮಿಕಾ ಮಂದಣ್ಣಗೆ ಈಗ ಭಾರತೀಯ ಸಿನಿಮಾ ಇಂಡ್ರಸ್ಟಿಯಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸಾಲು ಸಾಲು ಸಿನಿಮಾದಲ್ಲಿ ನ್ಯಾಷುನಲ್ ಕ್ರಶ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಅವರು ಮರಾಠಿ ಸಿನಿಮಾವೊಂದರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಧರ್ಮಪತ್ನಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ವರದಿಯಾಗಿತ್ತು. ಆದ್ರೆ, ಅದು ಎಷ್ಟು ಸತ್ಯ ಅಂತ ತಿಳಿದಿಲ್ಲ. ಸದ್ಯ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಗುರುತಿಸಿಕೊಂಡಿರುವ ಚೆಲುವೆ ನಟಿ ಸಮಂತಾ ಅವರನ್ನು ಹಿಂದಿಕ್ಕಿ ಸ್ಟಾರ್ ಪಟ್ಟಕ್ಕೇರುತ್ತಿದ್ದಾರೆ.
ಹೌದು.. ಪ್ಯಾನ್ ಇಂಡಿಯಾ ಹೀರೋಯಿನ್ಗಳ ಸಾಲಿನಲ್ಲಿ ರಶ್ಮಿಕಾ ಟಾಪ್ ಪ್ಲೇಸ್ ನಲ್ಲಿದ್ದಾರೆ. ಇನ್ಸ್ಟಾಗ್ರಾಮ್ ಫಾಲೋವರ್ಸ್ ವಿಷಯದಲ್ಲೂ ಮುಂದಿದ್ದಾರೆ. ಇತ್ತೀಚೆಗೆ ಅವರು 38 ಮಿಲಿಯನ್ ಫಾಲೋವರ್ಸ್ ಗಳಿಸುವ ಮೂಲಕ ಟಾಪ್ ಹೀರೋಯಿನ್ಗಳನ್ನು ಹಿಂದಿಕ್ಕಿದ್ದಾರೆ. ಸಮಂತಾ ಮತ್ತು ಪೂಜಾ ಹೆಗ್ಡೆ ಅವರನ್ನ ರಶ್ಮಿಕಾ ಹಿಂದಿಕ್ಕಿ ನ್ಯಾಷುನಲ್ ಕ್ರಶ್ ಎಂಬುವುದನ್ನು ಸಾಭೀತು ಪಡಿಸಿದ್ದಾರೆ.
ಇದನ್ನೂ ಓದಿ:
ಸದ್ಯ ರಶ್ಮಿಕಾ, ಪೂಜಾ ಹೆಗ್ಡೆ ಮತ್ತು ಸಮಂತಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇವರು ಬಾಲಿವುಡ್ ಯಾವ ಹೀರೋಯಿನ್ಗಳಿಗೇನೂ ಕಮ್ಮಿ ಇಲ್ಲ. ಇವರ ಸಾಲಿನಲ್ಲಿ ಇದೀಗ ನಟಿ ಸಂಯುಕ್ತಾ, ಶ್ರೀಲೀಲಾ ಕೂಡ ಸಾಗಿದ್ದಾರೆ. ಆದ್ರೆ, ಹೊಸಬರ ಎಂಟ್ರಿ ಇಂದ ಕೊಂಚವೂ ರಶ್ಮಿಕಾ ಕ್ರೇಜ್ ಕಮ್ಮಿಯಾಗಿಲ್ಲ. ಅಲ್ಲದೆ, ಅಗ್ರಸ್ಥಾನದಲ್ಲಿರುವ ಪೂಜಾ ಮತ್ತು ಸಮಂತಾ ಅವರನ್ನೂ ಹಿಂದಿಕ್ಕಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಹೊಂದಿದ್ದು, ಟಾಪ್ ಸ್ಥಾನದಲ್ಲಿದ್ದಾರೆ ಕನ್ನಡತಿ ರಶ್ಮಿಕಾ.
ಸಾಮಾಜಿಕ ಮಾಧ್ಯಮ ಅಂದ್ರೆ, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತು ಇನ್ನೂ ಅನೇಕ. ನಟಿಯರು ಹೆಚ್ಚಾಗಿ ಇನ್ಸ್ಟಾಗ್ರಾಮ್ನಲ್ಲಿ ಟೈಮ್ ಸ್ಪೆಂಡ್ ಮಾಡ್ತಾರೆ. ಅಲ್ಲಿ ಅವರು ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಾರೆ. ಅಲ್ಲದೆ, ಇನ್ಸ್ಟಾಗ್ರಾಮ್ನಲ್ಲಿ ಹಿರೋಯಿನ್ಗಳ ಸ್ಟೇಟಸ್ ಹೆಚ್ಚುವುದ ಅವರ ಫಾಲೋವರ್ಸ್ ನಂಬರ್ಗಳಿಂದ. ಇತ್ತೀಚೆಗೆ ರಶ್ಮಿಕಾ ಫಾಲೋವರ್ಸ್ ವಿಚಾರದಲ್ಲಿ ಮುಂದಿದ್ದಾರೆ. ಪೂಜಾ ಹೆಗ್ಡೆ 23.5M, ಸಮಂತಾ 26.4M ಅನುಯಾಯಿಗಳನ್ನು ಹೊಂದಿದ್ದರೆ. ಇವರಿಬ್ಬರನ್ನು ಹಿಂದಿಕಿರುವ ರಶ್ಮಿಕಾ ಬರೋಬ್ಬರಿ 38M ಫಾಲೋವರ್ಸ್ ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.